ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಗಚ್ಚಿನಮಠದ ವಿದ್ಯಾಪೀಠ ಶಾಲಾ ಆವರಣದಲ್ಲಿ ಮೋಟಗಿಮಠದ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಸಂವಾದ, ಸಮಾನತೆ, ಸಹಾನೂಭೂತಿ ಇವು ನಮ್ಮ ಬದುಕಿನ ಜೀವಾಳವಾಗಿವೆ. ಶಿಕ್ಷಣದಿಂದ ಜ್ಞಾನ, ತಿಳುವಳಿಕೆ, ಅರಿವು ಮೂಡುತ್ತದೆ. ಸಂವಾದದಿಂದ ನಮ್ಮ ತಪ್ಪು ತಿದ್ದಿಕೊಳ್ಳಬಹುದು. ಎಲ್ಲರಲ್ಲೂ ಸಮಾನತೆ ಕಾಣಲು ಎಲ್ಲರಿಗೂ ಸಹಾನುಭೂತಿ ತೋರಬೇಕು ಎಂಬುದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗದುಗಿನ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಿಶ್ವಕ್ಕೆ ಸಮಾನತೆ, ಪ್ರೀತಿ, ವಿಶ್ವಾಸ, ಮಾನವೀಯ ಮೌಲ್ಯ ತಿಳಿಸಿಕೊಟ್ಟ ವಿಶ್ವದ ೨೧೬ ಮಹಾತ್ಮರ ಚರಿತ್ರೆಗಳನ್ನ ಒಂದೇ ಗ್ರಂಥದ ಮೂಲಕ ನಾಡಿಗೆ ಪ್ರಭುಚನ್ನಬಸವ ಸ್ವಾಮೀಜಿ ಕಾರ್ಯ ಶ್ಲಾಘನೀಯವಾಗಿದೆ. ನಿತ್ಯ ಕಾಯಕದಲ್ಲಿರುವವರೇ ನಿಜವಾದ ಭಕ್ತರು ಎಂಬಂತೆ ಬಸವಣ್ಣನವ ಕಾಯಕ, ದಾಸೋಹ, ಜ್ಞಾನಪ್ರಸಾರವನ್ನು ಮೋಟಗಿಮಠ ನಿರಂತರವಾಗಿ ಮಾಡುತ್ತಿರುವುದು ಎಲ್ಲ ಮಠಾಧೀಶರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.ಶಿವಮೊಗ್ಗ ಆನಂದಪುರಮಠದ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಉತ್ತರಳ್ಳಿಯ ಅವಧೂತ ಪೀಠದ ವಿನಯ ಗುರೂಜಿ ಮಾತನಾಡಿ, ಅಥಣಿ ಮಣ್ಣು ಪವಿತ್ರವಾದದ್ದು, ಇದು ಶಿವಯೋಗಿಗಳ ಸ್ಥಾನ ನಿಜವಾದ ಜ್ಞಾನವೈರಾಗ್ಯದ ಭಕ್ತಿ ಇಲ್ಲಿದೆ ಎಂದರು.
ಇದೇ ವೇಳೆ ಭುವನ ಭಾಗ್ಯ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಬೆಳಗಾವಿ ಡಾ.ಅಲ್ಲಮಪ್ರಭು ಸ್ವಾಮೀಜಿ, ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುದಗಲ್ಲದ ಮಹಾಂತ ಸ್ವಾಮೀಜಿ, ಗಣ್ಯರಾದ ಡಾ.ಸಂತೋಷ ಹಾನಗಲ್ಲ, ಕೆ.ಎ. ವನಜೋಳ, ಎಸ್.ಕೆ. ಬುಟಾಳಿ, ರಾವಸಾಬ ಐಹೊಳೆ, ಶಿವಾನಂದ ದಿವಾನಮಳ, ರಾಜು ಟೊಪಗಿ, ರಮೇಶ ಸಿಂದಗಿ ಇತರರು ಇದ್ದರು.
ಸಮಾಜಸೇವಾ ಭೂಷಣ ಪ್ರಶಸ್ತಿ: ಜಮಖಂಡಿಯ ಶಾಸಕ ಜಗದೀಶ ಗುಡಗುಂಟಿಮಠ, ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯದ ಡಾ.ಅಜೀತ ಪ್ರಸಾದ, ಗದುಗಿನ ತೋಂಟದಾರ್ಯಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಮೈಸೂರಿನ ಡಾ.ಚಂದ್ರಶೇಖರಯ್ಯಾ, ಬೆಂಗಳೂರಿನ ಕೆ.ವಿ. ನಾಗರಾಜಮೂರ್ತಿ, ಆನಂದ ತಾಳಿಕೊಟಿಯವರಿಗೆ ನೀಡಲಾಯಿತು.