ಬಾಳೆಹೊನ್ನೂರಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು । 500ಕ್ಕೂ ಅಧಿಕ ವಾಹನಗಳಿಂದ ಮೆರವಣಿಗೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಮಲ್ನಾಡ್ ಗೆಳೆಯರ ಬಳಗ 2ನೇ ಬಾರಿಗೆ ಆಯೋಜಿಸಿದ್ದ ಕನ್ನಡ ದರ್ಬಾರ್ ವಾಹನ ಜಾಥಾ ಹೊಸ ಇತಿಹಾಸ ಸೃಷ್ಟಿಸುವುದರೊಂದಿಗೆ ಕನ್ನಡ ರಾಜ್ಯೋತ್ಸವದ ಮೆರುಗನ್ನು ಹೆಚ್ಚಿಸಿತು.ರಂಭಾಪುರಿ ಪೀಠದಿಂದ ಆರಂಭಗೊಂಡ ಬೃಹತ್ ವಾಹನ ಜಾಥಾ ಮಸೀದಿಕೆರೆ, ರೇಣುಕನಗರ, ಕೆರೆ ಚೌಡೇಶ್ವರಿ ಸರ್ಕಲ್, ಲಯನ್ಸ್ ವೃತ್ತ, ಜೇಸಿ ವೃತ್ತ, ರೋಟರಿ ವೃತ್ತದ ಮೂಲಕ ಬಸ್ ನಿಲ್ದಾಣ, ಕೊಪ್ಪ ರಸ್ತೆ ಅರಣ್ಯ ಇಲಾಖೆ ಕಚೇರಿ ವರೆಗೆ ತೆರಳಿ ಕಲಾರಂಗ ಕ್ರೀಡಾಂಗಣದಲ್ಲಿ ಜಮಾವಣೆಗೊಂಡಿತು. 500ಕ್ಕೂ ಅಧಿಕ ಬೈಕ್, ಸ್ಕೂಟರ್, ತ್ರಿಚಕ್ರ ಆಟೋ, ಕಾರು, ಜೀಪು, ಸರಕು ಸಾಗಣೆ ನಾಲ್ಕು ಚಕ್ರದ ವಾಹನಗಳು, ಲಾರಿ, ಜೆಸಿಬಿ, ಕ್ರೇನ್‌ಗಳು ವಿಶೇಷವಾಗಿ ಅಲಂಕೃತಗೊಂಡು ಪಾಲ್ಗೊಂಡಿದ್ದವು. ಎಲ್ಲಾ ವಾಹನಗಳು ವಿಶೇಷವಾಗಿ ಕನ್ನಡದ ಬಾವುಟ ಹಾಗೂ ಹೂವುಗಳೊಂದಿಗೆ ವಿವಿಧ ಪರಿಕಲ್ಪನೆ ಹಾಗೂ ಜನರಿಗೆ ವಿಶೇಷ ಸಂದೇಶ ತಲುಪಿಸುವ ಮಾದರಿಯಲ್ಲಿ ಸಿಂಗಾರಗೊಂಡಿದ್ದು ವಿಶೇಷ.ಪ್ರಮುಖವಾಗಿ ನಾಲ್ಕು ಚಕ್ರದ ಕಾರು, ಜೀಪು ಹಾಗೂ ಸರಕು ಸಾಗಣೆ ವಾಹನಗಳು ಕನ್ನಡದ ಜ್ಞಾನಪೀಠ ಪುರಸ್ಕೃತರ ವಿವರ, ಕರ್ನಾಟಕದ ವಿವಿಧ ಮಾಹಿತಿ ಒಳಗೊಂಡಂತೆ ಅಲಂಕರಿಸಿಕೊಂಡು ಗಮನಸೆಳೆದವು. ಹಲವು ವಾಹನಗಳಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್ , ಶಂಕರ್‌ನಾಗ್ ಭಾವಚಿತ್ರ, ಕರ್ನಾಟಕದ ಭೂಪಟ, ತಾಯಿ ಭುವನೇಶ್ವರಿ ಚಿತ್ರಗಳು ರಾರಾಜಿಸಿದವು. ಶಿಕ್ಷಕಿಯೊಬ್ಬರು ತಮ್ಮ ಸ್ಕೂಟರ್‌ಗೆ ಭುವನೇಶ್ವರಿ ಅಲಂಕಾರ, ಮತ್ತೋರ್ವರು ಸ್ವತಃ ತಾವೇ ಭುವನೇಶ್ವರಿ ವೇಷ ಧರಿಸಿ ಗಮನಸೆಳೆದರು. ವಿವಿಧ ವಾಹನಗಳು ಸಂಪೂರ್ಣ ಹಳದಿ, ಕೆಂಪು ಬಣ್ಣದ ಬಲೂನ್, ಧ್ವಜಗಳಿಂದ ಸಿಂಗಾರಗೊಂಡು ನೋಡುಗರ ಮನಸೆಳೆಯಿತು.ಹಳದಿ, ಕೆಂಪು ಪೇಟ ಧರಿಸಿ ಯುವತಿಯರು, ಮಹಿಳೆಯರು ಸಹ ಸ್ಕೂಟಿ, ಕಾರುಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕನ್ನಡ ಪ್ರೇಮ ಮೆರೆದರು.ಸಮಾರೋಪದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, 100 ವರ್ಷ ಸಂದಿರುವ ಕುವೆಂಪು ರಚಿಸಿದ ನಾಡಗೀತೆಯ ಅಂಶಗಳನ್ನು ಮೈಗೂಡಿಸಿಕೊಂಡಲ್ಲಿ ಭವ್ಯ ಭಾರತ, ಉತ್ತಮ ಕರ್ನಾಟಕ ನಿರ್ಮಾಣ ವಾಗುವುದರಲ್ಲಿ ಸಂದೇಹವಿಲ್ಲ. ಒಗ್ಗೂಡಿ ಬಾಳಿದಲ್ಲಿ ಮಾತ್ರ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮಲ್ನಾಡ್ ಗೆಳೆಯರ ಬಳಗ ವಾಹನ ಜಾಥಾ ಆಯೋಜನೆ ಕನ್ನಡ ರಾಜ್ಯೋತ್ಸವಕ್ಕೆ ಕಳೆಕಟ್ಟಿದೆ ಎಂದರು.ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿ, ಕನ್ನಡದ ಶಕ್ತಿ ವಿಶ್ವಕ್ಕೆ ಮುಖಾಮುಖಿಯಾಗುವ ಶಕ್ತಿ. ದೇಶದ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಕರ್ನಾಟಕದ್ದಾಗಿದೆ. ವಿಶ್ವಕ್ಕೆ ಸಾಮರಸ್ಯ ಸಾರಿದ ಸಂಸ್ಕೃತಿ ಕರ್ನಾಟಕದ್ದು, ಇಲ್ಲಿನ ಸಾಹಿತ್ಯ, ಸಂಸ್ಕೃತಿ ವಿಶ್ವಕ್ಕೆ ಮಾದರಿ ಎಂದರು.ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಮಧುಸೂದನ್ ಮಾತನಾಡಿ, ಬಾಳೆಹೊನ್ನೂರು ಸುತ್ತಲಿನ ಕನ್ನಡಿಗರು ರಾಜ್ಯೋತ್ಸವದ ಜಾಥಾಕ್ಕೆ ಮನತುಂಬಿ ಪ್ರೋತ್ಸಾಹಿಸಿದ ಅವರ ಪ್ರೀತಿ, ಅಭಿಮಾನಕ್ಕೆ ಚಿರಋಣಿ. ಬಳಗದ ಸದಸ್ಯರು ಸಹ ವಿಶೇಷ ಆಸಕ್ತಿ ವಹಿಸಿ ಜಾಥಾ ಯಶಸ್ವಿಯಾಗುವಂತೆ ಮಾಡಿದ್ದಾರೆ ಎಂದರು.ಜಾಥಾದಲ್ಲಿ ವಿಶೇಷವಾಗಿ ಅಲಂಕೃತಗೊಂಡ ವಾಹನಗಳಿಗೆ ಪ್ರತ್ಯೇಕ ವಿಭಾಗದಲ್ಲಿ ರಾಜರಥ-2025 ಎಂಬ ಬಿರುದಿನೊಂದಿಗೆ ಟ್ರೋಫಿ, ನಗದು ಬಹುಮಾನ ನಿಡಲಾಯಿತು. ಪುರುಷ ವಿಭಾಗದ ದ್ವಿಚಕ್ರ ವಾಹನದಲ್ಲಿ ಲೋಕೇಶ್ ಅಮೂಲ್ಯ (ಪ್ರ), ಸುಮೇಶ್ ಶೆಟ್ಟಿ ರೇಣುಕನಗರ (ದ್ವಿ), ಪ್ರಶಾಂತ್ (ತೃ), ಮಹಿಳೆಯರಲ್ಲಿ ನೈನಾ ವಿಶ್ವನಾಥ್ (ಪ್ರ), ದೀಪಾ ಪ್ರಕಾಶ್ (ದ್ವಿ), ಸಬೀಹಾ (ತೃ), ಲಘು ಮೋಟಾರು ವಾಹನ ಪುರುಷರ ವಿಭಾಗದಲ್ಲಿ ಆದರ್ಶಗೌಡ (ಪ್ರ), ಯಶವಂತ್ (ದ್ವಿ), ಹಬೀಬುಲ್ಲಾ (ತೃ), ಮಹಿಳೆಯರಲ್ಲಿ ಸುಚಿತಾ ಉಚಿತ್ ಹೆಗ್ಡೆ (ಪ್ರ), ತಾಸೀನ್ (ದ್ವಿ), ಮೀನಾಕ್ಷಿ (ತೃ), ನಾಲ್ಕು ಚಕ್ರದ ಸರಕು ಸಾಗಣೆ ವಾಹನದಲ್ಲಿ ಕೆ.ಸಂತೋಷ್ ಅಕ್ಷರನಗರ (ಪ್ರ), ಸುಹಾನ್ (ದ್ವಿ), ಲಾಲಿ ಗೋರಿಗಂಡಿ (ತೃ), ತ್ರಿಚಕ್ರ ಪ್ರಯಾಣಿಕರ ಆಟೋದಲ್ಲಿ ವಿನೋದ್ (ಪ್ರ), ಹಬೀಬುಲ್ಲಾ (ದ್ವಿ), ಶಿವಕುಮಾರ್ (ತೃ), ತ್ರಿಚಕ್ರ ಸರಕು ಸಾಗಣೆ ವಿಭಾಗದಲ್ಲಿ ನವೀನ್ ಅಕ್ಷರನಗರ (ಪ್ರ), ಲಾರಿ ವಿಭಾಗದಲ್ಲಿ ಮಂಜು ಆರ್‌ಡಿಎಂ (ಪ್ರ), ಸುಜಯ್ (ದ್ವಿ), ಗೋಪಿ (ತೃ), ಜೆಸಿಬಿ, ಕ್ರೇನ್ ವಿಭಾಗದಲ್ಲಿ ರಘುನಂದನ್ ಆರ್‌ಡಿಎಂ (ಪ್ರ), ಹೊನ್ನಯ್ಯ (ದ್ವಿ), ಜಗದೀಶ್ (ತೃ), ಟ್ರ್ಯಾಕ್ಟರ್ ವಿಭಾಗದಲ್ಲಿ ರವಿ ಆರ್‌ಡಿಎಂ (ಪ್ರ), ಕೋಟಿ ರಮೇಶ್ (ದ್ವಿ), ತಿಪ್ಪೇಶ್ ಅಕ್ಷರನಗರ (ತೃ) ಪ್ರಶಸ್ತಿ ಪಡೆದರು.ಗೆಳೆಯರ ಬಳಗದ ಖಜಾಂಚಿ ಜಾನ್ ಡಿಸೋಜಾ, ಸುಧಾಕರ್ ಶೆಟ್ಟಿ, ಎಂ.ಎಸ್. ಚನ್ನಕೇಶವ, ಟಿ.ಎಂ. ಉಮೇಶ್, ದೀಪಕ್ ಕೊಳಲೆ, ರವಿಚಂದ್ರ, ಮೇನಕಾ ಪ್ರಕಾಶ್, ಕವಿತಾ ಕೇಶವ್, ಹೇಮಲತಾ, ಗೇರುಬೈಲು ನಟರಾಜ್, ಎಂ.ಎಸ್.ಅರುಣೇಶ್, ಸಿ.ಪಿ.ರಮೇಶ್, ಓ.ಡಿ.ಸ್ಟೀಫನ್, ಸುರೇಂದ್ರ, ರಾಘವೇಂದ್ರ, ಶಶಿಕಲಾ ಮತ್ತಿತರರು ಹಾಜರಿದ್ದರು.೦೨ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ಮಲ್ನಾಡ್ ಗೆಳೆಯರ ಬಳಗ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಬೃಹತ್ ವಾಹನ ಜಾಥಾಕ್ಕೆ ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್ ಚಾಲನೆ ನೀಡಿದರು. ಸುಧಾಕರ್ ಶೆಟ್ಟಿ, ಮಧುಸೂದನ್, ಸಂತೋಷ್‌ಕುಮಾರ್, ರವಿಚಂದ್ರ, ಅರುಣೇಶ್, ಜಾನ್ ಡಿಸೋಜಾ, ಟಿ.ಎಂ.ಉಮೇಶ್ ಇದ್ದರು.೦೨ಬಿಹೆಚ್‌ಆರ್ ೨, ೩: ಬೃಹತ್ ವಾಹನ ಜಾಥಾದಲ್ಲಿ ಗಮನ ಸೆಳೆದ ವಾಹನಗಳು.