ಸೇವಾ ಕೈಂಕರ್‍ಯಗಳಿಂದ ಸಂತೃಪ್ತಿ ಜೀವನ: ಸುತ್ತೂರು ಶ್ರೀ

KannadaprabhaNewsNetwork |  
Published : Oct 19, 2026, 01:45 AM IST
ಕಡ್ಡಾಯ | Kannada Prabha

ಸಾರಾಂಶ

ಕೌಟುಂಬಿಕ ಸಂಬಂಧ, ಸಾಂಸ್ಕೃತಿಕ ಬೆಸುಗೆ, ಸಾಮಾಜಿಕ ಸಂಬಂಧಗಳು ಕಡಿಮೆಯಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಲಯನ್ಸ್ ಸೇವಾ ಸಂಸ್ಥೆ ತನ್ನ ಸೇವಾ ಕೈಂಕರ್ಯಗಳನ್ನು ನಿರಂತವಾಗಿ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸುತ್ತೂರು ವೀರ ಸಿಂಹಾಸನ ಮಠಾಧ್ಯಕ್ಷ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೌಟುಂಬಿಕ ಸಂಬಂಧ, ಸಾಂಸ್ಕೃತಿಕ ಬೆಸುಗೆ, ಸಾಮಾಜಿಕ ಸಂಬಂಧಗಳು ಕಡಿಮೆಯಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಲಯನ್ಸ್ ಸೇವಾ ಸಂಸ್ಥೆ ತನ್ನ ಸೇವಾ ಕೈಂಕರ್ಯಗಳನ್ನು ನಿರಂತವಾಗಿ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸುತ್ತೂರು ವೀರ ಸಿಂಹಾಸನ ಮಠಾಧ್ಯಕ್ಷ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಲಯನ್ಸ್ ಸಂಸ್ಥೆ ಅಯೋಜಿಸಲಾಗಿದ್ದ 50ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಡವ- ಶ್ರೀಮಂತರು ಎಂಬ ತಾರತಮ್ಯ ನೀತಿ ಇಂದಿಗೂ ಜೀವಂತವಾಗಿದೆ. ಐಷಾರಾಮಿ ಬದುಕಿನೆಡೆ ತನ್ನ ಆಲೋಚನೆಯನ್ನು ವಿಸ್ತರಿಸಿಕೊಂಡಿರುವ ಮನುಷ್ಯ, ತಾನು ಸರಳ ಬದುಕು ನಡೆಸುವುದು ಸುಲಭದ ಮಾತಲ್ಲ, ಇಂದು ದೇಶ ನಾಗರಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿದೆ, ಆದರೆ ಅಷ್ಟೆ ವೇಗವಾಗಿ ನಮ್ಮ ಆಚಾರ, ವಿಚಾರ, ನಮ್ಮ ಸಂಸ್ಕೃತಿ ಪರಂಪರೆ, ಕೌಟುಂಬಿಕ ವಿಚಾರಗಳಲ್ಲಿ ಅಷ್ಟೆ ವೇಗವಾಗಿ ಕ್ಷೀಣಿಸುತ್ತಿದೆ. ಮಾನವ ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸಗಳು ಕ್ಷೀಣಿಸುತ್ತಿರುವ ಪ್ರಸ್ತುತ ಸಂದರ್ಬದಲ್ಲಿ ಸೇವೆಯಿಂದ ಮಾತ್ರ ಸಂತೃಪ್ತಿ ಸಾಧ್ಯ ಎಂದರು.

ಸೇವೆ ಎಂಬುದು ಶ್ರೀಮಂತರೇ ಮಾಡಬೇಕು, ಬಡವರ ಮಾಡಬಾರದೆಂಬ ನಿಯಮವಿಲ್ಲ, ಸೇವಾಮುಖಿ ಚಟುವಟಿಕೆಗಳಿಂದ ಹೆಚ್ಚು ಸಂತೃಪ್ತಿ, ಸಮಾಧಾನ ಕಾಣಲು ಸಾಧ್ಯ. 1917ರಲ್ಲಿ ಶಿಕಾಗೋದಲ್ಲಿ ಪ್ರಾರಂಭವಾದ ಲಯನ್ಸ್ ಅಂತರ್ ರಾಷ್ಟ್ರೀಯ ಸಂಸ್ಥೆ ಇಂದು ತನ್ನ ವ್ಯಾಪ್ತಿಯನ್ನು ತನ್ನ ಸೇವಾ ಕೈಂಕರ್ಯಗಳ ಮೂಲಕ ವಿಸ್ತರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ ಕೊಳ್ಳೇಗಾಲದ ಸಂಸ್ಥೆಗೆ 50 ವರುಷ ತುಂಬಿದ್ದು ಅಷ್ಟು ವರ್ಷಗಳ ಕಾಲ ಕೈಗೊಂಡ ಸಾರ್ಥಕ ಸೇವೆಗಳು ಶ್ಲಾಘನೀಯ, 107 ವರುಷಗಳ ಕಾಲ ಲಯನ್ಸ್ ಸೇವೆ ತನ್ನ ಸೇವೆಯ ಮೂಲಕ ನಿರಂತವಾಗಿ ಸೇವೆ ಸಲ್ಲಿಸಿ ಇಂದಿಗೂ ತನ್ನ ಸೇವೆ ವಿಸ್ತರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಬೆಳ್ಳಿ ಹಬ್ಬವನ್ನು ಇದೇ ಹಾಲ್‌ನಲ್ಲಿ ಸಂಸ್ಥೆ ಈ ಹಿಂದೆ ಆಚರಿಸಿದ್ದು ಇದೇ ಸಭಾಂಗಣದಲ್ಲಿ. ಈಗ ಚಿನ್ನದ ಹಬ್ಬಆಚರಿಲಾಗುತ್ತಿರುವುದು ಸಂತಸದ ವಿಚಾರ ಎಂದರು.

ಅನೇಕ ಸಂಘ ಸಂಸ್ಥೆಗಳು ಉತ್ಸಾಹದಿಂದ ಪ್ರಾರಂಭಗೊಂಡಿವೆ, ಆದರೆ ಅದೇ ಉತ್ಸಾಹದಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದ ಹಿನ್ನೆಲೆ ಅಂತಹ ಸಂಸ್ಥೆಗಳ ಸ್ಥಗಿತಗೊಂಡಿರುವುದನ್ನು ನಾವು ಕಾಣಬಹುದು. ಈ ಪೈಕಿ ಲಯನ್ಸ್ ಸಂಸ್ಥೆ ನಮ್ಮೆಲ್ಲರ ಮುಂದೆ ನಾನಾ ಸೇವೆಗಳ ಮೂಲಕ ಜ್ವಲಂತ ಸಾಕ್ಷಿ ಮಾತ್ರವಲ್ಲ ಉದಾಹರಣೆಯಾಗಿದೆ ಎಂದರು.

ಈ ಸಂಸ್ಥೆ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ನಿರಂತವಾಗಿ ಮಾಡಿಕೊಂಡು ಬಡವರ ಸೇವೆ ಹಿಂದಿನಿಂದಲೂ ಮಾಡುತ್ತ ಬಂದಿದೆ. ಖ್ಯಾತ ವೈದ್ಯ ಡಾ.ಮೋದಿ ಮೈಸೂರಿನಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಶಸ್ತ್ರಚಿಕಿತ್ಸೆ ಮಾಡಿಕೊಂಡು ಬಂದಿದ್ದರು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ಸಹ ಕೇಳಿ ಬಂತು. ಆದರೆ ಅವರ ಯಾವುದೇ ಆರಪರೇಷನ್ ವಿಫಲವಾಗಿರಲಿಲ್ಲ, ಒಳ್ಳೇ ಉದ್ದೇಶ, ಶ್ರದ್ದೆ, ಸೇವಾ ಮನೋಭಾವವಿದ್ದರೆ ಮಾಡಿದ ಕೆಲಸ ಯಶಸ್ವಿಯಾಗುತ್ತದೆ ಎಂಬುದಕ್ಕೆ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ನಮ್ಮೆಲ್ಲರ ಮುಂದೆ ಉದಾಹರಣೆಯಾಗಿವೆ ಎಂದರು.

ಸಂಸ್ಥಾಪಕ ಅಧ್ಯಕ್ಷ ಡಾ.ಶಿವರುದ್ರಸ್ವಾಮಿ, ಗಿರಿರಾಜನ್, ಡಾ. ಶ್ರೀಧರ್, ಜಿ ಎಸ್ ಎಂ ಪ್ರಸಾದ್, ವಿರೂಪಾಕ್ಷ. ಚನ್ನಮಾದೇಗೌಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ವ್ಹೀಲ್ ಛೇರ್, ಹೊಲಿಗೆಯಂತ್ರ, ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಸೇರಿದಂತೆ ಹಲವು ಸೇವಾ ಕೈಂಕರ್ಯ ನಡೆಸಲಾಯಿತು. ಅಶ್ವಥ್ ನಾರಾಯಣಸ್ವಾಮಿ, ಮತಿದೇವಕುಮಾರ್, ಚನ್ನಮಾದೇಗೌಡ, ಮಾದೇಶ್, ಚೇತನ್, ವಿರೂಪಾಕ್ಷ, ಸುಂದ್ರಪ್ಪ, ಡಾ.ಶ್ರೀಧರ್, ಸಿದ್ದೆಗೌಡ, ಡಾ.ಸಿದ್ದೆಗೌಡ, ಹರ್ಷಪ್ರಕಾಶ್, ಮಾದೇಶ್, ಕುಮಾರಕೃಷ್ಣ, ಆನಂದರಾಮಶೆಟ್ಟಿ, ವಿಶ್ವನಾಥ್, ಹೇಮವರ್ಧಿನಿ , ಮುಡಿಗುಂಡ ಸುಂದ್ರಪ್ಪ, ಪ್ರೇಮಲತಾ ಕೃಷ್ಣಸ್ವಾಮಿ, ನಾಗರಾಜಪ್ಪ ಇತರರು ಹಾಜರಿದ್ದರು.

107 ವರ್ಷಗಳ ಕಾಲ ಸಂಸ್ಥೆ ಸಾರ್ಥಕ ಸೇವೆ ಮಾಡಿದ್ದು ಇನ್ನಷ್ಟು ಸೇವೆಗೆ ಸಂಸ್ಥೆ ಸಜ್ಜಾಗಿದೆ. ಕೈಲಾದ ಮಟ್ಟಿಗೆ ಸಂಸ್ಥೆ ತನ್ನ ನಿರಂತರ ಸೇವೆ ಮುಂದುವರಿಸಿದ್ದು ಇದಕ್ಕೆ ಎಲ್ಲರೂ ಸಹಕರಿಸುತ್ತಿದ್ದಾರೆ. ಸೇವೆ ಎಂಬುದು ನಿಂತ ನೀರಲ್ಲ, ಗಣ್ಯರು, ಯುವ ಪೀಳಿಗೆ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಮಾಡುವ ಮೂಲಕ ಕೊಡುಗೆ ನೀಡಿ.

ಡಾ.ಕೃಷ್ಣೇಗೌಡ ಪದಾಧಿಕಾರಿ, ಲಯನ್ಸ್ 317 ಜಿಲ್ಲೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆತೆರೆ
ಮಹಿಳಾ ದಸರಾ: ರಂಗು ರಂಗಿನ ಬಣ್ಣಗಳಿಂದ ರಂಗವಲ್ಲಿ ಚಿತ್ತಾರ ಬಿಡಿಸಿದ ಮಹಿಳೆಯರು