ಕನ್ನಡಪ್ರಭ ವಾರ್ತೆ ಸಾವಳಗಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕನ್ನೋಳ್ಳಿ ಗ್ರಾಮದ ಸೋಮು ಅಲಿಯಾಸ್ ಸೋಮಲಿಂಗಪ್ಪ ಪಡಸಲಗಿ (30) ಸುಟ್ಟು ಕರಕಲಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಸದಾಶಿವ ಮಲಕಾರಿ ಪಡಸಲಗಿ, ಹಿರೇಪಡಸಲಗಿ ಗ್ರಾಮದ ರವಿ ಮಲ್ಲನಗೌಡ ಪಾಟೀಲ, ಚಿಕ್ಕಪಡಸಲಗಿ ಗ್ರಾಮದ ಮಹಾವೀರ ಮಾದೇವ ಧರೆಪ್ಪನವರ ಹಾಗೂ ಭೀರಪ್ಪ ಮಲ್ಲಪ್ಪ ಅಡಿಹುಡಿ, ಅಡಿಹುಡಿ ಗ್ರಾಮದ ಮಲ್ಲು ಗಿರಮಲ್ಲ ನಾವಿ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾಯಪ್ಪ ಮಲಕಾರಿ ಪಡಸಲಗಿ, ರಮೇಶ ಮಲಕಾರಿ ಪಡಸಲಗಿ, ಸಿದ್ದು ಮಲಕಾರಿ ಪಡಸಲಗಿ, ಅವಧೂತ ಪರಸಪ್ಪ ಪಡಸಲಗಿ, ಮಾಯಪ್ಪ ಶಿವಪ್ಪ ಧನಗೊಂಡ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.ಹತ್ಯೆಯಾದ ಸೋಮಲಿಂಗಪ್ಪ ಪಡಸಲಗಿ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಸದಾಶಿವ ಪಡಸಲಗಿ ಸಂಶಯ ಪಟ್ಟು ಹಾಗೂ ಈ ಇದೇ ವಿಷಯವಾಗಿ ಈ ಹಿಂದೆ ಜಗಳ ನಡೆದು ಪ್ರಕರಣ ದಾಖಲಿಸಿದ್ದರ ಸೇಡಿನಿಂದ 10 ಜನರು ಸೇರಿಕೊಂಡು ಈ ಕೊಲೆ ನಡೆಸಿದ್ದಾರೆ ಎಂದು ಮೃತನ ತಂದೆ ಸೋಮಲಿಂಗ ಪಡಸಲಗಿ ಸಾವಳಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಗಿದ್ದೇನು?:ಬಸವ ಜಯಂತಿ ದಿನವಾದ ಸೋಮವಾರ ಸೋಮು ಪಡಸಲಗಿ ಜಮಖಂಡಿಯಲ್ಲಿ ಹೊಸ ಕಾರು ಖರೀದಿಸಿ ಗ್ರಾಮಕ್ಕೆ ಮರಳುತ್ತಿದ್ದ. ಶೋರೂಂನಲ್ಲಿ ಹೊಸ ಕಾರು ಖರೀದಿ ವೇಳೆಯ ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದ. ಅನೈತಿಕ ಸಂಬಂಧ ವಿಷಯವಾಗಿ ಸೋಮು ಜೊತೆಗೆ ವೈಷಮ್ಯ ಹೊಂದಿದ್ದ ಆರೋಪಿ ಸ್ಟೇಟಸ್ ನೋಡಿ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ ಗ್ರಾಮದ ಬಸ್ ನಿಲ್ದಾಣದಲ್ಲಿ ಹೊಂಚು ಹಾಕಿ ಕಾಯ್ದು ಸಂಜೆ 7.35ರ ಸುಮಾರಿಗೆ ಕಾರು ಬರುತ್ತಿದ್ದಂತೆಯೇ ಅಡ್ಡಗಟ್ಟಿದರು. ನಂತರ ಸೋಮುನನ್ನು ಹೊರಗೆಳೆದು ಚಾಕುವಿನಿಂದ ಇರಿದು ಹತ್ಯೆ ಮಾಡಿ ರಸ್ತೆ ಮೇಲೆಯೇ ಕಾರು ಹಾಗೂ ರಕ್ತದ ಮಡುವಿನಲ್ಲಿ ಬಿದ್ದ ಸೋಮು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಸುಟ್ಟಿದ್ದಾರೆ. ಇದರಿಂದ ಸುಟ್ಟು ಅಲ್ಲಿಯೇ ಕರಕಲಾಗಿದ್ದಾನೆ.
-ಸಿದ್ದಾರ್ಥ ಗೋಯೆಲ್ ಎಸ್ಪಿ, ಬಾಗಲಕೋಟೆ