ಕನ್ನಡಪ್ರಭ ವಾರ್ತೆ ವಿಜಯಪುರ
ಆರ್‌ಸಿಎಚ್ ಅಧಿಕಾರಿ ಡಾ.ಕೆ.ಡಿ.ಗುಂಡಬಾವಡಿ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿ, ಆರೋಗ್ಯವೇ ಜೀವನದ ದೊಡ್ಡ ಭಾಗ್ಯ, ಆರೋಗ್ಯವಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಸಾಧನೆಯ ಮೈಲುಗಲ್ಲು ಕ್ರಮಿಸಲು ಆರೋಗ್ಯದ ಮೆಟ್ಟಿಲು ಅತ್ಯಂತ ಅವಶ್ಯ. ವಿದ್ಯಾರ್ಥಿ-ಯುವಜನರು ಇತ್ತೀಚಿಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿಲ್ಲ. ಕುರಕಲು ತಿನಿಸುಗಳಿಗೆ ಅಂಟಿಕೊಂಡು ಉತ್ತಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಆಹಾರ ಪದ್ಧತಿ, ವ್ಯಾಯಾಮ, ಯೋಗ, ಸ್ವಚ್ಛತೆಯಂತಹ ಶಿಸ್ತುಬದ್ಧ ಜೀವನಶೈಲಿ ಮೂಲಕ ಉತ್ತಮ ಆರೋಗ್ಯ ಕಂಡುಕೊಳ್ಳಬೇಕು ಎಂದರು.
ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿ ಸೇರಿದಂತೆ ೩೪ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಹದಿಹರೆಯದವರ ಆರೋಗ್ಯದಲ್ಲಿ ಆಗುವಂತಹ ಬದಲಾವಣೆ, ಅದಕ್ಕೆ ನಿವಾರಣೆಯ ಕ್ರಮಗಳ ಬಗ್ಗೆ ಸಹ ವಿವರವಾದ ಮಾಹಿತಿಯನ್ನು ತಜ್ಞ ವೈದ್ಯರು ಸಮಗ್ರವಾಗಿ ವಿವರಿಸಿದರು.ಮನೋರೋಗ ತಜ್ಞ ವೈದ್ಯ ಡಾ.ಮಂಜುನಾಥ ಮಸಳಿ ಮನೋರೋಗದ ಬಗ್ಗೆ ಸ್ವವಿವರವಾದ ಮಾಹಿತಿ ನೀಡಿದರು. ಡಾ.ಸುಮಾ ಮಮದಾಪೂರ, ಸಾವಿತ್ರಿ ಹಿಪ್ಪರಗಿ, ಡಾ.ಮಂಜುನಾಥ ಪೋಳ, ಸಂತೋಷ ರಾಠೋಡ ಮೊದಲಾದವರು ಉಪಸ್ಥಿತರಿದ್ದರು.