ಬೆಳಗಾವಿ ಜಿಲ್ಲೆಯ ತಾಲೂಕಿನ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಆನೆ ತುಳಿತಕ್ಕೆ ಮಾವುತ ಸಾವು

KannadaprabhaNewsNetwork |  
Published : Dec 24, 2024, 12:47 AM ISTUpdated : Dec 24, 2024, 10:18 AM IST
ಧೃವ ಆನೆ | Kannada Prabha

ಸಾರಾಂಶ

ಆನೆ ತುಳಿತಕ್ಕೆ ಮಾವುತನ‌ ಸಹಾಯಕ ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ತಾಲೂಕಿನ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದಿದೆ.

  ರಾಯಬಾಗ : ಆನೆ ತುಳಿತಕ್ಕೆ ಮಾವುತನ‌ ಸಹಾಯಕ ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ತಾಲೂಕಿನ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದಿದೆ.ಅಲಖನೂರ ಗ್ರಾಮದ ಧರೆಪ್ಪ ಭೇವನೂರ (32) ಮೃತ ಮಾವುತ. 

ಧೃವ ಎಂಬ ಆನೆ ಮಾವುತನ ಸಹಾಯಕನಾಗಿದ್ದ. ಧರೆಪ್ಪ ಬೆಳಗ್ಗೆ 7 ಗಂಟೆ ಸುಮಾರಿಗೆ ಆನೆಗೆ ಮೇವು ಹಾಕಲು ಹೋದಾಗ ಮದವೇರಿದ್ದ 21 ವರ್ಷದ ಧೃವ ಆನೆ ಧರೆಪ್ಪನ ಮೇಲೆ ದಾಳಿ ಮಾಡಿದ್ದು, ಆನೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. 

ಮೃತ ಧರೆಪ್ಪ ಭೇವನೂರಗೆ 10 ದಿನಗಳ ಹಿಂದೆ ಗಂಡ ಮಗು ಜನಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌