ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಹೊಸಹಳ್ಳಿ ಎಸ್.ಡಿ.ಜಯರಾಂ ಆಟೋ ನಿಲ್ದಾಣ ವೃತ್ತದಲ್ಲಿ ರತನ್ ಟಾಟಾ ಭಾವಚಿತ್ರಕ್ಕೆ ದೀಪ-ಪುಷ್ಪನಮನ ನೆರವೇರಿಸಿ, ಒಂದು ನಿಮಿಷ ಮೌನಾಚರಣೆಯೊಂದಿಗೆ ಸಂತಾಪ ಸೂಚಿಸಲಾಯಿತು.
ನಗರಸಭಾ ಮಾಜಿ ಸದಸ್ಯ ಶಿವಕುಮಾರ್ ಕೆಂಪಯ್ಯ ಮಾತನಾಡಿ, ರತನ್ ಟಾಟಾ ನಿಧನದಿಂದ ದೇಶಕ್ಕೆ ತುಂಬಲಾಗದ ನಷ್ಟವಾಗಿದೆ, ಲಕ್ಷಾಂತರ ಭಾರತೀಯರಿಗೆ ಟಾಟಾ ಉದ್ಯೋಗದಾತರಾಗಿದ್ದರು. ಕೋಟ್ಯಂತರ ಜನರ ಕುಟುಂಬಗಳಿಗೆ ಸಾಕಷ್ಟು ನೆರವು, ಸೇವಾಕಾರ್ಯಗಳನ್ನು ಮಾಡಿದ್ದರು ಎಂದು ಸ್ಮರಿಸಿದರು.ಒಬ್ಬ ಕೈಗಾರಿಕೋದ್ಯಮಿ ಮಾದರಿಯಾಗಿ ಹೇಗೆ ಸಮಾಜಸೇವೆ ಮಾಡಬಹುದು ಎನ್ನುವುದಕ್ಕೆ ಮಾದರಿಯಾಗಿದ್ದರು. ದೇಶ ಕಾಯುವ ಸೈನಿಕರನ್ನು ಗೌರವಿಸಿ ಅವರಿಗೆ ಎಲ್ಲ ರೀತಿಯಲ್ಲೂ ನೆರವಾಗುತ್ತಿದ್ದರು, ರೈತಾಪಿ ವರ್ಗ ಬಳಸುವ ಸಾಕಷ್ಟು ಪರಿಕರಗಳನ್ನು ಕಡಿಮೆ ದರದಲ್ಲಿ ಲಭಿಸುವಂತೆ ಮಾಡಿದ್ದರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗದ ಹೊಸಹಳ್ಳಿ ಶಿವು, ಸಚಿನ್, ಆನಂದ್, ವೈರಮುಡಿ, ಅನಿಲ್ ಮತ್ತಿತರರಿದ್ದರು.ಕೈಗಾರಿಕೋದ್ಯಮಿ ರತನ್ ಟಾಟಾಗೆ ಶ್ರದ್ಧಾಂಜಲಿ
ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದ ಬಳಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಪದಾಧಿಕಾರಿಗಳು ರತನ್ ಟಾಟಾ ಭಾವಚಿತ್ರವುಳ್ಳ ಫ್ಲೆಕ್ಸ್‌ಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.ನಂತರ ಶಂಕರ್ ಬಾಬು ಮಾತನಾಡಿ, ಕೈಗಾರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದ ರತನ ಟಾಟಾ ನಿಧನದ ವಿಷಯ ಬೇಸರ ತರಿಸಿದೆ. ಅವರು ದೇಶದ ಸಹಸ್ರಾರು ಮಂದಿಗೆ ಉದ್ಯೋಗ ನೀಡಿ, ಅವರ ಪಾಲಿಗೆ ಅನ್ನದಾತರಾಗಿದ್ದರು ಎಂದು ಸ್ಮರಿಸಿದರು.