ಫೋಟೋ-17ಎಂವೈಎಸ್ 56------ಕನ್ನಡಪ್ರಭ ವಾರ್ತೆ ಟಿ. ನರಸೀಪುರಜಾತಿ-ಧರ್ಮದ ಬೇಧವಿಲ್ಲದೆ ಸಮಾನತೆಯ ಸಮಾಜ ನಿರ್ಮಿಸಲು ಹೋರಾಡಿದ ಬಸವಣ್ಣನವರ ತತ್ವಗಳು ಇಂದಿಗೂ ಪ್ರಸ್ತುತ. ಅವರು ನೀಡಿದ ಸಂದೇಶಗಳು ನಾವು ವಿಶ್ವಭ್ರಾತೃತ್ವದ ದಾರಿಗೆ ನಡೆಯಲು ದಿಕ್ಕು ತೋರಿಸುತ್ತವೆ ಎಂದು ಅರೆ ಬೊಮ್ಮನಹಳ್ಳಿ ಪಾರಮಾರ್ಥಿಕ ಮಠದ ಪೀಠಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.ತಾಲೂಕಿನ ಹಲವಾರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆಗಳನ್ನು ತಂದವರು ಬಸವಣ್ಣನವರು. ಕಾಯಕವೇ ಕೈಲಾಸ ಎಂದು ಕಲಿಸಿಕೊಟ್ಟ ವಿಶ್ವ ಗುರು ಬಸವಣ್ಣನವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ನಮಗೆಲ್ಲರಿಗೂ ಪಾಠ, ಬದುಕಿಗೆ ದಾರಿಯಾಗಿದೆ ಎಂದರು.ಮುಡುಕನಪುರ ಹಲವಾರ ಮಠದ ಶ್ರೀ ಷಡಕ್ಷರ ದೇಶೀಕೇಂದ್ರ ಸ್ವಾಮಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ, ಅಸ್ಪೃಶ್ಯತೆ, ಜಾತೀಯತೆ, ಸ್ತ್ರೀ ಅಸಮಾನತೆಯ ಕತ್ತಲೆ ಯನ್ನು ದೂರ ಮಾಡಿದ್ದರು. ಅವರ ಕಲ್ಯಾಣ ರಾಜ್ಯ ಇಂದಿಗೂ ಆದರ್ಶವಾಗಿದೆ ಎಂದು ತಿಳಿಸಿದರು.ಎಂ.ಎಲ್. ಹುಂಡಿ ಮಠದ ಗೌರಿಶಂಕರ ಸ್ವಾಮೀಜಿ, ಕಳ್ಳೀಪುರ ಮಠದ ಗುರುಪಾದ ಶಿವಾಚಾರ್ಯ ಸ್ವಾಮಿ, ನೆರಗ್ಯಾತನಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಸ್.ಎಂ.ಆರ್. ಪ್ರಕಾಶ್, ಬಸವ ಕೇಂದ್ರದ ಅಧ್ಯಕ್ಷ ಪರಮೇಶ್ ಪಟೇಲ್, ಸುಗಂಧರಾಜು, ವಕೀಲ ಪರಮೇಶ್, ಕೆಇಬಿ ಸಿದ್ದಲಿಂಗಸ್ವಾಮಿ , ಪ್ರಕಾಶ್, ತೊಂಟೇಶ್, ಶೇಖರಪ್ಪ, ಮಹದೇವಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಶಿವಮಲ್ಲಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿ, ನಂಜುಂಡಸ್ವಾಮಿ, ಚಂದ್ರಧರ, ಶಿವಕುಮಾರ ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಇದ್ದರು.