ರಿಲೀಸ್‌... ಬಸವೇಶ್ವರರ ಮೂರ್ತಿಯ ಬೃಹತ್ ಮೆರವಣಿಗೆ

KannadaprabhaNewsNetwork |  
Published : May 28, 2024, 01:11 AM IST
ಬಸವ ಉತ್ಸವ ಸಮಿತಿ ವತಿಯಿಂದ ನಡೆದ ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಬೃಹತ್ ಮೆರವಣಿಗೆಗೆ ಯಾದಗಿರಿ ನಗರದ ಗಂಜ್ ವೃತ್ತದ ಬಳಿಯ ಬಸವೇಶ್ವರ ನಾಮಫಲಕಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಬೃಹತ್ ಮೆರವಣಿಗೆಗೆ ಯಾದಗಿರಿ ನಗರದ ಗಂಜ್ ವೃತ್ತದ ಬಳಿಯ ಬಸವೇಶ್ವರ ನಾಮಫಲಕಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಶಾಸಕ ಚೆನ್ನಾರೆಡ್ಡಿ ಪಾಟೀಲ್‌, ವೆಂಕಟರೆಡ್ಡಿ ಮುದ್ನಾಳ ಧ್ವಜ ತೋರಿ ಚಾಲನೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಬಸವ ಉತ್ಸವ ಸಮಿತಿ ವತಿಯಿಂದ ನಡೆದ ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಬೃಹತ್ ಮೆರವಣಿಗೆ ಬಸವ ಸಂಪ್ರದಾಯದಂತೆ ನಗರದ ಗಂಜ್ ವೃತ್ತದ ಬಳಿಯ ಬಸವೇಶ್ವರ ನಾಮಫಲಕಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಈ ವೇಳೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಮಾಜಿ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ಅವರು ಬಸವ ಧ್ವಜ ತೋರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ನಗರದ ಬಸವೇಶ್ವರ ಗಂಜ್ ವೃತ್ತದಿಂದ ಮೈಲಾಪೂರ ಬೇಸ್ ಮಾರ್ಗವಾಗಿ ಗಾಂಧಿವೃತ್ತದಿಂದ ಅಮೃತೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರ, ಚಿದಾನಂದ ಕಾಳೆಬೆಳಗುಂದಿ, ಬಾಬುಗೌಡ ಅಗತೀರ್ಥ, ಸನ್ನಿಗೌಡ ತೂನ್ನೂರು, ಮಹೇಶರಡ್ಡಿ ಮುದ್ನಾಳ, ಮಂಜುಳಾ ಗೂಳಿ, ಅವಿನಾಶ್ ಜಗನ್ನಾಥ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ರಾಕೇಶ್ ಜೈನ, ಅಪ್ಪಣ್ಣ ಜೈನ, ಶರಣುಗೌಡ ಮಾಲಿಪಾಟೀಲ್, ರಮೇಶ್ ದೊಡಮನಿ, ಗೌರಿಶಂಕರ ವಡಿಗೇರ, ಮಲ್ಲಿಕಾರ್ಜುನಗೌಡ ಅನಕಸೂಗುರ, ರಾಜು ಸ್ವಾಮಿ ಅಲಂಪಲ್ಲಿ, ಬಸವರಾಜ ಮೋಟ್ಟನಳ್ಳಿ, ಸುಭಾಷ್ ದೇವದುರ್ಗ, ಭರತ್ ಕುಮಾರ್, ಅರವಿಂದ್ ಕೆಂಭಾವಿ, ಮಂಜುನಾಥ ವಟ್ಟಿ, ಸೂಗು ಚಾಮ ನಾಗರಡ್ಡಿ ಬೋಮರಡ್ಡಿ ಬಿಳಾರ ಸೇರಿದಂತೆ ಅನೇಕ ಬಸವ ಉತ್ಸವ ಸದಸ್ಯರು ಇದ್ದರು. ಬಸವ ಭಕ್ತರಿಗೆ ಶಂಕ್ರಣ್ಣ ಸಾಹು ವಡಗೇರಾ ಅವರು ಪ್ರಸಾದ ವ್ಯವಸ್ಥೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ