ಎಲ್ಲರ ವಿಶ್ವಾಸಗಳಿಸಿ ಸೇವೆ ಸಲ್ಲಿಸಿದ ನ್ಯಾಯಾಧೀಶರು: ರಾಹುಲ್ ಶೆಟ್ಟಿಗಾರ್

KannadaprabhaNewsNetwork |  
Published : May 04, 2026, 01:15 AM IST
ಹಿರಿಯ ನ್ಯಾಯಾಧೀಶರಾದ ವೈದ್ಯಶ್ರೀಕಾಂತ್ ಅವರಿಗೆ ಬೀಳ್ಕೊಡಿಗೆ ಸಮಾರಂಭ | Kannada Prabha

ಸಾರಾಂಶ

ತರೀಕೆರೆ ಹಿರಿಯ ನ್ಯಾಯಾಧೀಶ ವೈದ್ಯಶ್ರೀಕಾಂತ್ ಬಹಳ ಉತ್ತಮ ರೀತಿಯಲ್ಲಿ ಎಲ್ಲರ ವಿಶ್ವಾಸಗಳಿಸಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದಾರೆ ಎಂದು ಸಿವಿಲ್ ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಹಿರಿಯ ನ್ಯಾಯಾಧೀಶ ವೈದ್ಯಶ್ರೀಕಾಂತ್ ಬಹಳ ಉತ್ತಮ ರೀತಿಯಲ್ಲಿ ಎಲ್ಲರ ವಿಶ್ವಾಸಗಳಿಸಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದಾರೆ ಎಂದು ಸಿವಿಲ್ ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೂರು ವರ್ಷ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಜಮಖಂಡಿಗೆ ವರ್ಗಾವಣೆಯಾದ ಹಿರಿಯ ನ್ಯಾಯಾಧೀಶ ವೈದ್ಯಶ್ರೀಕಾಂತ್ ಅವರಿಗೆ ತರೀಕೆರೆ ಅಡ್ವೊಕೇಟ್ ಅಸೋಸಿಯೇಶನ್ ನಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ಒಟ್ಟಿಗೆ ಕೆಲಸ ನಿರ್ವಹಿಸುವ ಸೌಭಾಗ್ಯ ನಮ್ಮದಾಗಲಿ ಎಂದು ಆಶಿಸಿದರು.

ಹೆಚ್ಚುವರಿ ನ್ಯಾಯಾಧೀಶರಾದ ಊರ್ಮಿಳಾ ಮಾತನಾಡಿ ನನಗೆ ಸಹೋದರರಾಗಿ ಮಾರ್ಗದರ್ಶನ ನೀಡುತ್ತಿದ್ದರು ಎಂದು ಹೇಳಿದರು.

ವಕೀಲ ಎಂ.ಕೆ.ತೇಜಮೂರ್ತಿ ಮಾತನಾಡಿ ಕಾನೂನು ಸಾಗರವಿದ್ದಂತೆ ವಕೀಲರು ಮತ್ತು ನ್ಯಾಯಾಧೀಶರು ಹೆಚ್ಚಿನ ಜ್ಞಾನ ಹೊಂದಿದ್ದು ನ್ಯಾಯವಿತರಣೆ ಮಾಡಬೇಕಾಗುತ್ತದೆ. ನ್ಯಾಯಾಧೀಶರು ಹೆಚ್ಚಿನ ಜ್ಞಾನ ಹೊಂದಿದ್ದರೆ, ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಅನುಕೂಲ. ಇಂತಹ ಜ್ಞಾನವನ್ನು ಹೊಂದಿರುವ ಹಿರಿಯ ನ್ಯಾಯಾಧೀಶರಾದ ವೈದ್ಯಶ್ರೀಕಾಂತ್ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.ಸಂಘದ ಉಪಾಧ್ಯಕ್ಷ ಎಸ್.ರಜನೀಶ್ ಮಾತನಾಡಿ ಬಾರ್ ಮತ್ತು ಬೆಂಚ್ ನಡುವೆ ಸೌಹಾರ್ದತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಶೀಘ್ರ ಅವರಿಗೆ ಹೆಚ್ಚಿನ ಮುಂಬಡ್ತಿ ದೊರಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.ವಕೀಲ ಕೆ.ಜಂದ್ರಪ್ಪ ಮಾತನಾಡಿ ನ್ಯಾಯಾದೀಶರು ಬಹಳ ಸೌಮ್ಯ ಸ್ವಭಾವದವರು. ಅದೇ ರೀತಿ ಉತ್ತಮವಾಗಿ ನ್ಯಾಯ ವಿತರಣೆ ಮಾಡುತ್ತಿದ್ದರು ಎಂದು ಹೇಳಿದರು.ವಕೀಲ ಬಿ.ಪಿ.ವಿಕಾಸ್ ,ತರೀಕೆರೆ ನ್ಯಾಯಾಲಯದಲ್ಲಿ ಅಧ್ಯಕ್ಷ ಎಚ್.ಎಸ್.ಶಿವಶಂಕರನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಅಮರನಾಥ್, ಕಾರ್ಯದರ್ಶಿ ಎ.ನವೀನ್, ವಕೀಲರಾದ ಎಸ್.ಸುರೇಶ್ ಚಂದ್ರ, ಕ್ರೀಡಾ ಕಾರ್ಯದರ್ಶಿ ವಸಂತ್, ಶ್ಹೀನಿವಾಸ್, ಪ್ಪಭುಲಿಂಗ, ಟಿ.ಎಂ.ರಾಜು, ಸುಮಂತ್, ವೀಣಾ, ಮಹಿಳಾ ವಕೀಲರು ಭಾಗವಹಿಸಿದ್ದರು.-

3ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಹಿರಿಯ ನ್ಯಾಯಾಧೀಶ ವೈದ್ಯಶ್ರೀಕಾಂತ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಡ್ವೊಕೇಟ್ ಅಸೋಸಿಯೇಶನ್ ಅಧ್ಯಕ್ಷ ಎಚ್.ಎಸ್.ಶಿವಶಂಕರನಾಯ್ಕ, ವಕೀಲರಾದ ಎಸ್.ಸುರೇಶ್ ಚಂದ್ರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸಿ: ಶಿವಸಿದ್ದೇಶ್ವರ ಶ್ರೀ
ಕಾಗದರಹಿತ ನೋಂದಣಿ ವ್ಯವಸ್ಥೆ ತಕ್ಷಣ ಸ್ಥಗಿತಗೊಳಿಸಿ