ಕನ್ನಡಪ್ರಭ ವಾರ್ತೆ ಜಗಳೂರು
ಬಂಗಾರಕ್ಕನಗುಡ್ಡ ಗ್ರಾಮದ ಸರ್ವೆ ನಂಬರ್ 44ರ ಜಮೀನಿನಲ್ಲಿ ಕೆಇಬಿ ಲೈನ್ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದ ** ''''Resonia, Ananthaapur II REZ Transmission Limited'''' ** ಖಾಸಗಿ ಕಂಪನಿಯು ಯಾವುದೇ ಭದ್ರತಾ ನಿಯಮಗಳನ್ನು ಪಾಲಿಸದೇ ಅ.17ರ ಶನಿವಾರ ಸಂಜೆ 4:30ರ ವೇಳೆಗೆ, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡದೇ, ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೇ ಬೃಹತ್ ಕಲ್ಲು ಬಂಡೆಗಳಿಗೆ ರಂಧ್ರ (ಡ್ರಿಲ್ಲಿಂಗ್) ಕೊರೆದು ಅನಧಿಕೃತವಾಗಿ ಸ್ಫೋಟಕಗಳನ್ನು ಬಳಸಿ ಬ್ಲಾಸ್ಟಿಂಗ್ ನಡೆಸಿದೆ.
ಈ ಬ್ಲಾಸ್ಟಿಂಗ್ನಿಂದಾಗಿ ಸುತ್ತಮುತ್ತಲಿನ ಕೃಷಿ ಭೂಮಿಗೆ ಭಾರಿ ಹಾನಿ ಆಗುವುದರ ಜೊತೆಗೆ, ಸ್ಥಳೀಯ ರೈತರು ಹಾಗೂ ಸಾರ್ವಜನಿಕರ ಜೀವಕ್ಕೆ ತೀವ್ರ ಅಪಾಯ ಎದುರಾಗಿದೆ. ಈ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಗಾರ ಹೆಡ್ ಕಾನ್ಸ್ಟೇಬಲ್ ಪಕ್ಷಣ್ಣ ಅವರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬ್ಲಾಸ್ಟಿಂಗ್ ಮಾಹಿತಿ ತಿಳಿದು ಹೈವೇ ಮೊಬೈಲ್ ವಾಹನದ ಎಎಸ್ಐ ಶಿವಪ್ರಸಾದ್ ಎಚ್.ಆರ್., ಎಚ್.ಸಿ ವಸಂತ ರೆಡ್ಡಿ ಹಾಗೂ ದೂರುದಾರರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಯಾವುದೇ ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಬ್ಲಾಸ್ಟಿಂಗ್ ಮಾಡುತ್ತಿದ್ದ ಕೃತ್ಯ ಬಯಲಾಗಿದೆ.ಆಂಧ್ರ ಆರೋಪಿಗಳ ವಿರುದ್ಧ ದೂರು:
- - -