ಮನೋ ದೃಢತೆ ಸಿಗುವ ಹವ್ಯಾಸದಿಮದ ಸಂತೋಷದ ಜೀವನ: ಜಗದೀಶ್‌ ಜೋಡುಬೀಟಿ

KannadaprabhaNewsNetwork |  
Published : Nov 05, 2023, 01:15 AM IST
ಚಿತ್ರ : 4ಎಂಡಿಕೆ2 : ಅಂತರ್‌ಶಾಲಾ ಸ್ಪರ್ಧೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಅರುವತ್ತೊಕ್ಲು ಸರ್ವದೈವತಾ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಜಿಲ್ಲಾಮಟ್ಟದ ಅಂತರ್ ಶಾಲೆ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಓದು ಅಂಕಗಳಿಕೆಗಷ್ಟೇ ಸೀಮಿತವಾಗದೆ ಮನೋ ನೆಮ್ಮದಿ, ಮನೋ ದೃಢತೆ ಸಿಗುವ ಹವ್ಯಾಸವನ್ನು ಬೆಳೆಸಿಕೊಂಡಾಗ ಸಂಭ್ರಮ, ಸಂತೋಷದ ಜೀವನ ನಡೆಸಬಹುದು ಎಂದು ಕವಿ, ಸಾಹಿತಿ ಜಗದೀಶ್ ಜೋಡುಬೀಟಿ ತಿಳಿಸಿದರು.ಅರುವತ್ತೊಕ್ಲು ಸರ್ವದೈವತಾ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಜಿಲ್ಲಾಮಟ್ಟದ ಅಂತರ್ ಶಾಲೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ತನ್ನ ಆತ್ಮಶಕ್ತಿಯನ್ನು ಅರಿತುಕೊಳ್ಳಲಾಗದಷ್ಟು ನಿಶಕ್ತಿಯಾಗಿದ್ದಾನೆ. ಕೇವಲ ಪರೀಕ್ಷೆಗಳಿಗಾಗಿ ತೊಡಗಿಸಿಕೊಳ್ಳುವ ಅಂಕದ ಓದಿನಿಂದ ಈ ವ್ಯವಸ್ಥೆ ರೂಪಗೊಳ್ಳುತ್ತಿದೆ. ಹೀಗಾಗಿ ಉನ್ನತ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದರೂ ಆತ್ಮಹತ್ಯೆಗೆ ಶರಣಾಗುವುದನ್ನು ಕಾಣುತ್ತಿದ್ದೇವೆ ಎಂದರು.

ಓದುವ ಹವ್ಯಾಸದ ಜತೆಗೆ ಕ್ರೀಡೆ, ಸಂಸ್ಕೃತಿ, ಸಾಹಿತ್ಯ ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಬದುಕಲು ಬೇಕಾದ ದೃಢತೆಯನ್ನು ಕಲ್ಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಹೊರಗೆಡವಲು ಉತ್ತಮ ವೇದಿಕೆ ಅವಶ್ಯಕತೆ ಇದೆ. ಅಂತಹ ವೇದಿಕೆಯನ್ನು ಅರುವತ್ತೂಕ್ಲು ಸರ್ವದೈವತ ಶಾಲೆ ಸೃಷ್ಟಿಸುತ್ತಿದೆ. ಜಾತ್ಯತೀತವಾಗಿ ನಿಂತು ಅಕ್ಷರ ಬಿತ್ತುವುದರ ಜತೆಗೆ ಈ ನೆಲದ ಕಲೆ, ಸಾಹಿತ್ಯ, ಕ್ರೀಡೆ, ಸಂಸೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯುಸುತ್ತಿದೆ ಎಂದು ಹೇಳಿದರು.ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳಿಗೂ ವಿದ್ಯೆಯ ಜೊತೆಗೆ ಬದುಕುವ ಕಲೆಯನ್ನು ತಿಳಿಸಿಕೊಡಬೇಕೆಂಬ ನಿಟ್ಟಿನಲ್ಲಿ ವಿದ್ಯಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಈ ನೆಲೆಯಲ್ಲಿ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾಟ ಆಯೋಜಿಸಿದೆ. ಪ್ರತಿಯೊಬ್ಬ ಮಕ್ಕಳಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇದೆ ಅದನ್ನ ಹೊರ ತರಬೇಕು ಎಂಬ ಉದ್ದೇಶದೊಂದಿಗೆ ಪ್ರತಿ ಶಿಕ್ಷಕರು ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ಪ್ರೌಢಶಾಲೆಯ ಮುಖ್ಯಶಿಕ್ಷಕ ಪೊನ್ನಿಮಾಡ ಪ್ರದೀಪ್ ಮಾತನಾಡಿ, ಕ್ರೀಡೆ, ಕಲೆ, ಸಂಗೀತ, ಸಾಹಿತ್ಯ ಚಟುವಟಿಕೆಯಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ವರ್ಷವೂ ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮನೆಯಪಂಡ ಶೀಲಾ ಬೊಪ್ಪಣ್ಣ ಮಾತನಾಡಿ, ಈ ದೇಶದ ಭವಿಷ್ಯ ವಿದ್ಯಾರ್ಥಿಗಳು. ಅವರಲ್ಲಿರುವ ವಿವಿಧ ಕಲಾತ್ಮಕಗಳನ್ನು ಹೊರತಂದು ವೇದಿಕೆ ನಿರ್ಮಿಸುವುದು ಉದ್ದೇಶ. ಈ ರೀತಿಯಿಂದ ಓದುವ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಮತ್ತು ಮಕ್ಕಳ ಭೌತಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಬಲ್ಲದು ಎಂದು ಹೇಳಿದರು.

ಸಂಸ್ಥೆಯ ಶಿಕ್ಷಕರು ವಿವಿಧ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ
ನಾಳೆ ಸಿದ್ದರಾಮಯ್ಯ ಬಜೆಟ್‌ : ವಲಯವಾರು ನಿರೀಕ್ಷೆಗಳೇನು?