ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲಾಪೂರದಲ್ಲಿ ಇತ್ತೀಚೆಗೆ ಕೊಲೆಯಾದ ದಲಿತ ಮಹಿಳೆ ಸಾವಿಗೆ ನ್ಯಾಯ ಕೊಡಿಸುವುದಕ್ಕಾಗಿ ಅ.20ರಂದು ಬೃಹತ್ ಸಮಾವೇಶ ನಡೆಸಲು ಜಿಲ್ಲಾ ದಲಿತ, ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ಸಮಿತಿ ನಿರ್ಧರಿಸಿದೆ.
ಜಿಲ್ಲಾ ದಲಿತ, ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ಸಮಿತಿ ತೀರ್ಮಾನ
ಕನ್ನಡಪ್ರಭ ವಾರ್ತೆ ಕನಕಗಿರಿ
ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲಾಪೂರದಲ್ಲಿ ಇತ್ತೀಚೆಗೆ ಕೊಲೆಯಾದ ದಲಿತ ಮಹಿಳೆ ಸಾವಿಗೆ ನ್ಯಾಯ ಕೊಡಿಸುವುದಕ್ಕಾಗಿ ಅ.20ರಂದು ಬೃಹತ್ ಸಮಾವೇಶ ನಡೆಸಲು ಜಿಲ್ಲಾ ದಲಿತ, ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ಸಮಿತಿ ನಿರ್ಧರಿಸಿದೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಂಚಾಲಕ ದಲಿತ ಮುಖಂಡ ಬಸವರಾಜ ಶಿಲವಂತರ ಮಾತನಾಡಿ, ಯಲಬುರ್ಗಾ ತಾಲೂಕಿನ ಸಂಗನಹಾಳದಲ್ಲಿ ದಲಿತ ಯುವಕನ
ಹತ್ಯೆ ನಡೆದಿದ್ದು, ಈ ಕುರಿತು ಸೆ.17 ಹಾಗೂ 18ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಂಗನಹಾಳದವರೆಗೆ ಪಾದಯಾತ್ರೆ ಮೂಲಕ ಸ್ವಾಭಿಮಾನ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸೆ.19ರಂದು ವಿಠಲಾಪೂರ ಗ್ರಾಮದಿಂದ ಗಂಗಾವತಿ ಡಿವೈಎಸ್ಪಿ ಪೊಲೀಸ್ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ದಲಿತ ಮಹಿಳೆಯ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಂತರ ಪ್ರಗತಿಪರ ಸಂಘಟನೆಯ ತಾಲೂಕು ಅಧ್ಯಕ್ಷ ಪಾಮಣ್ಣ ಅರಳಿಗನೂರು ಮಾತನಾಡಿ, ಅ.20ರಂದು ಗಂಗಾವತಿ ತಾಲೂಕಿನ ವಿಠಲಾಪೂರ ಗ್ರಾಮದಲ್ಲಿ ಜಿಲ್ಲೆಯ ದೌರ್ಜನ್ಯ ಪ್ರಕರಣಗಳ ಸಭೆ ಹಮ್ಮಿಕೊಂಡಿದ್ದು, ಇದರಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.