ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗ್ರಾಮದ ವಿವಿಧ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಮೂಲಕ ಬೃಹತ್ ಮೆರವಣಿಗೆ ನಡೆಯಿತು. ಡೊಳ್ಳು, ಭಾಜಾ, ಭಜಂತ್ರಿ ಸೇರಿದಂತೆ ವಿವಿಧ ವಾದ್ಯಮೇಳಗಳಿದ್ದವು.
ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಪೂಜಾರಿ ಮಾತನಾಡಿ, ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವ ಉದ್ದೇಶದಿಂದ ಜಾಗೃತಿ ಜಾಥಾ ನಡೆಯುತ್ತಿದೆ. ಸಂವಿಧಾನದ ಮಹತ್ವ ಹಾಗೂ ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಕುರಿತಂತೆ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಕುರಿತಂತೆ ರಾಜ್ಯದ ನಾಗರಿಕರು, ಮಹಿಳೆಯರು, ಯುವ ಜನರಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ವಿಭಿನ್ನ ಕಾರ್ಯಕ್ರಮ ಇದಾಗಿದೆ ಎಂದರು.ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಿದ್ದು ಕೊಣ್ಣೂರ, ವಿದ್ಯಾಧರ ಸವದಿ, ಡಾ. ನಾಗರಹಳ್ಳಿ, ಡಾ. ಗಡ್ಡದೇವರ ಮಠ, ಅಭಿವೃದ್ಧಿ ಅಧಿಕಾರಿ ಸಂಗಮೇಶ ಸೊರಗಾಂವಿ, ತುಕಾರಾಮ ಬನ್ನೂರ, ಅಮರ ಕಾಂಬಳೆ, ರಾಹುಲ್ ಭಂಡಾರಿ, ಮುರಿಗೆಪ್ಪ ಪಡಸಾಲಿ, ಬಸವರಾಜ ದೊಡಮನಿ, ಶಿವಲಿಂಗ ಗೊಂಬಿಗುಡ್ಡ, ರುಕ್ಸಾನಾ ಸಂತಿ, ಮಲ್ಲಪ್ಪ ತಂಬಾಕು, ಉಮಾ ಖವಟಗೊಪ್ಪ, ವಿಠ್ಠಲ ಸವದಿ ಸೇರಿದಂತೆ ಅನೇಕರಿದ್ದರು.