ಕನ್ನಡಪ್ರಭ ವಾರ್ತೆ ರಾಯಚೂರು
ದ್ವಿಚಕ್ರ, ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳು ಎಚ್ಎಸ್ಆರ್‌ಪಿ ಪಡೆಯಬೇಕು.
https//transport.karnataka.gov.in ಅಥವ www.siam.in ಗೆ ಭೇಟಿ ನೀಡಿ ಮತ್ತು Book HSRP ಕ್ಲಿಕ್ ಮಾಡಿ ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಬೇಕು. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ ಎಚ್ಎಸ್ಆರ್‌ಪಿ ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳ ಆಯ್ಕೆ ಮಾಡಬೇಕು. ಬಳಿಕ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಚ್ಎಸ್ಆರ್‌ಪಿ ಅಳವಡಿಕೆಯ ದಿನಾಂಕ ಮತ್ತು ಸಮಯ ಆಯ್ಕೆ ಮಾಡಿ. ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್ ಸಂಸ್ಥೆಗೆ ಭೇಟಿ ನೀಡಿ, ವಾಹನ ಮಾಲೀಕರ ಕಚೇರಿ ಆವರಣ/ ಮನೆಯ ಸ್ಥಳದಲ್ಲಿ ಎಚ್ಎಸ್ಆರ್‌ಪಿ ಅಳವಡಿಕೆಗಾಗಿ ಆಯ್ಕೆ ಮಾಡಬಹುದು.ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್/ ಐಎನ್‌ಡಿ ಮಾರ್ಕ್/ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೀಯ ಎಚ್ಎಸ್ಆರ್‌ಪಿ ಒಂದೇ ರೀತಿಯ ಪ್ಲೇಟ್ /ಸ್ಮಾರ್ಟ್ ನಂಬರ್ ಪ್ಲೇಟ್ ಅಳವಡಿಸುವಂತಿಲ್ಲ. ಅವು ಎಚ್ಎಸ್ಆರ್‌ಪಿ ಫಲಕಗಳಾಗಿರುವುದಿಲ್ಲ.