ಅಜಾತ ಶತ್ರು ಕೆ.ಬಿ.ಮಲ್ಲಿಕಾರ್ಜುನ್ ಗೆ ಆತ್ಮೀಯ ಮನಸ್ಸುಗಳಿಂದ ಅಭಿಮಾನಾರ್ಪಣೆ

KannadaprabhaNewsNetwork |  
Published : Jun 01, 2026, 01:30 AM IST
31 ಬೀರೂರು 4ಬೀರೂರು ಪಟ್ಟಣದ ತರಳ ಬಾಳು ಕಲ್ಯಾಣ ಮಂದಿರದಲ್ಲಿ ಕೆಬಿಎಂ ಬಳಗ ಆಯೋಜಿಸಿದ್ದ  ಆತ್ಮೀಯ ಮನಸ್ಸುಗಳ ಸಮ್ಮಿಲನದಲ್ಲಿ ಕೆಬಿ.ಮಲ್ಲಿಕಾರ್ಜುನ್ ದಂಪತಿಗಳ 50ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ಶುಭಕೋರಿz À ಶಾಸಕ ಕೆ.ಎಸ್.ಆನಂದ್ ಮತ್ತು ಅಭಿಮಾನಿಗಳು | Kannada Prabha

ಸಾರಾಂಶ

ಬೀರೂರು ಜನಾನುರಾಗಿ ಸೇವೆ ಸಲ್ಲಿಸಿ ಅಜಾತಶತ್ರು ಪಟ್ಟಣದ ಹಿರಿಯ ಮುತ್ಸದಿ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಅವರ ರಾಜಕೀಯ ಪಯಣದ ಏಳುಬೀಳುಗಳ ‘ಸ್ಥಿತಪ್ರಜ್ಞ’ ಗುಣ ಸ್ಮರಿಸಲು ಕೆಬಿಎಂ ಬಳಗದಿಂದ ಭಾನುವಾರ ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆದ ಆತ್ಮೀಯ ಮನಸ್ಸುಗಳ ಸಮ್ಮಿಲನದಲ್ಲಿ ರಾಜಕೀಯ ಬದಿಗೊತ್ತಿ ಒಂದಾದ ಮುಖಂಡರ ವೇದಿಕೆಗೆ ಸಾಕ್ಷಿಯಾಯಿತು.

ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮ ಕೇಂದ್ರ ಸಚಿವ, ಶಾಸಕರು ಭಾಗಿ

ಕನ್ನಡಪ್ರಭ ವಾರ್ತೆ ಬೀರೂರು

ಜನಾನುರಾಗಿ ಸೇವೆ ಸಲ್ಲಿಸಿ ಅಜಾತಶತ್ರು ಪಟ್ಟಣದ ಹಿರಿಯ ಮುತ್ಸದಿ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಅವರ ರಾಜಕೀಯ ಪಯಣದ ಏಳುಬೀಳುಗಳ ‘ಸ್ಥಿತಪ್ರಜ್ಞ’ ಗುಣ ಸ್ಮರಿಸಲು ಕೆಬಿಎಂ ಬಳಗದಿಂದ ಭಾನುವಾರ ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆದ ಆತ್ಮೀಯ ಮನಸ್ಸುಗಳ ಸಮ್ಮಿಲನದಲ್ಲಿ ರಾಜಕೀಯ ಬದಿಗೊತ್ತಿ ಒಂದಾದ ಮುಖಂಡರ ವೇದಿಕೆಗೆ ಸಾಕ್ಷಿಯಾಯಿತು.ತರಳಬಾಳು ಕಲ್ಯಾಣ ಮಂದಿರದ ಹೊರಾಂಗಣದಲ್ಲಿ ಬೃಹತ್ ವೇದಿಕೆಯಲ್ಲಿ ಜಿಲ್ಲೆಯ ಅನೇಕ ರಾಜಕಾರಣಿಗಳು, ಕೆ.ಬಿ.ಎಂ. ಅಭಿಮಾನಿಗಳು ಅವರ 75ನೇವರ್ಷದ ಹುಟ್ಟು ಹಬ್ಬದ ಜೊತೆಗೆ ಅವರ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು.ಹಾರ ಶಾಲು ಹಾಕಿಸಿಕೊಳ್ಳದ ಕೆಬಿಎಂ:ಕೆಬಿಎಂ ಅಭಿಮಾನಿಗಳ ಆತ್ಮೀಯ ಮನಸ್ಸುಗಳ ಸಮ್ಮಿಲನ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಿ ಅವರ ಆಶೀರ್ವಾದ ಪಡೆದು ಒಂದೊಳ್ಳೆ ಉತ್ತಮ ಪೋಟೋ ತೆಗಿಸಿಕೊಂಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ವೇದಿಕೆ ಮೇಲೆ ಕೆಬಿಎಂ ಜೋಡಿ ಕೂರಿಸಲು ಮಹಾರಾಜ ಚೇರ್ ಹಾಕಿದ್ದನ್ನು ಕಂಡ ಕೆಬಿಎಂ ಸ್ವತಃ, ನನಗೆ ಇಂತಹ ಆಡಂಬರದ ಅವಶ್ಯಕತೆ ಇಲ್ಲ, ಎಲ್ಲರ ಹಾಗೇ ನಾನು ಇಲ್ಲೇ ಕೆಳಗಡೆ ಕೂರುತ್ತೇನೆ. ಇಲ್ಲಿಯೇ ಶುಭ ಕೋರಿ ದಯಮಾಡಿ ಬಲವಂತ ಮಾಡಬೇಡಿ, ಎಂದಾಗ ಚೇರ್ ನಲ್ಲಿದ್ದ ದಂಪತಿಗಳ ಬಳಿ ಅಭಿಮಾನಿಗಳು, ಹಾರ, ತುರಾಯಿ, ಗಿಫ್ಟ್‌ ಗಳ ಸಮೇತ ಆಗಮಿಸುವುದನ್ನು ಕಂಡು ಅದನ್ನು ತೆಗೆದುಕೊಳ್ಳಲು ನಿರಾಕರಿಸಿ ನನಗೆ ಶುಭಹಾರೈಸಿದರಷ್ಟೆ ಸಾಕು. ನಿಮ್ಮಭಿಮಾನ ಹೀಗೆಯೇ ನನ್ನ ಮತ್ತು ಕುಟುಂಬದ ಮೇಲಿರಲಿ ಎಂದು ಬಂದವರನ್ನೆಲ್ಲ ಸಂತೈಸುತ್ತಾ, ಪೋಟೋ ತೆಗೆಸಿಕೊಳ್ಳಲು ಮುಂದಾದರು. ರಾಜ್ಯ, ಜಿಲ್ಲೆ ಮತ್ತಿತರ ಕಡೆಯಿಂದ ಬಂದ ಸಹಪಾಠಿಗಳು, ಮಿತ್ರರು ವಿವಿಧ ಶಾಸಕರು, ಅಭಿಮಾನಿಗಳು ಶುಭಹಾರೈಸಲು ಮುಗಿಬಿದ್ದಾಗ ಒಂದೆಡೆ ಪೋಟೋಗ್ರಾರ್ಪರ್ಸ್ ಗಳಿಗೆ ಗೊಂದಲಕ್ಕೀಡದಾಗ ಕೆಬಿಎಂ ಅವರು ನಾನು ನನ್ನ ಪತ್ನಿ ಎಲ್ಲು ಹೋಗುವುದು ಇಲ್ಲ ದಯಮಾಡಿ ಸಹಕರಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕ ಬೆಳ್ಳಿಪ್ರಕಾಶ್, ಜನ ಸಂಕಷ್ಟಕ್ಕೆ ಸಿಲುಕಿದಾಗ ಅವರ ಕಷ್ಟವೇ ತಮ್ಮ ಕಷ್ಟ ಎಂದು ಭಾವಿಸಿ ಅದರ ಪರಿಹಾರಕ್ಕೆ ನಿರಂತರ ಪ್ರಯತ್ನ ನಡೆಸಿದ ವ್ಯಕ್ತಿತ್ವ ಕೆ.ಬಿ. ಮಲ್ಲಿಕಾರ್ಜುನ್‌ ಅವರದ್ದು. ಇದಕ್ಕೆ ಉದಾಹರಣೆ ಎಂದರೆ ಅವರು ಶಾಸಕರಾಗಿದ್ದ1999-2004ರಲ್ಲಿ ಪ್ರಯತ್ನ-ಹೋರಾಟ ಬೀರೂರು ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಕೇಂದ್ರೀಕರಣವಾಗಿತ್ತು. ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ಜನಸೇವೆಗೆ ಬಳಸಿ ವಿಧಾನಸಭೆ ಅಧಿವೇಶನದಲ್ಲಿ ಕಡೂರು ತಾಲೂಕಿನ ಕೆರೆಗಳಿಗೆ ನೀರುತುಂಬಿಸುವಿಕೆ ಮತ್ತು ಕ್ಷೇತ್ರದ ಜನರಿಗೆ ಕುಡಿಯುವ ನೀರು ಪೂರೈಸುವ ಬಗ್ಗೆ 42 ಪ್ರಶ್ನೆಗಳನ್ನು ಎತ್ತಿ ಸದನದ ಒಳಗೆ ಮತ್ತು ಹೊರಗೆಜನರ ಪರವಾಗಿ ಧ್ವನಿ ಎತ್ತಿದ್ದರ ಫಲವಾಗಿ ಬೀರೂರು ಕ್ಷೇತ್ರದ 12 ಕೆರೆಗಳಿಗೆ ಯಗಚಿ ಹಿನ್ನೀರಿನ ಏತ ನೀರಾವರಿ ಯೋಜನೆ ಮಂಜೂರಾಗಿ ಆ ಮೂಲಕ ಜನರಿಗೆ ನೀರಿನ ಸೌಲಭ್ಯ ದೊರಕಿ ರೈತರಿಗೆ ನೀರಾವರಿ ವ್ಯವಸ್ಥೆ ಸಿಗಲು ಸಾಧ್ಯವಾಗಿದೆ ಎಂದರು.

ಶಾಸಕ ಕೆ.ಎಸ್. ಆನಂದ್ ಮಾತನಾಡಿ, ಕಡೂರು ತಾಲೂಕಿನ ಬೀರೂರು ಗ್ರಾಮದ ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದ ಕೆ.ಬಿ. ಮಲ್ಲಿಕಾರ್ಜುನ್‌ ಅವರು ಬೀರೂರು ಕ್ಷೇತ್ರದಿಂದ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ನಂತರ ವಿಧಾನಪರಿಷತ್‌ ಮುಖ್ಯ ಸಚೇತಕರಾಗಿ ಸದ್ದು-ಗದ್ದಲವಿಲ್ಲದೆ ಮಂತ್ರಿಗಿರಿಗೆ ಆಸೆಪಡದೇ ಜನರ ಅಭಿಲಾಷೆಯಂತೆ ಅವರ ಕಷ್ಟ-ಕಾರ್ಪಣ್ಯಗಳಿಗೆ ತಮಗಿದ್ದ ಅಧಿಕಾರ ಬಳಸಿ ಸರ್ಕಾರದ ಗಮನ ಸೆಳೆದು ಜನರಿಗಾಗಿ ಜನ ಸೇವೆ ಮಾಡಿದ ತೃಪ್ತಿ ಅವರದ್ದು. ತಮಗೆ ರಾಜ್ಯ ಮಟ್ಟದಲ್ಲಿ ಮಾಜಿ ಮಂತ್ರಿ ಬಿ.ಎಲ್. ಶಂಕರ್‌ ಅವರಜೊತೆ ನಿಕಟ ಒಡನಾಟವಿದ್ದರೂ ರಾಷ್ಟ್ರಮಟ್ಟದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಹಾಗೂ ಚಂದ್ರಶೇಖರ್ ಮುಂತಾದವರ ಸಂಪರ್ಕ, ಸೇವಾ ಹಿರಿತನವಿದ್ದರೂ ಎಲ್ಲೂ ಸಹ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಲಾಭಿ ಮಾಡದೇ ಸಂತೃಪ್ತಿಯಿಂದ ಜನ ಸೇವೆಗಾಗಿ ಹೆಚ್ಚಿನ ಸಮಯ ಮೀಸಲಾಗಿಟ್ಟಿದ್ದರು.

ವಕೀಲ ಪದವೀಧರಾದ ಕೆ.ಬಿ. ಮಲ್ಲಿಕಾರ್ಜುನ್ ಕೆಲ ಕಾಲ ವಕೀಲಿ ವೃತ್ತಿ ಕೈಗೊಂಡು ನಂತರ ಬೀರೂರಿನ ಕನ್ನಡ ಸಂಘ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ರಾಜಕೀಯ ರಂಗಕ್ಕೆಧುಮುಕಿದವರು. ಜಾತಿ-ಧರ್ಮಗಳ ಬೇಧ ಭಾವವಿಲ್ಲದೇಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿ ಬೀರೂರಿನ “ಅಜಾತಶತ್ರು” ವಾಗಿದ್ದಾರೆ ಎಂದರು.ಕಾರ್ಯಕ್ರಮಕ್ಕೆ ಸುಮಾರು 5ಸಾವಿರಕ್ಕೂ ಹೆಚ್ಚಿನ ಕೆಬಿಎಂ ಅಭಿಮಾನಿಗಳು ಆಗಮಿಸಿದ್ದು, ಎಲ್ಲರು ಸಿಹಿ ಭೋಜನ ಸವಿದರು.ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಎಲ್.ಶಂಕರ್, ಗ್ಯಾಸ್ ಚಂದ್ರಪ್ಪ, ಎಲ್ಲಾ ರಾಜಕೀಯ ಮುಖಂಡರು , ವಿವಿಧ ಸಮಾಜದ ಅಧ್ಯಕ್ಷರು ಕೆಬಿಎಂ ಅಭಿಮಾನಿಗಳು ಇದ್ದರು.

-- ಬಾಕ್ಸ್ಸ್--

ಮೋದಿಯಷ್ಟೆ ಕೆಬಿಎಂ ಗೂ ನೀಡುವೆ: ಕೆಂದ್ರ ಸಚಿವ ವಿ ಸೋಮಣ್ಣರಾಜಕಾರಣದಲ್ಲಿ ನನಗೆ ಗುರುವಿನ ಸಮಾನರಾದ ಅವರಿಗೆ ಪ್ರಧಾನಿ ಮೋದಿಜಿಗೆ ನೀಡುವಷ್ಟೆ ಗೌರವ ಕೆ.ಬಿ.ಮಲ್ಲಿಕಾರ್ಜುನ್ ಅವರಿಗೆ ನೀಡುವೆ. ದೇವರು ಅಂತಹ ಮನೋಬಾವನಿಗೆ ಇನ್ನಷ್ಟು ಆರೋಗ್ಯ ನೀಡಿದರೆ ಬೀರೂರು ಅಭಿವೃದ್ದಿಯಾಗಲಿದೆ ಎಂದು ಕೆಂದ್ರ ಸಚಿವ ವಿ ಸೋಮಣ್ಣ ಹೇಳಿದರು.

ಪಟ್ಟಣದ ಸಂತೆಮೈದಾನದ ಮೇಲ್ಭಾಗದಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಲು ಆಗಮಿಸಿದ್ದ ವಿ.ಸೋಮಣ್ಣ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಅವರ ನಡುವಿನ ಅವಿನಾಭಾವ ಸಂಬಂದ ಸುಮಾರು 45 ವರ್ಷಗಳ ಹಿಂದಿನದು. ಅವರು ಅನಾರೋಗ್ಯದ ಸಂದರ್ಭದಲ್ಲಿ ಅವರ ಆರೋಗ್ಯ ವಿಚಾರಿಸಲು ಅವರ ನಿವಾಸಕ್ಕೆ ಬಂದಾಗ ಈ ರೈಲ್ವೆ ಕೆಳಸೇತುವೆ ಬಗ್ಗೆ ಪ್ರಸ್ತಾವನೆ ಇಟ್ಟರು,ಆಗ ನನಗೆ ಇಂತಹ ಕೆಲಸ ಮಾಡಲು ಸಿಕ್ಕ ಸುದಿನ ಎಂದು ತಿಳಿದು ಅಂದೇ ಕಾಮಗಾರಿಗೆ ಅಂಕಿತ ಹಾಕಿದೆ ಎಂದರು.

-- ಬಾಕ್ಸ್--

ಜಿಲ್ಲೆಗೆ ಸಚಿವ ಸ್ಥಾನ ದೊರವುದೇ?:ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರಕ್ಕೆ ದಿನಗಣನೆ ಆರಂಭಿಸುತ್ತಿದ್ದಂತೆ ಇತ್ತ ಕೆಬಿಎಂ ಸಮ್ಮಿಲನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಹುತೇಕ ಕಾಂಗ್ರೆಸ್ ಹಿರಿಯ ಮುಖಂಡರು, ಶಾಸಕರು ಜಿಲ್ಲೆಗೆ ಸಚಿವ ಸ್ಥಾನ ಸಿಗಬಹುದೇ ಎಂಬ ಅಲ್ಲಲ್ಲೇ ನಡೆಯುತ್ತಿದ್ದ ವಿಷಯ ಚರ್ಚೆಗೆ ಗ್ರಾಸವಾಯಿತು.

31 ಬೀರೂರು 3ಬೀರೂರು ಪಟ್ಟಣದ ತರಳ ಬಾಳು ಕಲ್ಯಾಣ ಮಂದಿರದಲ್ಲಿ ಕೆಬಿಎಂ ಬಳಗ ಆಯೋಜಿಸಿದ್ದ ್ಲ ಆತ್ಮೀಯ ಮನಸ್ಸುಗಳ ಸಮ್ಮಿಲನದಲ್ಲಿ ಕೆಬಿ.ಮಲ್ಲಿಕಾರ್ಜುನ್ ದಂಪತಿಗಳ 50ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ಶುಭಕೋರಿz Àಎಂ.ಎಲ್ಸಿ ಸಿ.ಟಿ.ರವಿ, ಮಾಜಿ ಶಾಸಕ ಬೆಳ್ಳಿಪ್ರಕಾಶ್.ಅಧ್ಯಕ್ಷರುಗಳು, ಕೆಬಿಎಂ ಅಭಿಮಾನಿಗಳು ಇದ್ದರು.31 ಬೀರೂರು 4ಬೀರೂರು ಪಟ್ಟಣದ ತರಳ ಬಾಳು ಕಲ್ಯಾಣ ಮಂದಿರದಲ್ಲಿ ಕೆಬಿಎಂ ಬಳಗ ಆಯೋಜಿಸಿದ್ದ ಆತ್ಮೀಯ ಮನಸ್ಸುಗಳ ಸಮ್ಮಿಲನದಲ್ಲಿ ಕೆಬಿ.ಮಲ್ಲಿಕಾರ್ಜುನ್ ದಂಪತಿಗಳ 50ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ಶುಭಕೋರಿz À ಶಾಸಕ ಕೆ.ಎಸ್.ಆನಂದ್ ಮತ್ತು ಅಭಿಮಾನಿಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನ- ಸೋಲಾಪುರ ರೈಲು ನಿಲುಗಡೆಗೆ ಸಚಿವ ಸೋಮಣ್ಣ ಚಾಲನೆ
ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಕರ್ತವ್ಯ ಎಂದ ಶಾಸಕ ಬಾಲಕೃಷ್ಣ