ಕನ್ನಡ ಸಾಂಸ್ಕೃತಿಕ ಸಂಸ್ಥೆಯಿಂದ ಕುವೆಂಪುರವರ ೧೨೦ನೇ ಜನ್ಮದಿನಾಚರಣೆ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಎಂದೂಮರೆಯಲಾಗದ ಅಮೋಘ ಸಾಹಿತ್ಯ ಸೇವೆಯನ್ನು ನೀಡಿದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಪ್ಪ ಪುಟ್ಟಪ್ಪನವರ ೧೨೦ನೇ ಜನ್ಮದಿನದಂದು ನಾವೆಲ್ಲರೂ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಯಾಗಿ ಉಳಿಸಿ, ಬೆಳೆಸುವ ಸಂಕಲ್ಪ ಮಾಡೋಣವೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಕರೆ ನೀಡಿದರು.
ಚಳ್ಳಕೆರೆ ತಾಲೂಕಿನ ವಿಶೇಷವೆಂದರೆ ಕುವೆಂಪುರವರ ಸಾಹಿತ್ಯದ ಕೊಡುಗೆಯಲ್ಲಿ ಅವರ ಗುರು ತಳುಕಿನ ವೆಂಕಣಯ್ಯನವರ ಸಾಹಿತ್ಯ ಸೇವೆಯೂ ಅಪಾರವಾಗಿದೆ. ಇಂತಹ ಸಾಹಿತ್ಯದ ಇತಿಹಾಸವನ್ನು ಹೊಂದಿರುವ ತಾಲೂಕಿನಲ್ಲಿ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿದ್ಯಾಮಣ್ಣ, ಕೆಪಿಸಿಸಿ ಕರಕುಶಲ ಪರಿಷತ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಭಿ.ಫರೀದ್‌ಖಾನ್, ಪಗಡಲಬಂಡೆನಾಗೇಂದ್ರಪ್ಪ, ಒನಕೆ ಓಬವ್ವ ವೇದಿಕೆ ಅಧ್ಯಕ್ಷ ಮಾರುತಿ, ಕವಿಯತ್ರಿ ಶಬ್ರಿನಮಹಮ್ಮದ್ ಆಲಿ, ಎಚ್.ಲಂಕಪ್ಪ, ಬನಶ್ರೀ ಮಂಜುಳಮ್ಮ, ದುಗ್ಗಾವರ ತಿಪ್ಪೇಸ್ವಾಮಿ, ರವಿವರ್ಮ ಮುಂತಾದವರು ಉಪಸ್ಥಿತರಿದ್ದರು.