ಮದ್ದೂರು:
ಗ್ರಾಮದ ವರದರಾಜ ಅವರ ಜಮೀನಿನಲ್ಲಿ ಹಲವು ದಿನಗಳಿಂದ ಕಾಣಿಸಿಕೊಂಡು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಸುಮಾರು 6 ವರ್ಷದ ಗಂಡು ಚಿರತೆಯನ್ನು ವಲಯ ಅರಣ್ಯಾಧಿಕಾರಿ ಗವಿಯಪ್ಪ ನೇತ್ರತ್ವದ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಸಿದ್ದೇಗೌಡನದೊಡ್ಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ 18 ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳು ಮತ್ತು ಬೀದಿ ನಾಯಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.ಈ ಹಿನ್ನೆಲೆಯಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸತ್ತ ನಾಯಿಯನ್ನು ಬೋನಿನಲ್ಲಿ ಇರಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಶನಿವಾರ ರಾತ್ರಿ ನಾಯಿ ತಿನ್ನಲು ಬಂದ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿದೆ. ಸೆರೆ ಹಿಡಿಯಲಾದ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.ದಳವಾಯಿಕೆರೆಯಲ್ಲಿ ಅಪರಿಚಿತ ಪುರುಷನ ಶವಪತ್ತೆ
ಈಚೆಗೆ ದಳವಾಯಿ ಕೆರೆಯಲ್ಲಿ ಮುಖ ಕೆಳಡೆಯಿರುವ ರೀತಿ ಅಪರಿತನ ಶವ ತೇಲುತ್ತಿದ್ದನ್ನು ಕಂಡ ಗ್ರಾಪಂ ಬಿಲ್‌ಕಲೆಕ್ಟರ್ ಜಗದೀಶ್ ನೀಡಿದ ದೂರಿನನ್ವಯ ಸ್ಥಳಮಹಜರ್ ನಡೆಸಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಅಪರಿಚಿತನ ಬಗ್ಗೆ ಮಾಹಿತಿಯಿರುವವರು ಪೊಲೀಸ್ ಠಾಣೆ ಸಂಪರ್ಕಿಸಲು ಕೋರಿದ್ದಾರೆ.ಮೃತವ್ಯಕ್ತಿ ಬಲಗೈಗೆ ಕಪ್ಪುದಾರ ಕಟ್ಟಿದ್ದು, ಮೈಮೇಲೆ ಬಿಳಿಯ ಬಣ್ಣದ ಬನಿಯನ್, ಸೀಮೆಂಟ್ ಕಲರ್ ಚಡ್ಡಿಯನ್ನು ಧರಿಸಿದ್ದಾನೆ. ಕೆರೆಯ ದಂಡೆಯಲ್ಲಿ ಹಸಿರು ಬಣ್ಣದ ಒಂದು ಟೀ ಶರ್ಟ್ ಕಪ್ಪುಬಣ್ಣದ ಒಂದು ಪ್ಯಾಂಟ್, ಬಿಳಿಯ ಬಣ್ಣದ ಎರಡು ಟವಲ್, ಕಪ್ಪು ಬಣ್ಣದ ಚಪ್ಪಲಿಗಳು ದೊರೆತಿವೆ. ಒಂದೆರಡು ದಿನಗಳ ಹಿಂದೆ ಕೆರೆಯಲ್ಲಿ ಬಿದ್ದಿದ್ದು ಮೃತದೇಹ ತೇಲುವ ಮಾದರಿಯಲ್ಲಿ ನೀರಿನಲ್ಲಿ ದೊರೆತಿದ್ದು, ಮುಖ ಗುರುತು ಹಿಡಿಯದಷ್ಟು ಪ್ರಮಾಣದಲ್ಲಿ ಗಾಯವಾಗಿದೆ, ಇಂತಹ ಚಹರೆಯುಳ್ಳ ವ್ಯಕ್ತಿಕಾಣೆಯಾಗಿದ್ದಲ್ಲಿ ಮಾಹಿತಿ ತಿಳಿದಲ್ಲಿ ಪೊಲೀಸರನ್ನು ಸಂಪರ್ಕಿಸಲು ಎಸ್.ಐ ಪ್ರಮೋದ್ ಕೋರಿದ್ದಾರೆ.