ವಕ್ಕಲೇರಿಯಲ್ಲಿ ಅದ್ಧೂರಿ ಹೂವಿನ ಕರಗ ಮಹೋತ್ಸವ

KannadaprabhaNewsNetwork |  
Published : May 12, 2024, 01:17 AM IST
೧೧ಕೆಎಲ್‌ಆರ್-೫ಕೋಲಾರ ತಾಲೂಕಿನ ವಕ್ಕಲೇರಿ ಶ್ರೀ ಪ್ರಸನ್ನ ದ್ರೌಪತಾಂಭ ದೇವಿಯ ಹೂವಿನ ಕರಗ ಮಹೋತ್ಸವ ನಡೆಯಿತು. | Kannada Prabha

ಸಾರಾಂಶ

ಕರಗಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು. ಕರಗ ಬರುವ ದಾರಿಯಲ್ಲಿ ಜನಸ್ತೋಮ ತುಂಬಿತ್ತು, ಶನಿವಾರ ಮಧ್ಯಾಹ್ನ ೪ ಗಂಟೆಯ ತನಕ ಕರಗ ಹೊರಲಾಗಿತ್ತು, ಸಂಜೆ ಆಗ್ನಿಕೊಂಡ ಪ್ರವೇಶಿಸಿದ ಕರಗವು ಮಹಾಮಂಗಳಾರತಿಯೊಂದಿಗೆ ಕರಗ ಮುಕ್ತಾಯಗೊಂಡಿತು.

ಕನ್ನಡಪ್ರಭ ವಾರ್ತೆ ಕೋಲಾರ

ತಾಲೂಕಿನ ವಕ್ಕಲೇರಿ ಶ್ರೀ ಪ್ರಸನ್ನ ದ್ರೌಪತಾಂಭ ದೇವಿಯ ೫೦ನೇ ವರ್ಷದ ಹೂವಿನ ಕರಗ ಮಹೋತ್ಸವವು ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಗ್ರಾಮದಲ್ಲಿ ಹೂವಿನ ಕರಗವು ದೇವಾಲಯದಿಂದ ರಾತ್ರಿ ೧೦.೩೦ರ ಸಮಯದಲ್ಲಿ ಹೊರಬರುತ್ತಿದ್ದಂತೆ ಭಕ್ತರೆಲ್ಲರೂ ಹರ್ಷದಿಂದ ನಮಸ್ಕರಿಸಿದರು. ಇದೇ ಪ್ರಥಮ ಬಾರಿಗೆ ವಕ್ಕಲೇರಿಯ ಪೂಜಾರಿ ವಿಜಯಕುಮಾರ್ ಕರಗ ಹೊತ್ತಿದ್ದು ವಿಶೇಷವಾಗಿತ್ತು.

ಕರಗಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು. ಕರಗ ಬರುವ ದಾರಿಯಲ್ಲಿ ಜನಸ್ತೋಮ ತುಂಬಿತ್ತು, ಶನಿವಾರ ಮಧ್ಯಾಹ್ನ ೪ ಗಂಟೆಯ ತನಕ ಕರಗ ಹೊರಲಾಗಿತ್ತು, ಸಂಜೆ ಆಗ್ನಿಕೊಂಡ ಪ್ರವೇಶಿಸಿದ ಕರಗವು ಮಹಾಮಂಗಳಾರತಿಯೊಂದಿಗೆ ಕರಗ ಮುಕ್ತಾಯಗೊಂಡಿತು.

ಹೂವಿನ ಕರಗದ ವಿಶೇಷವಾಗಿ ವಕ್ಕಲೇರಿ ಗ್ರಾಮದ ಪ್ರತಿಯೊಂದು ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು, ವಹ್ನಿಕುಲ ಕ್ಷತ್ರಿಯ ಸಮುದಾಯದವರ ಮನೆ ಮನೆಗಳಲ್ಲಿ ಮತ್ತು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಗ್ರಾಮದ ದೇವರ ಪಲ್ಲಕ್ಕಿಗಳನ್ನು ಸಾಲಾಗಿ ನಿಂತು ಭಕ್ತರು ಕಣ್ಣುಂಬಿಕೊಂಡರು, ರಾತ್ರಿ ರಸಮಂಜರಿ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು.

ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಪ್ರಸನ್ನ ದ್ರೌಪತಾಂಭ ದೇವಾಲಯದಲ್ಲಿ ದೇವರಿಗೆ ಹೂವಿನ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಸಹ ನಡೆಯಿತು.

ಗ್ರಾಮದಲ್ಲಿ ದೀಪಾಲಂಕಾರ ಹಾಗೂ ದೇವರ ಪಲ್ಲಕ್ಕಿ ಉತ್ಸವ, ವಿವಿಧ ದೇವರ ಕೈಂಕರ್ಯಗಳು ನಡೆದವು, ಭಕ್ತಾಧಿಗಳಿಗೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮತ್ತು ಸಿಎಂಆರ್ ಹರೀಶ್ ರಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಸಿಂಡಿಕೇಟ್ ಸದಸ್ಯ ಸಹ್ಯಾದ್ರಿ ಉದಯಕುಮಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ.ಮಂಜುನಾಥ್, ಸೀಸಂದ್ರ ಗೋಪಾಲಗೌಡ, ವೈ.ಶಿವಕುಮಾರ್, ಛತ್ರಕೋಡಿಹಳ್ಳಿ ಮಂಜುನಾಥ್, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ವಕ್ಕಲೇರಿ ರಾಜಪ್ಪ, ಲೋಕೇಶ್, ದೇವಾಲಯದ ಕನ್ವೀನರ್ ಮುನಿರಾಜು, ವಹ್ನಿಕುಲ ಸಮುದಾಯದ ಮುಖಂಡರಾದ ಪಲ್ಲವಿಮಣಿ, ಬಿ.ಎಲ್.ಮುನಿರಾಜು, ಗೌಡರ ನಾರಾಯಣಪ್ಪ, ಪೂಜಾರಿ ಗೋವಿಂದಪ್ಪ, ವೆಂಕಟೇಶ್, ಸಂದೇಶ್, ಗ್ರಾಪಂ ವಿಜಯಲಕ್ಷ್ಮೀ ಮಂಜುನಾಥ್ ಇದ್ದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ