ಕನ್ನಡಪ್ರಭ ವಾರ್ತೆ ಚನ್ನಗಿರಿ
ತುಮ್ಕೋಸ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಫೆಬ್ರವರಿ 9ರಂದು ನಡೆದು, ಅದೇ ದಿನ ಸಂಜೆ ಯಿಂದ ಮತಗಳ ಏಣಿಕೆ ಕಾರ್ಯ ನಡೆದಿತ್ತು. ಆದರೆ ನ್ಯಾಯಾಲಯ ಆದೇಶದಂತೆ ಫಲಿತಾಂಶ ಘೋಷಣೆ ಮಾಡಿರಲಿಲ್ಲ.
ಈಗ ಫಲಿತಾಂಶ ಘೋಷಣೆ ಮಾಡುವಂತೆ ನ್ಯಾಯಾಲಯ ಆದೇಶ ಬಂದಿದೆ. ಆದಕಾರಣ ಸೋಮವಾರ ಚುನಾವಣಾಧಿಕಾರಿ ಎಸ್.ಮಂಜುಳಾ ಸಂಸ್ಥೆ ಸಭಾಂಗಣದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸದಸ್ಯರ ಸಮ್ಮುಖ ಫಲಿತಾಂಶ ಘೋಷಣೆ ಮಾಡಿದರು.ಸಹಾಯಕ ಚುನಾವಣಾಧಿಕಾರಿ ಜಗದೀಶ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಧು ಸೇರಿದಂತೆ ಸಂಸ್ಥೆ ಎಲ್ಲ ನೂತನ ನಿರ್ದೇಶಕರು, ಕಚೇರಿ ಸಿಬ್ಬಂದಿ ಹಾಜರಿದ್ದರು.
ಬಾಕ್ಸ್ ತುಮ್ಕೋಸ್ ಸಂಸ್ಥೆ ಆಡಳಿತ ಮಂಡಳಿಯಲ್ಲಿ 15 ನಿರ್ದೇಶಕರ ಸ್ಥಾನಗಳಿಗೆ ಫೆ.9ರಂದು ನಡೆದ ಚುನಾವಣೆಯಲ್ಲಿ ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ನೇತೃತ್ವದ ತಂಡದಿಂದ ಸ್ಪರ್ಧಿಸಿದ್ದ 15 ಸ್ಥಾನಗಳಲ್ಲಿ 15 ಸ್ಥಾನಗಳಲ್ಲಿಯೂ ಜಯ ಗಳಿಸುವ ಮೂಲಕ ತುಮ್ಕೋಸ್ ಸಂಸ್ಥೆ ಅಧಿಕಾರ ಹಿಡಿದಿದ್ದಾರೆ.
ತುಮ್ಕೋಸ್ ಆರಂಭಗೊಂಡು 41 ವರ್ಷಗಳ ಇತಿಹಾಸದಲ್ಲಿಯೇ ಒಂದೇ ಗುಂಪಿನ 15 ಆಡಳಿತ ಮಂಡಳಿ ನಿರ್ದೇಶಕರು ಗೆಲುವು ಸಾಧಿಸುವುದು ಪ್ರಥಮವಾಗಿದೆ.
ತುಮ್ಕೋಸ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಜಯಗಳಿಸಿದ ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಅವರ ತಂಡ ಜಯಗಳಿಸಿದ್ದು, ಚುನಾವಣಾಧಿಕಾರಿ ಎಸ್.ಮಂಜುಳಾ ಹೂ ಗುಚ್ಚ ನೀಡಿ ಅಭಿನಂದಿಸಿದರು.