ಕನ್ನಡಪ್ರಭ ವಾರ್ತೆ ಚಿಕ್ಕೋಡಿ ದೈಹಿಕ ಆರೋಗ್ಯ ರಕ್ಷಣೆಯಲ್ಲಿ ದಂತಾರೋಗ್ಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಮನುಷ್ಯನ ದೈಹಿಕ ಆರೋಗ್ಯ ಸದೃಢವಾಗಿರಲು ಹಲ್ಲುಗಳು ಸದೃಢವಾಗಿರಬೇಕು. ಆರೋಗ್ಯ ಪೂರ್ಣ ಹಲ್ಲುಗಳು ಭವಿಷ್ಯದಲ್ಲಿ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡಬಲ್ಲವು ಎಂದು ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ದಂತ ವೈದ್ಯ ಪ್ರಶಾಂತ.ವಿ.ಕೆ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ದೈಹಿಕ ಆರೋಗ್ಯ ರಕ್ಷಣೆಯಲ್ಲಿ ದಂತಾರೋಗ್ಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಮನುಷ್ಯನ ದೈಹಿಕ ಆರೋಗ್ಯ ಸದೃಢವಾಗಿರಲು ಹಲ್ಲುಗಳು ಸದೃಢವಾಗಿರಬೇಕು. ಆರೋಗ್ಯ ಪೂರ್ಣ ಹಲ್ಲುಗಳು ಭವಿಷ್ಯದಲ್ಲಿ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡಬಲ್ಲವು ಎಂದು ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ದಂತ ವೈದ್ಯ ಪ್ರಶಾಂತ.ವಿ.ಕೆ ಹೇಳಿದರು.ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮೌಖಿಕ ಆರೋಗ್ಯ ಜಾಗೃತಿ ಹಾಗೂ ತಂಬಾಕು ಸೇವನೆಯಿಂದ ಮನುಷ್ಯ ಆರೋಗ್ಯದ ಮೇಲೆ ಆಗುವ ಹಾನಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಆಹಾರದಲ್ಲಿ ತರಕಾರಿಗಳು, ಸೊಪ್ಪುಗಳು, ಹಣ್ಣುಗಳು ಹಾಗೂ ಸಿರಿಧಾನ್ಯಗಳನ್ನು ಬಳಸಬೇಕು. ವಿದ್ಯಾರ್ಥಿಗಳಿಗೆ ಹಲ್ಲುಗಳನ್ನು ಹೇಗೆ ಉಜ್ಜಬೇಕೆಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಆಹಾರ ಸೇವಿಸಿದ ನಂತರ ನೀರಿನಲ್ಲಿ ಬಾಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ಮುಂಜಾನೆ ಹಾಗೂ ರಾತ್ರಿ ಎರಡು ಸಾರಿ ಹಲ್ಲುಜ್ಜಬೇಕು. ದುಶ್ಚಟಗಳಿಂದ ದೂರವಾಗಿ ಆರೋಗ್ಯವೇ ಭಾಗ್ಯ ಎನ್ನುವಂತೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಈ ಉಚಿತ ದಂತ ತಪಾಸಣಾ ಶಿಬಿರದಲ್ಲಿ ಮಹಾವಿದ್ಯಾಲಯದ 530ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಂತ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ದಂತ ಮಹಾವಿದ್ಯಾಲಯದ ಡಾ.ಮಹಾಂತೇಶ ಸಿದ್ದಿಭಾವಿ ಹಾಗೂ ದಂತ ವೈದ್ಯ ವಿದ್ಯಾರ್ಥಿಗಳು, ಪದವಿ ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ, ಪದವಿಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ, ಉಪ ಪ್ರಾಚಾರ್ಯ ಸುಧೀರ ಕೋಟಿವಾಲೆ, ರಾಜೇಶ ನಾಯಕ, ಮಹೇಶ ಮದಬಾಂವಿ, ಸಿದ್ದಣ್ಣ ನಾಯಿಕ, ಮಲ್ಲಿಕಾರ್ಜುನ ಜರಳಿ, ರಾಕೇಶ ಮಗದುಮ ಉಪಸ್ಥಿತರಿದ್ದರು.