ಗ್ರಂಥಾಲಯವೆಂದರೆ ಜ್ಞಾನದ ಸಾಗರ: ಡಾ. ಮಠ

KannadaprabhaNewsNetwork |  
Published : Aug 13, 2026, 02:15 AM IST
ಗದುಗಿನ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಪ್ರಯುಕ್ತ ಗ್ರಂಥಾಲಯ ದಿನಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್.ಆರ್. ರಂಗನಾಥನ್ ಅವರೇ ಪ್ರಮುಖ ಕಾರಣ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ರಂಗನಾಥನ್ ಅವರ ಸಂದೇಶಗಳು ಮಾರ್ಗದರ್ಶಕವಾಗಿವೆ.

ಗದಗ: ಪ್ರತಿಯೊಂದು ಜೀವಿಗೆ ಬದುಕಲು ನೀರು, ಗಾಳಿ, ಬೆಳಕು ಮತ್ತು ಆಹಾರ ಹೇಗೆ ಮುಖ್ಯವೋ, ಹಾಗೆಯೇ ಪುಸ್ತಕಗಳೂ ಅತ್ಯಗತ್ಯ. ಗ್ರಂಥಾಲಯಗಳೆಂದರೆ ಜ್ಞಾನದ ಸಾಗರ ಎಂದು ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ. ಕೆ. ಮಠ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಪ್ರಯುಕ್ತ ಗ್ರಂಥಾಲಯ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್.ಆರ್. ರಂಗನಾಥನ್ ಅವರೇ ಪ್ರಮುಖ ಕಾರಣ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ರಂಗನಾಥನ್ ಅವರ ಸಂದೇಶಗಳು ಮಾರ್ಗದರ್ಶಕವಾಗಿವೆ. ಅವರು ನೀಡಿದ ಗ್ರಂಥಾಲಯದ ಪಂಚ ಸೂತ್ರಗಳು ಎಲ್ಲ ದೇಶಗಳಿಗೂ ಮಾನ್ಯವಾಗಿವೆ. ದೇಶದಲ್ಲಿ ಡಾ. ಎಸ್.ಆರ್. ರಂಗನಾಥನ್ ಅವರಷ್ಟು ಗ್ರಂಥಾಲಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ ಎಂದರು.

ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕ ನಂದಾ ಬೆಟದೂರು ಮಾತನಾಡಿ, ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ರಂಗನಾಥನ್ ಅವರು ಮೊದಲಿಗರು. ಆದ್ದರಿಂದ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಹಳ್ಳಿಯಿಂದ ಹಿಡಿದು ದೆಹಲಿಯವರೆಗೆ ಗ್ರಂಥಾಲಯದ ಮೂಲ ತತ್ವಗಳನ್ನು ತಲುಪಿಸುವಲ್ಲಿ ಅವರ ನಿಷ್ಠೆ ಮತ್ತು ಶ್ರಮ ಅಪಾರವಾದದ್ದು ಎಂದರು.

ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. 17ರಂದು ರಫ್ತು ಪ್ರೋತ್ಸಾಹಧನ ಕಾರ್ಯಾಗಾರ

ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದೊಂದಿಗೆ ಒಂದು ದಿನದ ರಪ್ತು ಪ್ರೋತ್ಸಾಹನ ಕಾರ್ಯಾಗಾರ ಆ. 17ರಂದು ಬೆಳಗ್ಗೆ 10ರಂದು ನಗರದ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್.ಪಾಟೀಲ ಸಭಾಭವನ ಎಪಿಎಂಸಿ ಯಾರ್ಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.ಜವಳಿ ಕ್ಷೇತ್ರದಲ್ಲಿ ರಪ್ತು ಪ್ರೋತ್ಸಾಹನ ಕುರಿತು ಜವಳಿ ಹಾಗೂ ಸಿದ್ಧ ಉಡುಪು ರಫ್ತಿನಲ್ಲಿ ಅಗತ್ಯವಿರುವ 6 ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕಾರ್ಯಾಗಾರ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ ಕೈಮಗ್ಗ ಮತ್ತು ಜವಳಿ ಇಲಾಖೆ 2ನೇ ಮಹಡಿ ರೂಂ ನಂ. 2026 ಜಿಲ್ಲಾಡಳಿತ ಭವನ ಗದಗ ದೂ. 08372- 238649, ಉಪನಿರ್ದೇಶಕ ಅಜೀತ ಜಿ. ನಾಯಕ ಮೊ. 9845906227 ಹಾಗೂ ಜವಳಿ ಪ್ರವರ್ಧನಾಧಿಕಾರಿ ಎಸ್.ಎಂ. ಗಡಗಿ ಮೊ. 9916582238 ಸಂಪರ್ಕಿಸಬಹುದು ಎಂದು ಗದಗ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಅಜೀತ ಜಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಗಸ್ಟ್‌ 15ರಿಂದ ಜಾಬ್‌ ಕಾರ್ಡ್‌ ಮೇಳ, ವಿಶೇಷ ಜಾಗೃತಿ ಅಭಿಯಾನ
ಗ್ರಂಥಾಲಯಗಳು ಜ್ಞಾನದ ಭಂಡಾರ: ಡಾ. ಅನ್ನದಾನೀಶ್ವರ ಶ್ರೀ