ವಿಜಯಪುರ ನಗರದ ಕೃಷ್ಣ ವಾದಿರಾಜ ಮಠದಲ್ಲಿ ಸೆ.4-5 ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು ಎಂದು ಶ್ರೀಮಠದ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕೃಷ್ಣ ವಾದಿರಾಜ ಮಠದಲ್ಲಿ ಸೆ.4-5 ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು ಎಂದು ಶ್ರೀಮಠದ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ಹೇಳಿದರು.ನಗರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸೆ.4 ರಂದು ಶ್ರೀಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಪಣೆ, ಮಹಿಳಾ ಮಂಡಳಿಗಳಿಂದ ಅಖಂಡ ಭಜನೆ, ಮರುದಿನ ಪಂಚಾಮೃತ ಅಭಿಷೇಕ, ಪೂಜೆ ನೈವೇದ್ಯ ಮತ್ತು ಪ್ರಸಾದ ವಿತರಣೆ ನಡೆಯುತ್ತವೆ. ಶ್ರೀಮಠದ ಆವರಣದಲ್ಲಿ ₹7 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣವಾಗುವ ಕಟ್ಟಡಕ್ಕೆ ಅನೇಕ ಭಕ್ತರು ದೇಣಿಗೆ ನೀಡುತ್ತಿದ್ದಾರೆ. ಭಕ್ತಾದಿಗಳು ಇನ್ನಷ್ಟು ದೇಣಿಗೆ ನೀಡಲು ಮುಂದೆ ಬರಲು ಕರೆ ನೀಡಿದರು. ಸದಸ್ಯರಾದ ಪ್ರಕಾಶ ಅಕ್ಕಲಕೋಟ, ಅಶೋಕರಾವ, ವಿಕಾಸ ಪದಕಿ, ವಿ.ಸಿ.ಕುಲಕರ್ಣಿ, ಮೋಹನ ಕೌತಾಳ, ಗೋವಿಂದ ಜೋಶಿ, ಪಂಡಿತ ವಾಸುದೇವ ಆಚಾರ್ಯ, ಪಂಡಿತ ಸಮೀರಾಚಾರ್ಯ, ಭಜನಾ ಮಂಡಳಿ ಪ್ರತಿನಿಧಿಗಳಾದ ಅನಿತಾ ಪದಕಿ, ಲಕ್ಷ್ಮೀ ಕುಲಕರ್ಣಿ, ಗುತ್ತಿಗೆದಾರ ಮೋಹನ ಕುಲಕರ್ಣಿ, ಶ್ರೀವತ್ಸ ಕುಲಕರ್ಣಿ ಉಪಸ್ಥಿತರಿದ್ದರು.