22ರಂದು ಕರ್ನಾಟಕದಲ್ಲೂ ರಜೆ ಘೋಷಿಸಿಸಬೇಕು: ಈಶ್ವರಪ್ಪ

KannadaprabhaNewsNetwork |  
Published : Jan 20, 2024, 02:00 AM IST
ಪೊಟೋ: 19ಎಸ್‌ಎಂಜಿಕೆಪಿ07: ಕೆ.ಎಸ್‌.ಈಶ್ವರಪ್ಪ  | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶ್ರೀ ರಾಮನ ಪ್ರತಿಷ್ಠಾಪನೆ ಹಿನ್ನೆಲೆ ಜ.22ರಂದು ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಅದರಂತೆ ಕರ್ನಾಟಕದಲ್ಲೂ ರಜೆ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶ್ರೀ ರಾಮನ ಪ್ರತಿಷ್ಠಾಪನೆ ಹಿನ್ನೆಲೆ ಜ.22ರಂದು ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಅದರಂತೆ ಕರ್ನಾಟಕದಲ್ಲೂ ರಜೆ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 500 ವರ್ಷಗಳ ಗುಲಾಮಗಿರಿಯಿಂದ ಶ್ರೀರಾಮಚಂದ್ರ ಮಂದಿರವನ್ನು ಮುಕ್ತ ಮಾಡಿದ್ದಾರೆ. ಬಾಬರ್ ಕಟ್ಟಿದ ಮಸೀದಿಯನ್ನು ರಾಮಭಕ್ತರು ಧ್ವಂಸ ಮಾಡಿದ್ದಾರೆ. ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ರಾಮ ಭಕ್ತರಿಗೆ ಅತ್ಯಂತ ಸಂತೋಷದ ದಿನ. ಅಂದು ಕರ್ನಾಟಕದಲ್ಲಿಯೂ ರಜಾ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜಕಾರಣ ಬೇಡ:

ಶ್ರೀ ರಾಮನ ಪ್ರತಿಷ್ಠಾಪನೆ ವಿಷಯದಲ್ಲಿ ಹಿಂದೂ ಧರ್ಮಕ್ಕೆ ಗೌರವ ಬಂದಿದೆ. ವಿಶ್ವಾದ್ಯಂತ ರಾಮನ ಇತಿಹಾಸವನ್ನು ಅರಿತ ಅನೇಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಅಯೋಧ್ಯೆಗೆ ಬರುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಸಮಾಧಿಯಲ್ಲೂ ಹೇ ರಾಮ ಎಂದು ಬರೆಯಲಾಗಿದೆ. ಶ್ರೀ ರಾಮನ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ಹೇಳಿದರು.

ಮಥುರಾ ಮತ್ತು ಕಾಶಿಯಲ್ಲಿ ಹಿಂದೂ ದೇವಾಲಯ ಕೆಡವಿ ಮಸೀದಿ ನಿರ್ಮಾಣ ಮಾಡಿದ ವಿಚಾರವಾಗಿ ಮುಂದಿನ ದಿನಗಳಲ್ಲಿ ಏನಾಗುತ್ತದೋ ನೋಡೋಣ. ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಶ್ರೀರಾಮನ ಭಜನೆ, ಪೂಜೆ ಮಾಡುತ್ತಿರುವುದು ಕಂಡುಬರುತ್ತಿದೆ. ಪ್ರಧಾನಿ ಮೋದಿ ಅವರು ಶ್ರೀರಾಮನ ಪ್ರತಿಷ್ಠಾಪನೆಯನ್ನು ದೀಪಾವಳಿ ಹಬ್ಬದ ರೂಪದಲ್ಲಿ ಆಚರಣೆ ಮಾಡುವಂತೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ರಾಜಕಾರಣಿಗಳು ನಾಲ್ಕೈದು ದಿನ ಶ್ರೀ ರಾಮನ ವಿಚಾರದಲ್ಲಿ ಟೀಕೆ ಮಾಡುವುದು, ರಾಜಕಾರಣ ಬೆರೆಸುವುದು ಬೇಡ ಎಂದು ಪ್ರಾರ್ಥಿಸುತ್ತೇನೆ ಎಂದರು.

ಎಐಸಿಸಿ ತೀರ್ಮಾನದಂತೆ ಸಿದ್ದರಾಮಯ್ಯ ಮೊದಲ ಬಾರಿ ಹೋಗಲ್ಲ ಎಂದರು. ಅನಂತರ ಜನವರಿ 22 ನಂತರ ಹೋಗುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ ಹಾಗಾಗಿ ಯು ಟರ್ನ್ ಹೊಡೆಯುತ್ತಿದ್ದಾರೆ. ಅಯೋಧ್ಯೆಗೆ ಹೋಗುವುದು ಬಿಡುವುದು ಅವರ ವೈಯಕ್ತಿಕ ವಿಚಾರ ಎಂದು ಪ್ರತಿಕ್ರಿಯಿಸಿದರು.ಭಾರತ ವಿಜನೆ ಮಾಡಿದ್ದು ಕಾಂಗ್ರೆಸ್‌: ರಾಹುಲ್ ಗಾಂಧಿಯವರ ಅಜ್ಜ ಭಾರತ್ ತೋಡೋ ಮಾಡಿದ್ದರು. ಈಗ ಭಾರತ್ ಜೋಡೋ ಪದ ಬೆಳೆಸಲು ರಾಹು ಗಾಂಧಿಯವರಿಗೆ ಯಾವ ಅಧಿಕಾರ ಇದೆ? ಭಾರತವನ್ನು ವಿಭಜನೆ ಮಾಡಿದ್ದು ಇದೇ ಕಾಂಗ್ರೆಸ್‌ನವರು. ಪಾಕಿಸ್ತಾನದಲ್ಲಿದ್ದ ಹಿಂದುಗಳನ್ನು ಭಾರತಕ್ಕೆ ಓಡಿಸಿದರು. ಅಲ್ಲದೆ ಮತಾಂತರ ಕೂಡ ಮಾಡಿದ್ದರು. ಇದು ರಾಹುಲ್ ಗಾಂಧಿಯವರಿಗೂ ಗೊತ್ತಿದೆ ಎಂದು ಕುಟುಕಿದರು.

- - - ಬಾಕ್ಸ್‌ ಬಾಕ್ಸ್‌ ಅಲ್ಲಮಪ್ರಭು ಕೇವಲ ಲಿಂಗಾಯಿತರಿಗೆ ಸೀಮಿತ ಅಲ್ಲ

ಅಲ್ಲಮಪ್ರಭು ಕೇವಲ ಲಿಂಗಾಯಿತರಿಗೆ ಸೀಮಿತ ಅಲ್ಲ ನಾನು ಕುರುಬ ನಾವು ಕೂಡ ಅಲ್ಲಮ ಪ್ರಭುವಿನ ಭಕ್ತರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಹೆಸರಿಟ್ಟರೆ ಲಿಂಗಾಯತ ಸಮುದಾಯದವರನ್ನು ಸೆಳೆಯಬಹುದು ಎಂದು ಕಾಂಗ್ರೆಸ್‌ನವರು ಅಂದುಕೊಂಡಿದ್ದರೆ ಅದು ಅವರ ಭ್ರಮೆ ಎಂದು ಕುಟುಕಿದರು. ಯಾವುದೇ ಪಕ್ಷದ ಮುಖ್ಯಮಂತ್ರಿ ಮಗ ಹೇಳದೇ ಇರುವ ವಿಚಾರವನ್ನು ಸಿದ್ದರಾಮಯ್ಯ ಮಗ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರಿಗೂ ಅಭಿವೃದ್ಧಿ ಮಾಡದೇ ಚುನಾವಣೆಗೆ ಹೋಗಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಕಾಂಗ್ರೆಸ್ ಹೈಕಮಾಂಡ್ 5 ವರ್ಷ ಸಿದ್ದರಾಮಯ್ಯ ಇರಬೇಕೇ, ಬೇಡವೇ ಎಂದು ತೀರ್ಮಾನ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕಾಂಗ್ರೆಸ್ ಆಂತರಿಕ ಭಿನ್ನಾಭಿಪ್ರಾಯ ದಿನೇದಿನೆ ಹೆಚ್ಚಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಫೋಟಗೊಳ್ಳುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

- - - -19ಎಸ್‌ಎಂಜಿಕೆಪಿ07: ಕೆ.ಎಸ್‌.ಈಶ್ವರಪ್ಪ

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌