ಕನ್ನಡಪ್ರಭ ವಾರ್ತೆ ಕೆಂಗೇರಿ
ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಮೂರು ದಿನಗಳ ಫುಡ್ ಫೆಸ್ಟಿವಲ್ ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೆಂಗೇರಿ ಹಾಗೂ ಯಶವಂತಪುರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವಿಸಲಾಗಿತು.
ಸಾಧಕರಾದ ಎನ್.ಚಿಕ್ಕವೀರಯ್ಯ (ಶಿಕ್ಷಣ), ರಮೇಶ್ ಪಂಡಿತ್ (ಚಲನಚಿತ್ರ), ಟಿ.ರಾಜರಾಮ್ (ಸಂಗೀತ), ವಿ.ಲಕ್ಷ್ಮಿನಾರಾಯಣ (ಶಿಕ್ಷಣ) ಅವರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಅವರು ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.ಕೆಂಗೇರಿ ಸಂಭ್ರಮ ನಡೆಯುತ್ತಿರುವ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಮಸ್ತಿಯಲ್ಲಿ ತೊಡಗಿದ್ದರು. ಮಕ್ಕಳು ಆಟಿಕೆಗಳೊಂದಿಗೆ ಚಿನ್ನಾಟವಾಡುತ್ತಿದ್ದರೆ, ಗೃಹಿಣಿಯರು ಗೃಹೋಪಯೋಗಿ ವಸ್ತುಗಳು, ಲೈಫ್‌ಸ್ಟೈಲ್ ಮಳಿಗೆಗಳಿಗೆ ತೆರಳಿ ಖರೀದಿಯಲ್ಲಿ ತೊಡಗಿದ್ದರು. ಇನ್ನು ಕೆಲವರು ರಾಜ್ಯವ ವಿವಿಧ ಖಾದ್ಯಗಳನ್ನು ಸವಿದರು.
ಜ.11ರವರೆಗೆ ನಡೆಯಲಿರುವ ಕೆಂಗೇರಿ ಸಂಭ್ರಮದಲ್ಲಿ ಪ್ರತಿ ದಿನವೂ ವಿವಿಧ ಕಲಾವಿದರು ಮನೋರಂಜನೆ ನೀಡಲಿದ್ದಾರೆ. ಕೆಂಗೇರಿ ಜನರಿಗೆ ಈ ಆಹಾರ ಮೇಳದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಮಕ್ಕಳಿಗೆ ಫ್ಯಾಷನ್ ಸ್ಪರ್ಧೆಗಳು. ಮಹಿಳೆಯರಿಗೆ ಅಡುಗೆ ಸ್ಪರ್ಧೆ ಗಳನ್ನು ಆಯೋಜಿಸಲಾಗಿದೆ. ಜ.10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಅಮೃತ ಅಯ್ಯಂಗಾರ್, ನಟ ಪಾವಗಡ ಮಂಜು ಭಾಗವಸಲಿದ್ದಾರೆ.