ವಯಸ್ಸಾದರೂ ಮದುವೆಗೆ ಕನ್ಯೆ ಸಿಗದಿದ್ದಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ

KannadaprabhaNewsNetwork |  
Published : Feb 21, 2025, 11:45 PM ISTUpdated : Feb 22, 2025, 10:41 AM IST
deadbody

ಸಾರಾಂಶ

ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಇವರು ಕಳೆದ 10- 12 ವರ್ಷಗಳಿಂದ ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರು. ಆದರೆ, ಇದುವರೆಗೆ ಎಲ್ಲಿಯೂ ಕನ್ಯೆ ಸಿಕ್ಕಿರಲಿಲ್ಲ.

ಹಾವೇರಿ: ವಯಸ್ಸಾದರೂ ಮದುವೆಗೆ ಕನ್ಯೆ ಸಿಗದ್ದರಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ನಡೆದಿದೆ.ಪ್ರಕಾಶ ಬಸವರಾಜ ಹೂಗಾರ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಇವರು ಕಳೆದ 10- 12 ವರ್ಷಗಳಿಂದ ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರು. ಆದರೆ, ಇದುವರೆಗೆ ಎಲ್ಲಿಯೂ ಕನ್ಯೆ ಸಿಕ್ಕಿರಲಿಲ್ಲ. 

ಅದೇ ಚಿಂತೆಯಲ್ಲಿ ಕೊರಗುತ್ತಿದ್ದ ಈತ ಗುರುವಾರ ಮನೆಯ ಬೆಡ್‌ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಒದ್ದಾಡುತ್ತಿದ್ದ. ತಕ್ಷಣ ಮನೆಯವರು ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಈತನ ತಂದೆ ಬಸವರಾಜ ಹೂಗಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಾಯಿ ಸಮಿತಿ ರಚನೆ ವಿಚಾರ: ನಗರಸಭೆಯಲ್ಲಿ ಹೈಡ್ರಾಮಾ

ರಾಣಿಬೆನ್ನೂರು: ಸ್ಥಳೀಯ ನಗರಸಭೆಯಲ್ಲಿ ಗುರುವಾರ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಬಜೆಟ್ ಮಂಡಿಸಿದ ನಂತರ ಜರುಗಿದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಯ ವಿಚಾರ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.ನಗರಸಭೆ ಸ್ಥಾಯಿ ಸಮಿತಿ ರಚನೆ ವಿಷಯ ಬಂದಾಗ ಆಡಳಿತ ಪಕ್ಷದ ಸದಸ್ಯ ಹುಚ್ಚಪ್ಪ ಮೆಡ್ಲೇರಿ 9 ಜನ ಸದಸ್ಯರ ಹೆಸರು ಹೇಳಿ ವಿಷಯ ಸೂಚಿಸಿದರು. ಇದಕ್ಕೆ ನಿಂಗರಾಜ ಕೋಡಿಹಳ್ಳಿ ಅನುಮೋದಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯ ಪ್ರಕಾಶ ಬುರಡಿಕಟ್ಟಿ ಈ ವಿಷಯ ಅನುಮೋದನೆಗೆ ಸಭೆಯಲ್ಲಿ ನಿಮ್ಮ ಸದಸ್ಯರ ಸಂಖ್ಯಾಬಲ ಕಡಿಮೆಯಿರುವ್ಯದರಿಂದ ಇದಕ್ಕೆ ನಮ್ಮ ವಿರೋಧವಿದೆ. ನಾವು ಸೇರಿ ನೂತನವಾಗಿ ಹೊಸ ಸ್ಥಾಯಿ ಸಮಿತಿ ರಚನೆ ಮಾಡುತ್ತೇವೆ ಎಂದು 9 ಜನ ಬಿಜೆಪಿ ಸದಸ್ಯರ ಹೆಸರು ಸೂಚಿಸಿ ಉಪ ಸೂಚನೆ ಕೊಟ್ಟರು. ಅದಕ್ಕೆ ಪ್ರಕಾಶ ಪೂಜಾರ ಅನುಮೋದಿಸಿದರು.

ಹೈಡ್ರಾಮಾ:

ಅಧ್ಯಕ್ಷರು ತಮ್ಮ ಸಂಖ್ಯಾಬಲ ಕಡಿಮೆ ಇರುವುದು ಖಾತ್ರಿಯಾದ ಕೂಡಲೇ ಏಕಾಏಕಿ ಮೂರು ದಿನ ಬಿಟ್ಟು ಈ ವಿಷಯ ಚರ್ಚೆ ಮಾಡೋಣ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಕಾಶ ಬುರಡಿಕಟ್ಟಿ, ವಿಷಯ ಮಂಡಿಸಿದ ಬಳಿಕ ಅದನ್ನು ಮುಂದೂಡಲು ಅವಕಾಶವಿರುವುದಿಲ್ಲ. ಅಲ್ಲದೆ ಇದು ಪೌರಾಡಳಿತ ಕಾಯ್ದೆ ಪ್ರಕಾರ ಉಲ್ಲಂಘನೆ ಆಗಲಿದೆ ಎಂದು ತಿಳಿಸಿದರು. ಆದರೂ ಅಧ್ಯಕ್ಷೆ ಚಂಪಾ ಬಿಸಲಹಳ್ಳಿ ಸಭೆಯನ್ನು ಮುಂದೂಡಿ ಹೊರನಡೆದರು.

ಆಗ ಆಕ್ರೋಶಗೊಂಡ ವಿರೋಧ ಪಕ್ಷದ ಎಲ್ಲ ಸದಸ್ಯರು, ಸಭೆ ಮುಂದೂಡಲು ಅವಕಾಶವಿಲ್ಲ ಎಂದು ಆಡಳಿತ ಪಕ್ಷದವರ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಆಯುಕ್ತರಿಗೆ ತಿಳಿಸಿದರೂ ಆಯುಕ್ತರು ಮಾತ್ರ ಇದು ಅಧ್ಯಕ್ಷರ ನಿರ್ಣಯ ನಾನೇನೂ ಮಾಡಲು ಆಗಲ್ಲ ಎಂದು ಹೊರ ನಡೆದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌