)
ಕನ್ನಡಪ್ರಭ ವಾರ್ತೆ ಬೆಂಗಳೂರುಹೊಸ ವರ್ಷವನ್ನು ಸಿಲಿಕಾನ್ ಸಿಟಿಯ ಜನತೆ ಸಂಭ್ರಮ, ಸಡಗರದೊಂದಿಗೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಪಾರ್ಟಿ ಮಾಡುವ ಮೂಲಕ ಭರ್ಜರಿಯಾಗಿ ಸ್ವಾಗತಿಸಿದರು.
ಬುಧವಾರ ಸಂಜೆಯಿಂದಲೇ ನಗರದೆಲ್ಲೆಡೆ ಪಾರ್ಟಿಗಳು ಆರಂಭವಾಗಿದ್ದು, ರಾತ್ರಿಯಿಡೀ ಯುವ ಜನರು ಕುಣಿದು ಕುಪ್ಪಳಿಸಿದರು. ಹೋಟೆಲ್, ಪಬ್, ರೆಸಾರ್ಟ್, ಕ್ಲಬ್, ಕನ್ವೆಷನ್ ಹಾಲ್, ಪಾರ್ಟಿ ಹಾಲ್, ತೋಟಗಳಲ್ಲಿ ಭರ್ಜರಿ ನ್ಯೂ ಇಯರ್ ಪಾರ್ಟಿಗಳು ನಡೆದವು. ಓಪನ್ ಏರ್ ಕನ್ಸರ್ಟ್, ಸೆಲೆಬ್ರಿಟಿ ಡಿ.ಜೆ ಸಂಗೀತ, ಫ್ಯಾಷನ್ ಶೋ, ಬೆಲ್ಲಿ ಡ್ಯಾನ್ಸ್, ಸೆಲೆಬ್ರಿಟಿ ಮೀಟ್ ಅಪ್, ಆಡಿಯೋ ವಿಷ್ಯುವಲ್ ಶೋ, ಮಿಡ್‌ನೈಟ್ ಫೈರ್ ಶೋ, ಲೈವ್ ಫುಡ್ ಆ್ಯಂಡ್ ಬಾರ್ ಸ್ಟಾಲ್‌ಗಳು ಹೊಸ ವರ್ಷದ ಆಕರ್ಷಣೆಯಾಗಿದ್ದವು. ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ಕೋರಮಂಗಲ, ಇಂದಿರಾ ನಗರ, ಹಲಸೂರು, ವೈಟ್‌ಫೀಲ್ಡ್, ಜೆ.ಪಿ. ನಗರ, ನಾಗವಾರ, ಯಲಹಂಕ, ಹೆಬ್ಬಾಳ, ರಾಜರಾಜೇಶ್ವರ ನಗರ ಸೇರಿದಂತೆ ನಗರದಲ್ಲೆಡೆ ರಾತ್ರಿ 12 ಗಂಟೆಗೆ ರಾಕೆಟ್ ಪಟಾಕಿಗಳು ಆಕಾಶದಲ್ಲಿ ಚಿತ್ತಾರ ಬಿಡಿಸಿದವು. ಪಟಾಕಿ ಪ್ರದರ್ಶನ ಕಣ್ಮನ ಸೆಳೆಯಿತು. ಯುವಕರು ಕಾರು, ಬೈಕ್‌ಗಳಲ್ಲಿ ಓಡಾಡುತ್ತಾ ನ್ಯೂ ಇಯರ್ ಎಂದು ಕೇಕೆ ಹಾಕುತ್ತಾ ಓಡಾಡಿದರು.ಎಂ.ಜಿ. ರಸ್ತೆಗೆ ಜನಸಾಗರ
ಹೊಸ ವರ್ಷವನ್ನು ಆಚರಿಸಲು ನಗರದ ನಾನಾ ಭಾಗಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಸುತ್ತಲಿನ ಬಾರ್, ಪಬ್, ರೆಸ್ಟೋರೆಂಟ್‌ಗಳು ತುಂಬಿ ತುಳುಕುತ್ತಿದ್ದವು. ರಾತ್ರಿ 1 ಗಂಟೆವರೆಗೂ ಹೋಟೆಲ್‌ಗಳಲ್ಲಿ ವ್ಯವಹಾರಕ್ಕೆ ಅವಕಾಶ ನೀಡಿದ್ದ ಕಾರಣ ತಡರಾತ್ರಿವರೆಗೂ ಜನರು ಪಾರ್ಟಿ ಮಾಡಿದರು.ಸ್ಟಾರ್ ಹೊಟೇಲ್, ಪಬ್‌ಗಳಲ್ಲಿ ಸ್ಲಾಟ್ ಸೋಲ್ಡ್‌ಔಟ್
ನಗರದಲ್ಲಿನ 200ಕ್ಕೂ ಹೆಚ್ಚು ಸ್ಟಾರ್ ಹೋಟೆಲ್‌ಗಳಲ್ಲಿ ಡಿ.ಜೆ ಮ್ಯೂಸಿಕ್, ನೃತ್ಯ, ಅನ್‌ಲಿಮಿಟೆಡ್ ಡ್ರಿಂಕ್ಸ್ ಪಾರ್ಟಿಗಳು ಜರುಗಿದವು. ಸೆಕೆಂಡ್ಸ್ ಕೌಂಟ್‌ಡೌನ್ ಆರಂಭಿಸಿ ರಾತ್ರಿ 12 ಗಂಟೆ ಆಗುತ್ತಿದ್ದಂತೆ ಪಾರ್ಟಿ ಮಾಡುವವರು ಹುಚ್ಚೆದ್ದು ಕುಣಿದರು. ಜಗಮಗಿಸುವ ವಿದ್ಯುತ್ ಬೆಳಕಿನ ಆಟ, ಲೇಸರ್ ಶೋಗಳು ಪಾರ್ಟಿಯನ್ನು ಮತ್ತಷ್ಟು ರಂಗಾಗಿಸಿದವು. ಕೆಲವು ಹೋಟೆಲ್‌ಗಳಲ್ಲಿ ಟಿಕೆಟ್‌ಗಳು ಮೊದಲೇ ಮಾರಾಟವಾಗಿದ್ದವು.ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ಅನೇಕ ದೇವಸ್ಥಾನಗಳು ತಡರಾತ್ರಿವರೆಗೂ ತೆರೆದಿದ್ದವು. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ಹೊಸ ವರ್ಷವನ್ನು ಭಕ್ತಿ ಭಾವದೊಂದಿಗೆ ಸ್ವಾಗತಿಸಿದರು.