ವೀರ ವನಿತೆ ಓಬವ್ವನ ಕೆಚ್ಚೆದೆಯ ಧೈರ್ಯದಿಂದ ಚಿತ್ರದುರ್ಗದ ಕೋಟೆ ರಕ್ಷಣೆ ಆಯಿತು.
ಕನ್ನಡಪ್ರಭ ವಾರ್ತೆ ಕುಕನೂರು
ವೀರ ವನಿತೆ ಓಬವ್ವನ ಕೆಚ್ಚೆದೆಯ ಧೈರ್ಯದಿಂದ ಚಿತ್ರದುರ್ಗದ ಕೋಟೆ ರಕ್ಷಣೆ ಆಯಿತು ಎಂದು ಪ್ರಮುಖ ನಾಗಪ್ಪ ಕಲ್ಮನಿ ಹೇಳಿದರು. ಪಟ್ಟಣದ ಒನಕೆ ಓಬವ್ವ ವೃತ್ತದಲ್ಲಿ ಚಲವಾದಿ ಸಮಾಜದ ಎಲ್ಲ ಹಿರಿಯರು ಹಾಗೂ ಹಾಗೂ ಒನಕೆ ಓಬವ್ವನ ಅಭಿಮಾನಿ ಬಳಗದಿಂದ ನಡೆದ ಓಬವ್ವ ಜಯಂತಿಯಲ್ಲಿ ಮಾತನಾಡಿದರು. ಕೋಟೆಗೆ ನುಸುಳಿದ ಶತ್ರುಗಳನ್ನು ಕಂಡ ಓಬವ್ವ ಪತಿ ಊಟ ಮಾಡುವುದನ್ನು ನಿಲ್ಲಿಸಬಾರದು ಎಂದು ಸ್ವತಃ ತಾನೇ ತೆರಳಿ ಒನಕೆ ಹಿಡಿದು ರಂಧ್ರದ ಮೂಲಕ ನುಸುಳಿದ ಶತ್ರುಗಳನ್ನು ಕೊಂದಳು. ಆಕೆಯ ಧೈರ್ಯ ಮೆಚ್ಚಬೇಕು ಎಂದರು.
ವೀರ ವನಿತೆ ಓಬವ್ವನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ಕುಷ್ಟಗಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಹೇಳಿದರು.
ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ ಒನಕೆಯನ್ನೇ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಚಂಡಾಡಿ, ಕೋಟೆಯನ್ನು ರಕ್ಷಿಸಿದ ಮಹಾಮಾತೆ ನಮ್ಮ ಓಬವ್ವ. ಇಂತಹವರ ಚರಿತ್ರೆಯನ್ನು ನಾಡಿನಾಚೆಗೂ ಪಸರಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರುಈ ಸಂದರ್ಭ ಗ್ರೇಡ್ 2 ತಹಸೀಲ್ದಾರ ಮುರುಳೀಧರ ಮುಕ್ತೇದಾರ, ಶರಣಪ್ಪ ಚಲವಾದಿ, ಕೆ.ಬಿ. ಸ್ಥಾವರಮಠ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಅನೇಕರು ಇದ್ದರು.
ಪ್ರಥಮ ದರ್ಜೆ ಕಾಲೇಜು:ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓನಕೆ ಓಬವ್ವ ಜಯಂತಿಯ ಅಂಗವಾಗಿ ಒನಕೆ ಓಬವ್ವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ಈ ಸಂದರ್ಭ ಪ್ರಾಂಶುಪಾಲ ಡಾ. ಎಸ್. ವಿ. ಡಾಣಿ ಸೇರಿದಂತೆ ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು.
ಕೇಸೂರು ಗ್ರಾಪಂ:
ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಬಸವರಾಜ ಜಲಕಮಲದಿನ್ನಿ, ವೀರಯ್ಯ ಮಳಿಮಠ, ಮಲಕಾಜಗೌಡ ಕಡೇಕೊಪ್ಪ, ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.