ಗ್ರಂಥಾಲಯ ಅಂಗೈಯಲ್ಲಿನ ಜ್ಞಾನ ಭಂಡಾರ

KannadaprabhaNewsNetwork |  
Published : Aug 14, 2024, 12:54 AM IST
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ನಡೆಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಗ್ರಂಥಾಲಯಗಳು ಅಂಗೈಯಲ್ಲಿನ ಜ್ಞಾನ ಭಂಡಾರ. ಗ್ರಂಥಗಳು ಜಗತ್ತಿನ ಜ್ಞಾನ ಭಂಡಾರದ ಕೀಲಿ ಕೈ. ಉತ್ತಮ ವ್ಯಕ್ತಿತ್ವ ಮತ್ತು ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯದ ಪಾತ್ರ ಪ್ರಧಾನವಾದುದು ಎಂದು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎಂ.ಜಿ. ಹೆಗಡೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗ್ರಂಥಾಲಯಗಳು ಅಂಗೈಯಲ್ಲಿನ ಜ್ಞಾನ ಭಂಡಾರ. ಗ್ರಂಥಗಳು ಜಗತ್ತಿನ ಜ್ಞಾನ ಭಂಡಾರದ ಕೀಲಿ ಕೈ. ಉತ್ತಮ ವ್ಯಕ್ತಿತ್ವ ಮತ್ತು ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯದ ಪಾತ್ರ ಪ್ರಧಾನವಾದುದು ಎಂದು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎಂ.ಜಿ. ಹೆಗಡೆ ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಗ್ರಂಥಗಳು ವಿಶ್ವದ ಜ್ಞಾನ ಉಣಬಡಿಸುತ್ತವೆ. ಆದರೆ, ಇಂದಿನ ಸಾಮಾಜಿಕ ಜಾಲತಾಣಗಳು ಓದುವ ವರ್ಗವನ್ನು ಕಡಿಮೆ ಮಾಡಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗ್ರಂಥಾಲಯಗಳು ಎಲ್ಲರಿಗೂ ತಲುಪುವ ಕಾರ್ಯ ಮಾಡಬೇಕು ಎಂದರು.

ಗ್ರಂಥಾಲಯದ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಂಥಾಲಯದ ಪಾತ್ರ ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮೊದಲ ಹತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಗ್ರಂಥಾಲಯದ ಉಪಗ್ರಂಥಪಾಲಕ ಡಾ.ಭವಾನಿ ಶಂಕರ ಅವರು ಗ್ರಂಥಾಲಯದ ಚಾರಿತ್ರಿಕ ಹಿನ್ನೆಲೆ, ಅದರ ಬೆಳವಣಿಗೆ ಹಾಗೂ ಡಾ.ಎಸ್.ಆರ್. ರಂಗನಾಥನ್‌ ಅವರ ಬದುಕು-ಬರಹದ ಕುರಿತು ಮಾತನಾಡಿದರು.

ರಶ್ಮೀ ಪಾಟೀಲ ನಿರೂಪಿಸಿದರು, ಶಿವಾನಂದ ಬೊಮ್ಮಣ್ಣವರ ಸ್ವಾಗತಿಸಿದರು. ಭಾಗ್ಯಶ್ರೀ ಕುಲಕರ್ಣಿ ವಂದಿಸಿದರು. ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯವಾಗಿ ಗೂಗ್ಲಿ ಹಾಕ್ಬೇಕು, ಇಲ್ಲದಿದ್ರೆ ಯಶಸ್ಸು ಸಿಗಲ್ಲ: ಸತೀಶ್‌
ಮರ್ಯಾದಾ ಹತ್ಯೆಯಂಥ ಕೃತ್ಯ ತಡೆಗೆ ವಿಶೇಷ ಕಾನೂನು : ಸಿಎಂ