ಕನ್ನಡಪ್ರಭವಾರ್ತೆ ತಿಪಟೂರು
ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನ ಶ್ರೀಮದ್ ರಂಭಾಪುರಿ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ಉಪನ್ಯಾಸ ಹಾಗೂ ವಚನ ಗಾಯನ ಸ್ವರ್ಥೆ ಉದ್ಘಾಟಿಸಿ ಅವರು ಮಾತನಾಡಿದರು.
ನಾವುಗಳು ದೂರದ ದುಬೈನಲ್ಲಿ ವಾಸವಾಗಿದ್ದರೂ ಕನ್ನಡ ನಾಡು, ನುಡಿ ಮತ್ತು ಶರಣ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ದುಬೈ ಕನ್ನಡ ಸಂಘ ನಿರಂತರವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಎಸಿಪಿ ಲೋಕೇಶ್ವರ್ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಸರಳವಾದ, ಜನಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ವಚನಗಳು ರಚನೆಯಾಗಿದ್ದು, ಶರಣರು ಭಕ್ತಿ ಪಂಥಕ್ಕೆ ಸೇರಿದವರಾಗಿದ್ದರೂ ಕಾಯಕನಿಷ್ಠರಾಗಿ ನುಡಿದಂತೆ ನಡೆದವರು, ನಡೆದಂತೆ ನುಡಿದವರು ಎಂದರು. ಶರಣ ಸಂಸ್ಕೃತಿ ಪ್ರಸಾರ ವಿಷಯದ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಶಿವಗಂಗಪ್ಪ 12ನೇ ಶತಮಾನದಲ್ಲಿಯೇ ಶರಣರು ಸಮಸಮಾಜ ನಿರ್ಮಾಣಕ್ಕೆ ಸ್ವಯಂ ಮಾದರಿಯಾಗಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣುವ ಮಾನವೀಯ ಚಿಂತನೆ ಶರಣ ಸಂಸ್ಕೃತಿಯ ಎಂದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ ಬಹುಮಾನ ವಿತರಿಸಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಆರ್.ಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯುಕ್ತ ಕಾರ್ಯದರ್ಶಿ ಎಚ್.ಎಸ್.ಮಂಜಪ್ಪ, ಎಚ್.ನಂದೀಶಪ್ಪ, ಕಾತ್ಯಾಯಿನಿ. ಎ.ಗಂಗಾಧರ್, ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮರುಳಪ್ಪ, ದತ್ತಿದಾನಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ನಿವೃತ್ತ ಕಂದಾಯಾಧಿಕಾರಿ ಬಸವರಾಜು, ಸೋಮಶೇಖರ್, ರಾಜಶೇಖರಯ್ಯ, ಕೆ.ಎಸ್.ಸದಾಶಿವಯ್ಯ, ರಾಜಶೇಖರ್ ನವೀನ್, ಆಶಾ, ಹೆಚ್.ಎಸ್.ಜಗದೀಶಯ್ಯ ಶಾಲಾ ಸಿಬ್ಬಂದಿ, ರಾಜಶೇಖರಯ್ಯ ನೊಣವಿನಕೆರೆ, ಹೋಬಳಿ ಅಧ್ಯಕ್ಷ ಸಚ್ಚಿದಾನಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.