ಸುರತ್ಕಲ್ ಬಂಟರ ಭವನದಲ್ಲಿ ಯಕ್ಷಸಿರಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಂದರ್ಭ ಯಕ್ಷಗುರು ರಾಕೇಶ್ ರೈ ನಿರ್ದೇಶನದಲ್ಲಿ ನಡೆದ ದಶಾವತಾರ ಯಕ್ಷಗಾನ ಪ್ರದರ್ಶನದಲ್ಲಿ 9 ತಿಂಗಳ ತುಂಬು ಗರ್ಭಿಣಿ, ಹವ್ಯಾಸಿ ಕಲಾವಿದೆ ದಿಶಾ ಶೆಟ್ಟಿ ಪ್ರಹ್ಲಾದನ ತಾಯಿ ಕಯಾದು ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.
ಮೂಲ್ಕಿ; ಸುರತ್ಕಲ್ ಬಂಟರ ಭವನದಲ್ಲಿ ಯಕ್ಷಸಿರಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಂದರ್ಭ ಯಕ್ಷಗುರು ರಾಕೇಶ್ ರೈ ನಿರ್ದೇಶನದಲ್ಲಿ ನಡೆದ ದಶಾವತಾರ ಯಕ್ಷಗಾನ ಪ್ರದರ್ಶನದಲ್ಲಿ 9 ತಿಂಗಳ ತುಂಬು ಗರ್ಭಿಣಿ, ಹವ್ಯಾಸಿ ಕಲಾವಿದೆ ದಿಶಾ ಶೆಟ್ಟಿ ಪ್ರಹ್ಲಾದನ ತಾಯಿ ಕಯಾದು ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.
ಈ ವಿಚಾರ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.ನಮ್ಮದು ಯಕ್ಷಗಾನದ ಕುಟುಂಬವಾಗಿದ್ದು, ನನ್ನ ಅಮ್ಮ ಹಾಗೂ ಚಿಕ್ಕಮ್ಮ ಕೂಡ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಯಕ್ಷಗಾನ ಪಾತ್ರ ಮಾಡಿದ್ದು ಪ್ರೇರಣೆಯಾಗಿತ್ತು. ಸುರತ್ಕಲ್ ನಲ್ಲಿ ನಡೆದ ಯಕ್ಷಗಾನದಲ್ಲಿ ಪ್ರಹ್ಲಾದನ ತಾಯಿಯ ಪಾತ್ರ ಮಾಡಿದ್ದೇನೆ. ಗುರುಗಳಾದ ರಾಕೇಶ್ ರೈ ಬೆಂಬಲ ನೀಡಿದ್ದಾರೆ. ಪಾತ್ರ ಮಾಡುವ ಮುಂಚೆ ಅವಕಾಶ ಸಿಕ್ಕಿದ ಬಗ್ಗೆ ಮನೆಯವರಲ್ಲಿ ಚರ್ಚಿಸಿ, ನಿರ್ಧಾರ ತೆಗೆದುಕೊಂಡಿದ್ದೇನೆ. ಪುರುಷರು ಮಹಿಳೆ ಪಾತ್ರವನ್ನು ಮಾಡುತ್ತಿದ್ದು, ನಾನು ಮಹಿಳೆ ಪಾತ್ರವನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೇನೆ. ಹೆಸರು ಮಾಡಬೇಕಂತ ಮಾಡಿಲ್ಲ ಎಂದು ದಿಶಾ ಸ್ಪಷ್ಟಪಡಿಸಿದ್ದಾರೆ.ಪಾತ್ರ ಮಾಡುವ ವಿಚಾರ ರಹಸ್ಯವಾಗಿರಿಸಲಾಗಿತ್ತು. ಸುಮಾರು 20 ವರ್ಷದಿಂದ ಪುಂಡು ವೇಷ ಮಾಡುತ್ತಿದ್ದು ಪ್ರಹ್ಲಾದನ ತಾಯಿಯ ಪಾತ್ರ ತಾಯ್ತನದ ಭಾವನೆಗೆ ಪೂರಕವಾಗಿತ್ತು. ಇದನ್ನು ಸಾಧನೆ ಎಂದು ಹೇಳುವುದಿಲ್ಲ. ಪ್ರತಿಯೊಬ್ಬ ಮಹಿಳೆಯರಲ್ಲಿ ಗರ್ಭಿಣೆ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿದ್ದು ತುಂಬಾ ಸೂಕ್ಷ್ಮವಾದ ಸಮಯವಾಗಿರುವುದರಿಂದ, ಇದನ್ನು ಅನುಕರಣೆ ಮಾಡಬೇಡಿ, ನಾನು ಮಾಡಿದ್ದೇನೆಂದು ಬೇರೆಯವರು ಮಾಡಬೇಡಿ. ನಾನು ಆ್ಯಕ್ಟೀವ್ ಇದ್ದ ಕಾರಣ ಸಾಧ್ಯವಾಗಿದೆ. ವಿಡಿಯೋ ವೈರಲ್ ಆದ ಬಳಿಕ ಜನರು ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆಂಬ ಹೆದರಿಕೆಯಿತ್ತು ಎಂದು ದಿಶಾ ಶೆಟ್ಟಿ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.