ಅಂಗಡಿಯಲ್ಲಿದ್ದ ₹2.5 ಲಕ್ಷ ಮೌಲ್ಯದ ವಸ್ತುಗಳು ಹಾಗೂ ₹30 ಸಾವಿರ ನಗದು ಸುಟ್ಟು ಬೂದಿಯಾಗಿದೆ ಎಂದು ಅಂದಾಜಿಸಲಾಗಿದೆ.
ಡಂಬಳ: ಇಲ್ಲಿಗೆ ಸಮೀಪದ ಜಂತ್ಲಿ ಶಿರೂರು ಗ್ರಾಮದಲ್ಲಿ ಗುರುವಾರ ತಡರಾತ್ರಿ ದಿನಸಿ ಅಂಗಡಿಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಗ್ರಾಮದ ಲಕ್ಷ್ಮವ್ವ ಕಟ್ಟಿಮನಿ ಅವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ದೀಪ ಹಚ್ಚಿ ಇಟ್ಟಿದ್ದ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಅನುಮಾನ ವ್ಯಕ್ತವಾಗಿದೆ. ಕೆಲವೇ ಕ್ಷಣಗಳಲ್ಲಿ ಅಂಗಡಿಯನ್ನು ಸಂಪೂರ್ಣವಾಗಿ ಆವರಿಸಿ ಹೊತ್ತಿ ಉರಿದಿದೆ. ಅಂಗಡಿಯಲ್ಲಿದ್ದ ₹2.5 ಲಕ್ಷ ಮೌಲ್ಯದ ವಸ್ತುಗಳು ಹಾಗೂ ₹30 ಸಾವಿರ ನಗದು ಸುಟ್ಟು ಬೂದಿಯಾಗಿದೆ ಎಂದು ಅಂದಾಜಿಸಲಾಗಿದೆ.ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ನಂತರ ಮುಂಡರಗಿ ಪೊಲೀಸ್ ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯ ಮಾಡಿದರು. ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್., ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮಾಧಿಕಾರಿ ಕರಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಗ್ರಾಪಂ ಮಾಜಿ ಉಪಾಧ್ಯಕ್ಷ ರವಿ ದೊಡ್ಡಮನಿ, ಮಾಜಿ ಸದಸ್ಯ ಸಂಗನಗೌಡ ಪಾಟೀಲ್, ಗ್ರಾಮ ಸಹಾಯಕರಾದ ಸಿದ್ದಮ್ಮ ಮಹೇಶ್ ಮಾಯಮ್ಮನವರ, ನಾರಾಯಣ ಹರಿಣಶಿಕಾರಿ, ಮಾರುತಿ ಹರಿಣಶಿಕಾರಿ, ಮುತ್ತಪ್ಪ ಹುಯಿಲಗೋಳ ಹಾಗೂ ಗ್ರಾಮದ ಮುಖಂಡರು ಇದ್ದರು.
ಪರಿಹಾರ ಕೊಡಿ: ಸಾಲ ಮಾಡಿ ದಿನಸಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತಂದು ಹಾಕಿದ್ದೀವಿ. ಅಂಗಡಿ ಬೆಂಕಿ ಹತ್ತಿ ನಮ್ಮ ಜೀವನ ಬಹಳ ತೊಂದರಿ ಆಗೈತಿ. ಕುಟುಂಬ ನಡೆಸುವುದು ಬಹಳ ಕಷ್ಟ ಐತಿ. ಸರ್ಕಾರದಿಂದ ಏನಾದರೂ ಮಾಡಿ ಜಲ್ದಿ ಪರಿಹಾರ ಕೊಡಸಿ ಪುಣ್ಯಾ ಕಟ್ಟಿಕೊಳ್ರಿ ಎಂದು ಅಂಗಡಿ ಮಾಲೀಕರಾದ ಲಕ್ಷ್ಮವ್ವ ಕಟ್ಟಿಮನಿ ಮನವಿ ಮಾಡಿದರು.ಇಂದು ಹೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಜತೆ ಸಂವಾದ
ನರಗುಂದ: ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಏ. 18ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 4.30ರ ವರೆಗೆ ಕಾರ್ಯ ಮತ್ತು ಪಾಲನಾ ಉಪವಿಭಾಗೀಯ ಕಚೇರಿ ಮಟ್ಟದಲ್ಲಿ ಗ್ರಾಹಕರ ಜತೆ ಸಂವಾದ ಸಭೆ ಜರುಗಲಿದೆ. ತಾಲೂಕಿನ ಗ್ರಾಹಕರು ಕುಂದುಕೊರತೆಗಳಿದ್ದರೆ ಸಭೆಯಲ್ಲಿ ಭಾಗವಹಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದು ಹೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.