ಕನ್ನಡಫ್ರಭ ವಾರ್ತೆ ತಾಂಬಾಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಹಸಿರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂಬ ಜಯಘೋಷದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ ೫೦ರ ನಿಮಿತ್ತ ಸಂಚರಿಸುತ್ತಿರುವ ಕರ್ನಾಟಕದ ಕನ್ನಡ ರಥಕ್ಕೆ ತಾಂಬಾ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ರೈತರು ಹಾಗೂ ಶಿಕ್ಷಕರು ಎತ್ತಿನ ಗಾಡಿಯ ಮೇಲೆ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವ, ಮಹಾತ್ಮ ಗಾಂಧೀಜಿ, ಡಾ.ಅಂಬೇಡ್ಕರ್, ಸಿದ್ದೇಶ್ವರ ಶ್ರೀಗಳ ವೇಷಭೂಷಣದಲ್ಲಿ ಮಕ್ಕಳು ಪಾಲ್ಗೊಂಡು ಮೆರವಣಿಗೆಗೆ ಕಳೆ ತಂದರು. ಈ ವೇಳೆ ನೂರಾರು ಶಿಕ್ಷಕರು ಭಾಗಿಯಾಗಿದ್ದರು. ಕರವೇ ಮುಖಂಡ ಶಿವರಾಜ ಕೆಂಗನಾಳ ಹಾಗೂ ವಿದ್ಯಾರ್ಥಿ ಶ್ರೇಯಾ ಸರಸಂಬಿ ಮಾತನಾಡಿದರು.
ಈ ವೇಳೆ ಇಂಡಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಅಪ್ಪಣ್ಣ ಕಲ್ಲೂರ, ರಜಾಕ ಚಿಕ್ಕಅಗಸಿ, ರಾಚಪ್ಪ ಗಳೆದ, ಪ್ರಕಾಶ ಮುಂಜಿ, ರಾಜು ಗಂಗನಳ್ಳಿ, ಪರಸರಾಮ ಬಿಸನಾಳ, ಟಿ.ಎಸ್.ಗೀರಿಗೌಡರ, ಎಸ್.ಡಿ.ಬಂಟನೂರ, ಬಸು ಅವಟಿ, ಎ.ಆರ್.ಮಾಶ್ಯಾಳ, ಎ.ಆರ್.ದೊಡಮನಿ, ರಾಮಚಂದ್ರ ದೊಡಮನಿ, ಎಂ.ಎಂ. ವಾಲೀಕಾರ, ಎಸ್.ಆರ್. ನಡಗಡ್ಡಿ, ಅಡಿವೆಪ್ಪ ಸರಸಂಬಿ, ಶ್ರೀಧರ ಉಕ್ಕಲಿ, ಮಾಸಿಮ್ ವಾಲೀಕಾರ, ಅಹ್ಮದ ವಾಲೀಕಾರ, ಪಿ.ವಿ.ಬಳಗಾನೂರ, ಹಣಮಂತ ಮಾಳಗೊಂಡ. ಬೌರಮ್ಮ ಡೊಣ್ಣಿ, ಸಾತಿರವ್ವ ಸಕ್ರಿ, ಬೌರಮ್ಮ ಯಳಮೇಲಿ, ಕನ್ಯಾಕುಮಾರಿ ಜುಮನಾಳ, ಆನಂದ ಕಂಬಾರ, ಶಾಂತಾ ಬೆಳ್ಳುಂಡಿ, ಶಶಿಕಲಾ ಪ್ಯಾಟಿ, ಅಮೋಘಸಿದ್ದ ಮಾಶ್ಯಾಳ, ವಸರಾಯ ದೊಡ್ಡಮನಿ, ಬಸವರಾಜ ಗುಂಡಳ್ಳಿ, ಗೂಳಪ್ಪ ಗೊಬ್ಬೂರ, ಮುಂತಾದವರು ಉಪಸ್ಥಿತರಿದ್ದರು.---
ಕೋಟ್ಕನ್ನಡ ನಮ್ಮೆಲ್ಲರ ಉಸಿರು. ಕನ್ನಡ ಸಾಹಿತ್ಯ ನಮ್ಮೆಲ್ಲರಿಗೂ ಅನ್ನ ನೀಡುವುದಾಗಿದೆ. ತಾಯಿ ಭಾಷೆ, ವ್ಯವಹಾರ ಭಾಷೆ, ಆಡಳಿತ ಭಾಷೆ, ಕನ್ನಡವಾಗಿರುವುದರಿಂದ ನಾವೆಲ್ಲರೂ ಕನ್ನಡವನ್ನು ಕಡ್ಡಾಯವಾಗಿ ಅರಿಯಬೇಕು.ಜನರು ಇಂಗ್ಲಿಷ್ ಶಾಲೆಗಳಿಗೆ ಕಳಿಸುವ ವ್ಯಾಮೋಹದಿಂದ ಹೊರಬರಬೇಕು.
-ಹಾಸಿಂಪೀರ ವಾಲೀಕಾರ ಜಿಲ್ಲಾ ಕಸಾಪ ಅಧ್ಯಕ್ಷ