ಮಹರ್ಷಿ ವಾಲ್ಮೀಕಿಯಿಂದ ಮನುಕುಲಕ್ಕೆ ಉತ್ತಮ ಸಂದೇಶ

KannadaprabhaNewsNetwork |  
Published : Oct 19, 2024, 12:25 AM IST
. ಮುಂಡರಗಿಯಲ್ಲಿ ಗುರುವಾರ ತಾಲೂಕಾ ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ರಾಮಾಯಣ ಮಹಾಗ್ರಂಥದಲ್ಲಿ ಮನುಷ್ಯನ ಹುಟ್ಟಿನಿಂದ ಅಂತ್ಯದವರೆಗೂ ಬದುಕಿಗೆ ಅಗತ್ಯವಿರುವ ಸಂದೇಶ ಅದರಲ್ಲಿ ತಿಳಿಸಿಕೊಟ್ಟಿದ್ದಾರೆ

ಮುಂಡರಗಿ: ಮಹರ್ಷಿ ವಾಲ್ಮೀಕಿ 2400 ಶ್ಲೋಕಗಳಿರುವ ರಾಮಾಯಣ ಮಹಾಗ್ರಂಥ ರಚಿಸಿ ವಿಶ್ವಪ್ರಸಿದ್ದಿ ಹೊಂದಿದ್ದಾರೆ. ಅವರು ಇಡೀ ಮನುಕುಲಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ತಹಸೀಲ್ದಾರ್‌ ಎರ್ರೀಸ್ವಾಮಿ ಪಿ.ಎಸ್. ಹೇಳಿದರು.

ಅವರು ತಹಸೀಲ್ದಾರ್‌ ಕಚೇರಿ ಸಭಾ ಭವನದಲ್ಲಿ ತಾಲೂಕಾಡಳಿತದ ವತಿಯಿಂದ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಮಾಯಣ ಮಹಾಗ್ರಂಥದಲ್ಲಿ ಮನುಷ್ಯನ ಹುಟ್ಟಿನಿಂದ ಅಂತ್ಯದವರೆಗೂ ಬದುಕಿಗೆ ಅಗತ್ಯವಿರುವ ಸಂದೇಶ ಅದರಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ಮಹಾಗ್ರಂಥ ಎಲ್ಲರೂ ಓದಿ ಅರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಮುಂದಿನ ಪೀಳಿಗೆಗೆ ಅವರ ತತ್ವಾದರ್ಶ ಪರಿಚಯಿಸುವ ಕಾರ್ಯವಾಗಬೇಕು ಎಂದರು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಎಫ್. ಈಟಿ, ವಿಶ್ರಾಂತ ಶಿಕ್ಷಕ ಎಚ್.ಡಿ. ಪೂಜಾರ ಸೇರಿದಂತೆ ಅನೇಕರು ಮಾತನಾಡಿದರು. ಮೈಲಾರಪ್ಪ ಕಲಕೇರಿ, ರಾಮಣ್ಣ ಕೋಳಿ, ಪ್ರಕಾಶ ಹಲವಾಗಲಿ, ಕವಿತಾ ನಾಯಕ, ಸುರೇಶ ಮಾಗಡಿ, ವೆಂಕಟೇಶ ಬಂಡೆಣ್ಣವರ, ಶ್ರೀನಿವಾಸ ಕೊರ್ಲಗಟ್ಟಿ, ಗಣೇಶ ಭರಮಕ್ಕನವರ, ಕನಕಪ್ಪ ಕಾತರಕಿ, ರಾಜಾಭಕ್ಷಿ ಬೆಟಗೇರಿ, ಮಂಜುನಾಥ ಮುಧೋಳ, ಕಳಕಪ್ಪ ಜಲ್ಲಿಗೇರಿ, ಲಕ್ಷ್ಮಣ ತಗಡಿಮನಿ, ಚಂದ್ರು ಪೂಜಾರ, ಸೋಮಣ್ಣ ಹೈತಾಪೂರ, ಅಶೋಕ ಚೂರಿ, ಮಾರುತಿ ನಾಗರಳ್ಳಿ, ಸಿಪಿಐ ಮಂಜುನಾಥ ಕುಸುಗಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಶ್ರೀಕಾಂತ ಅರಹುಣಸಿ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಣಾ ಸೋರಗಾಂವಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ