ಕಾಡಾನೆ ದಾಳಿ: ಕುರಿಗಾಹಿ ಬಲಿ

KannadaprabhaNewsNetwork |  
Published : Nov 05, 2023, 01:15 AM IST

ಸಾರಾಂಶ

ಕನಕಪುರ: ಕಾಡಾನೆ ದಾಳಿಗೆ ಕುರಿಗಾಹಿ ಬಲಿಯಾಗಿರುವ ಘಟನೆ ತಾಲೂಕಿನ ಹೊನ್ನಿಗನಹಳ್ಳಿಯಲ್ಲಿ ನಡೆದಿದೆ.ತಾಲೂಕಿನ ಹೊನ್ನಿಗನಹಳ್ಳಿಯ ಮರಿಗೌಡ (76) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೈವಿ. ಗ್ರಾಮದ ಹೊರವಲಯದಲ್ಲಿ ಮರಿಗೌಡ ಮತ್ತು ಗ್ರಾಮದ ಮತ್ತಿಬ್ಬರು ಎಂದಿನಂತೆ ಕುರಿ ಮೇಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕನಕಪುರ: ಕಾಡಾನೆ ದಾಳಿಗೆ ಕುರಿಗಾಹಿ ಬಲಿಯಾಗಿರುವ ಘಟನೆ ತಾಲೂಕಿನ ಹೊನ್ನಿಗನಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಹೊನ್ನಿಗನಹಳ್ಳಿಯ ಮರಿಗೌಡ (76) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೈವಿ. ಗ್ರಾಮದ ಹೊರವಲಯದಲ್ಲಿ ಮರಿಗೌಡ ಮತ್ತು ಗ್ರಾಮದ ಮತ್ತಿಬ್ಬರು ಎಂದಿನಂತೆ ಕುರಿ ಮೇಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಜೊತೆಗಿದ್ದ ಕುರಿಗಾಹಿಗಳು ಕಾಡಾನೆ ಬರುತ್ತಿರುವುದನ್ನು ಮರಿಗೌಡರಿಗೆ ಮುನ್ಸೂಚನೆ ನೀಡಿದರೂ ಮರೀಗೌಡರಿಗೆ ಕಿವಿ ಕೇಳದೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಜೊತೆಗಿದ್ದ ಇಬ್ಬರೂ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರವಷ್ಟೇ ಕಾಡಾನೆಯನ್ನು ಕಾಡಿಗಟ್ಟಿದ್ದರು. ಆದರೆ ಮತ್ತೆ ಶನಿವಾರ ಆಹಾರ ಅರಸಿ ಬಂದ ಕಾಡಾನೆ ಕುರಗಾಹಿಯನ್ನು ಬಲಿ ತೆಗೆದುಕೊಂಡಿದೆ. ಕೋಡಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸಿಎಫ್ಒ ಚಂದ್ರಶೇಖರ್ ನಾಯಕ್, ಕಾವೇರಿ ವನ್ಯಜೀವಿ ವಲಯದ ಡಿಎಫ್ಒ ಸುರೇಂದ್ರ, ಎಸಿಎಫ್ ನಾಗೇಂದ್ರ ಪ್ರಸಾದ್, ಮೂಗೂರು ವನ್ಯಜೀವಿ ವಲಯದ ಆರ್ ಎಫ್ಒ ರವಿಕುಮಾರ್, ಕೋಡಿಹಳ್ಳಿ ಪಿಎಸ್ಐ ರವಿಕುಮಾರ್, ಹೊನ್ನಿಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಮರಿಗೌಡರ ಕುಟುಂಬಕ್ಕೆ 15 ಲಕ್ಷ ರು ಪರಿಹಾರ ಚೆಕ್ ವಿತರಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ