ಮುಂಡಗೋಡ: ರಾಮನವಮಿ ಪ್ರಯುಕ್ತ ಭಾನುವಾರ ರಾತ್ರಿ ಪಟ್ಟಣದಲ್ಲಿ ತಾಲೂಕು ಶ್ರೀರಾಮಸೇನೆಯಿಂದ ಬೃಹತ್ ಶೋಭಾಯಾತ್ರೆ ಮೆರವಣಿಗೆ ಅತಿ ವಿಜೃಂಭಣೆಯಿಂದ ನಡೆಯಿತು.
ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ, ಜೈ ಜೈ ಶ್ರೀರಾಮ ಎಂಬ ಜಯಘೋಷಗಳು ಮೊಳಗಿದವು. ಮಹಾರಾಷ್ಟ್ರದ ಪ್ರತಿಷ್ಠಿತ ಡಿಜೆ ಹಾಗೂ ಲೈಟಿಂಗ್ ನೋಡುಗರ ಗಮನ ಸೆಳೆಯಿತು. ಡಿಜೆ ಸೌಂಡ್ ಗೆ ಕೇಸರಿ ಶಾಲು ಧರಿಸಿದ್ದ ಯುವಕರು ಹೆಜ್ಜೆ ಹಾಕಿ, ಕುಣಿದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಮಂಜು ಎಚ್.ಪಿ, ಮಾಜಿ ಶಾಸಕ ಎ.ಎಸ್. ಪಾಟೀಲ, ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಮಲ್ಲಿಕಾರ್ಜುನ ಗೌಳಿ, ಮಂಜುನಾಥ ಶೇಟ್, ರವಿ ಹಾವೇರಿ, ಬಾಲು ನಾಯ್ಕ, ಪ್ರಕಾಶ ಬಡಿಗೇರ, ಶಂಕರ ಲಮಾಣಿ, ವಿಶ್ವನಾಥ ನಾಯರ, ಸುರೇಶ ಕಲ್ಲೋಳ್ಳಿ, ವಿನಾಯಕ ರಾಯ್ಕರ, ಸಂಜು ಹರಿಜನ ಸೇರಿದಂತೆ ಸಾವಿರಾರು ಹಿಂದೂ ಪರ ಸಂಘಟನೆ ಕಾವ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.ಮುಂಡಗೋಡ ಠಾಣೆ ಸಿಪಿಐ ರಂಗನಾಥ ನೀಲಮನವರ, ಪಿಎಸೈ ಪರಶುರಾಮ ಮಿರ್ಜಗಿ ಹಾಗೂ ಕ್ರೈಂ ಪಿಎಸೈ, ಹನಮಂತ ಕುಳಗುಂಟಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಮುಂಡಗೋಡದಲ್ಲಿ ಬೃಹತ್ ಶೋಭಾಯಾತ್ರೆ ವಿಜೃಂಬಣೆಯಿಂದ ನಡೆಯಿತು.