ಎಂ. ಎ. ಗೋಪಾಲಸ್ವಾಮಿ ಅವರ ೫೫ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದಂತಹ ಆರೋಗ್ಯ ಮೇಳ ಅಂಗಾಂಗಗಳ ದಾನ ಶಿಬಿರದಲ್ಲಿ ಮಾತನಾಡಿದರು. ರಾಜಕಾರಣಿಗಳು ತಾವು ಏನು ಮಾಡಿಕೊಳ್ಳುತ್ತೇವೆ ಎನ್ನುವುದು ದೊಡ್ಡತನವಲ್ಲ ಕ್ಷೇತ್ರದ ಜನತೆಗೆ ಏನು ಮಾಡುತ್ತೇವೆ ಎಂಬುದು ಆ ಕ್ಷೇತ್ರದ ಜನತೆ ನೋಡುತ್ತಿದ್ದಾರೆ. ಇವುಗಳನ್ನೆಲ್ಲ ಮನಗೊಂಡು ರಾಜಕಾರಣಿಗಳು ಕೆಲಸ ಮಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಂತಹ ಉತ್ಸಾಹಿ ರಾಜಕಾರಣಿಗಳನ್ನು ಈ ಕ್ಷೇತ್ರದ ಜನ ಬೆಳೆಸಿ ಹರಸಿ. ಇದರಿಂದ ನಿಮ್ಮ ಕ್ಷೇತ್ರದ ಅಭಿವೃದ್ಧಿಗೂ ಕೂಡ ಸಹಕಾರಿಯಾಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಉತ್ಸಾಹಿ ಯುವ ರಾಜಕಾರಣಿಗಳನ್ನು ಬೆಳೆಸುವುದು ಈ ಕ್ಷೇತ್ರದ ಜನತೆಯ ಆಶೀರ್ವಾದವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ನಡೆದ ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ಅವರ ೫೫ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದಂತಹ ಆರೋಗ್ಯ ಮೇಳ ಅಂಗಾಂಗಗಳ ದಾನ ಶಿಬಿರದಲ್ಲಿ ಮಾತನಾಡಿದರು. ರಾಜಕಾರಣಿಗಳು ತಾವು ಏನು ಮಾಡಿಕೊಳ್ಳುತ್ತೇವೆ ಎನ್ನುವುದು ದೊಡ್ಡತನವಲ್ಲ ಕ್ಷೇತ್ರದ ಜನತೆಗೆ ಏನು ಮಾಡುತ್ತೇವೆ ಎಂಬುದು ಆ ಕ್ಷೇತ್ರದ ಜನತೆ ನೋಡುತ್ತಿದ್ದಾರೆ. ಇವುಗಳನ್ನೆಲ್ಲ ಮನಗೊಂಡು ರಾಜಕಾರಣಿಗಳು ಕೆಲಸ ಮಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಂತಹ ಉತ್ಸಾಹಿ ರಾಜಕಾರಣಿಗಳನ್ನು ಈ ಕ್ಷೇತ್ರದ ಜನ ಬೆಳೆಸಿ ಹರಸಿ. ಇದರಿಂದ ನಿಮ್ಮ ಕ್ಷೇತ್ರದ ಅಭಿವೃದ್ಧಿಗೂ ಕೂಡ ಸಹಕಾರಿಯಾಗುತ್ತದೆ. ಬರೀ ರಾಜಕೀಯದಲ್ಲಿ ತೊಡಗುವುದು ದೊಡ್ಡದಲ್ಲ, ಸಾರ್ವಜನಿಕರ ಆಗುಹೋಗುಗಳಿಗೆ ಸ್ಪಂದಿಸುವುದೇ ಒಬ್ಬ ನಿಷ್ಠಾವಂತ ರಾಜಕಾರಣಿಯ ಕರ್ತವ್ಯವಾಗಿದೆ. ನಿಷ್ಠಾವಂತ ರಾಜಕಾರಣಿಗಳನ್ನು ಈ ಕ್ಷೇತ್ರದ ಜನತೆ ಎಂದಿಗೂ ಕೂಡ ಕೈ ಬಿಡುವ ಕೆಲಸ ಮಾಡಬಾರದು. ಇದರಿಂದ ಕ್ಷೇತ್ರದ ಕೆಲಸ ಬಹಳ ಹಿಂದೆ ಉಳಿಯುತ್ತವೆ ಎಂದರು.
ಸಂಸದ ಶ್ರೇಯಸ್ ಪಟೇಲ್ ಅವರು ಕ್ಷೇತ್ರದ ಕೆಲಸಕ್ಕಾಗಿ ಎಲ್ಲಾ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆ ಸಹಕಾರದಲ್ಲಿ ತೊಡಗಿರುತ್ತಾರೆ. ಆದಕಾರಣ ಕ್ಷೇತ್ರದ ಜನತೆ ಇಂತಹ ಅಭ್ಯರ್ಥಿಗಳಿಗೆ ಎಂದಿಗೂ ಕೂಡ ಸೋಲಿನ ಊಟವನ್ನು ಉಣ ಬಡಿಸದೆ ಗೆಲುವಿನ ಊಟಕ್ಕೆ ಸಹಕಾರ ನೀಡುವುದು ಉತ್ತಮವಾಗಿದೆ ಎಂದರು.ಇದೇ ಸಂದರ್ಭದಲ್ಲಿ ನೂರಕ್ಕೂ ಅಧಿಕ ಜನ ತಮ್ಮ ಅಂಗಾಂಗಗಳನ್ನು ಶ್ರೀ ಆದಿಚುಂಚನಗಿರಿ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದಾನ ಮಾಡುವುದಾಗಿ ನೋಂದಣಿಯನ್ನು ಸಹ ಮಾಡಿದರು.ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಹಾಸನದ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶಕ್ತಿಮಠದ ಬಸವೇಶ್ವರ ಚೈತನ್ಯ ಮಹಾ ಸ್ವಾಮೀಜಿ, ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ತಾಲೂಕು ಗ್ಯಾರಂಟಿ ಯೋಜನಾ ಅನು?ನ ಸಮಿತಿಯ ಅಧ್ಯಕ್ಷ ಪ್ರಕಾಶ್ ಗೌಡ, ಕಾಂಗ್ರೆಸ್ ಮುಖಂಡರುಗಳಾದ ಅಣತಿ ಆನಂದ್ ಇನ್ನು ಮುಂತಾದವರು ಹಾಜರಿದ್ದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.