ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ಭಾನುವಾರ ಮಹಿಳೆಯರಿಗೆ ಕ್ವಾರ್ಟ ರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಪುರುಷರಿಗೆ ಕ್ವಾಟರ್ ಫೈನಲ್. ಸೆಮಿ ಫೈನಲ್ , ಫೈನಲ್ ನಡೆಯಲಿದೆ.
ಮಹಿಳಾ ವಿಭಾಗದಲ್ಲಿ ಪುದಿಯೋಕ್ಕಡ, ಚೊಟ್ಟೆಯಂಡಮಾಡ, ಕಾಂಡಂಡ, ಚಟ್ಟಂಡ, ಪಟ್ರಪಂಡ, ಅಜ್ಜಮಾಡ, ನಾಪಂಡ ತಂಡಗಳು ಸೇರಿದಂತೆ ಹಲವು ತಂಡಗಳು ಮುನ್ನಡೆ ಪುರುಷರ ವಿಭಾಗದಲ್ಲಿ ಮಣವಟ್ಟಿರ, ಬಾಚಮಂಡ, ಮಾಚಿಮಾಡ, ಚನ್ನಪ್ಪಂಡ, ಚೊಟ್ಟೆಯ೦ಡಮಾಡ ತಂಡಗಳು ಮುನ್ನಡೆ ಸಾಧಿಸಿವೆ. ಮಹಿಳಾ ತಂಡದಲ್ಲಿ ಕಳೆದ ವರ್ಷ ವಿಜೇತರಾದ ಅನ್ನಾಲಮಡ ತಂಡವನ್ನು ಬಲಮುರಿಯ ಬೊಳ್ಳಚೆಟ್ಟಿರ ತಂಡ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ.ಕ್ರೀಡಾಕೂಟದಲ್ಲಿ ಮಾಳೆಟಿರ ಶ್ರೀನಿವಾಸ್ ಮತ್ತು ಬಾಳೆಯಡ ದಿವ್ಯ ಮಂದಪ್ಪ , ಮುಂಡಚಾಡಿರ ರೀನಿ ವೀಕ್ಷಕ ವಿವರಣೆ ನೀಡಿದರು.
ಇಂದಿನ ಪಂದ್ಯಗಳು: ಮಹಿಳಾ ಕ್ವಾರ್ಟರ್ ಫೈನಲ್ ಪಂದ್ಯಗಳು: 9.45 ಕ್ಕೆ ಚೆಟ್ಟಂಡ-ಕಾಂಡಂಡ, 10 ಗಂಟೆಗೆ ನಾಪಂಡ- ಬಾದುಮಂಡ, 10.15 ಕ್ಕೆ ಬೊಳ್ಳಚೆಟ್ಟಿರ- ಅಜ್ಜಮಾಡ, 11.30 ಪುದಿಯೊಕ್ಕಡ –ಚೊಟ್ಟೆಯಂಡಮಾಡಪುರುಷರ ಕ್ವಾರ್ಟರ್ ಫೈನಲ್ ಪಂದ್ಯಗಳು: 10:00 ಗಂಟೆಗೆ ಮಾಲೆಟ್ಟಿರ(ಕುಕ್ಲೂರು) –ಬಾದುಮಂಡ, 10.30 ಕ್ಕೆ ಪಟ್ರಪಂಡ-ಅಲ್ಲುಮಾಡ, 11ಗಂಟೆಗೆ ಕೊಟ್ಟಂಗಡ -ಮಾಚಿ ಮಂಡ, 11.30ಕ್ಕೆ ಚೀಯಕಪೂವಂಡ-ಚಂಗುಲಂಡ