ಗಡಿಯಾರ ಕಂಬ ಬಳಿ ಕಳ್ಳರ ಗುಂಪು: ಬೆಚ್ಚಿದ ಜನ

KannadaprabhaNewsNetwork |  
Published : Mar 19, 2025, 12:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ನಗರದ ಗಡಿಯಾರ ಕಂಬ ಸಮೀಪ ತಡರಾತ್ರಿ ವೇಳೆ ನಾಲ್ವರು ಕಳ್ಳರು ಬಟ್ಟೆ ಅಂಗಡಿಯೊಂದರಲ್ಲಿ ಸುಮಾರು ₹30 ಸಾವಿರ ಕಳ‍ವು ಮಾಡಿ, ಉಳಿದ ಅಂಗಡಿ, ಮನೆಗಳ ಪ್ರದೇಶದಲ್ಲಿ ಸುತ್ತಾಡಿದ್ಧಾರೆ. ಸಿಸಿ ಕ್ಯಾಮೆರಾಗಳ ಹಾಳುಗೆಡವಿ ಹೋಗಿದ್ದಾರೆ.

ದಾವಣಗೆರೆ: ನಗರದ ಗಡಿಯಾರ ಕಂಬ ಸಮೀಪ ತಡರಾತ್ರಿ ವೇಳೆ ನಾಲ್ವರು ಕಳ್ಳರು ಬಟ್ಟೆ ಅಂಗಡಿಯೊಂದರಲ್ಲಿ ಸುಮಾರು ₹30 ಸಾವಿರ ಕಳ‍ವು ಮಾಡಿ, ಉಳಿದ ಅಂಗಡಿ, ಮನೆಗಳ ಪ್ರದೇಶದಲ್ಲಿ ಸುತ್ತಾಡಿದ್ಧಾರೆ. ಸಿಸಿ ಕ್ಯಾಮೆರಾಗಳ ಹಾಳುಗೆಡವಿ ಹೋಗಿದ್ದಾರೆ.

ವಿಶ್ವಾಸ್ ಜ್ಯುಯಲರ್ಸ್, ಕುಮಾರ ಬಟ್ಟೆ ಅಂಗಡಿ, ಸಂತೋಷ ಜ್ಯುಯಲರ್ಸ್, ಪಾಂಡುರಂಗ ಜ್ಯುಯಲರ್ಸ್ ಕಟ್ಟಡಗಳ ಮೇಲೆ ನಾಲ್ವರು ಕಳ್ಳರು ಸುತ್ತಾಡಿ, ಸಿಸಿ ಕ್ಯಾಮೆರಾ ತಿರುಗಿಸಿ, ಮತ್ತೆ ಕೆಲವು ಕಡೆ ಸಿಸಿ ಕ್ಯಾಮೆರಾಗಳನ್ನು ಹಾಳುಗೆಡವಿದ್ದಾರೆ. ಇದರಿಂದ ವ್ಯಾಪಾರಸ್ಥರು, ನಿವಾಸಿಗಳಲ್ಲಿ ಭಯ ತೀವ್ರಗೊಂಡಿದೆ.

ಚಿನ್ನಾಭರಣ, ಬಟ್ಟೆ ಅಂಗಡಿ, ಕೋ-ಆಪ್ ಬ್ಯಾಂಕ್‌ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ಕೆಲವು ಚಿನ್ನಾಭರಣ ಅಂಗಡಿ, ಬಟ್ಟೆ ಅಂಗಡಿಗಳು, ಇತರೆ ವ್ಯಾಪಾರಿ ಮಳಿಗೆಗಳು ಇವೆ. ಮತ್ತೆ ಕೆಲವರು ಅಂಗಡಿ ಕೆಳಗೆ ಇದ್ದು, ಮನೆಗಳನ್ನು ಮೇಲೆ ಕಟ್ಟಿಕೊಂಡು ಅಲ್ಲಿಯೇ ವಾಸಿಸುತ್ತಿದ್ದಾರೆ. ಕಳ್ಳರ ನಡೆ ಪೊಲೀಸ್ ಇಲಾಖೆಗೆ ನಿದ್ದೆಗೆಡಿಸಿದೆ.

ನಾಲ್ವರು ಕಳ್ಳರ ಪೈಕಿ ಕೆಲವರ ಮುಖ ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ. ಬಸವ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಲ್ಳಬೇಕು. ಸೂಕ್ತ ರಕ್ಷಣೆ, ಭದ್ರತೆ ಒದಗಿಸಿ, ನೆಮ್ಮದಿಯ ವಾತಾವರಣ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

- - - -(ಫೋಟೋ ಬರಲಿವೆ):

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ