ಬಿಜೆಪಿಯಲ್ಲಿ ಒಡೆದ ಮನಸುಗಳ ನಾಯಕರು, ಹಿಂದೂ ಮುಖಂಡರನ್ನು ಒಗ್ಗೂಡಿಸಲು ಹಾಗೂ ಪಕ್ಷವನ್ನು ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದ್ದಾರೆ.
ದಾವಣಗೆರೆ: ಬಿಜೆಪಿಯಲ್ಲಿ ಒಡೆದ ಮನಸುಗಳ ನಾಯಕರು, ಹಿಂದೂ ಮುಖಂಡರನ್ನು ಒಗ್ಗೂಡಿಸಲು ಹಾಗೂ ಪಕ್ಷವನ್ನು ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದರು.
ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಮುಂದೆ ಕರ್ನಾಟಕದಲ್ಲೂ ನಮ್ಮ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಈ ಹಿನ್ನೆಲೆ ಪಕ್ಷದಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ನಾನು ಮಾಡುತ್ತೇನೆ. ರಾಜ್ಯದಲ್ಲಿ, ದೇಶದಲ್ಲಿ ಬಿಜೆಪಿಯನ್ನು ನಿರಂತರ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದರು.
ಸಮಾನ ಮನಸ್ಕರನ್ನೆಲ್ಲಾ ಒಂದು ಫ್ಲಾಟ್ ಫಾರಂಗೆ ತರುವ ಕೆಲಸ ಮಾಡುತ್ತೇನೆ. ಎಲ್ಲ ಜಿಲ್ಲೆಗಳಲ್ಲೂ ನಾನೇ ಯಾತ್ರೆ ಮಾಡುತ್ತೇನೆ. ಎಲ್ಲ ಕಡೆಗಳಲ್ಲಿ ಈಗಾಗಲೇ ಕರೆ ಮಾಡಿ, ಮಾತನಾಡಿದ್ದೇನೆ. ನನ್ನ ಯಾತ್ರೆ ಉದ್ದೇಶದಲ್ಲಿ ಯಾವುದೇ ಸ್ವಾರ್ಥವೂ ಇಲ್ಲ ಎಂದರು.
ಬಳ್ಳಾರಿ ದೋಸ್ತ್‌ಗಳಾದ ಬಿ.ಶ್ರೀರಾಮುಲು- ಗಾಲಿ ಜನಾರ್ದನ ರೆಡ್ಡಿ ಮತ್ತೆ ಒಂತಾಗುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಕರೆದರೆ, ನಾನು ಹೋಗಿ ಮಾತನಾಡುತ್ತೇನೆ. ಒಡೆದ ಮನಸ್ಸುಗಳೆಂದರೆ ಎಲ್ಲರೂ ಸೇರುತ್ತೇವೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.