ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹೊಸಗೊಲ್ಲರಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಗೃಹ ಪ್ರವೇಶ, ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರದ ಕಳಸಾರೋಹಣ ಮತ್ತು ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಎಲ್ಲಾ ಜಾತಿ ಜನಾಂಗದ ದೇವರೆಂದರೆ ಶನಿಮಹಾತ್ಮ ಮತ್ತು ಆಂಜನೇಯಸ್ವಾಮಿ, ಈ ದೇವರು ಜಾತ್ಯತೀತ ದೇವರಾಗಿದ್ದಾರೆ ಎಂದು ಹೇಳಿದರು.ಎಲ್ಲಾ ಭಕ್ತರಿಗೆ ಶನಿಮಾಹತ್ಮ ದೇವರ ಕೃಪಾರ್ಶಿವಾದ ಹಾಗೂ ಆಂಜನೇಯಸ್ವಾಮಿ ಶಕ್ತಿ ಬೇಕಾಗಿದ್ದು, ಈ ಉಭಯ ದೇವರುಗಳನ್ನು ಬಹುತೇಕ ಜನರು ಪ್ರಾರ್ಥಿಸುತ್ತಾರೆ. ಎರಡೂ ದೇವರುಗಳ ದೇವಸ್ಥಾನಗಳು ಹೊಸಗೊಲ್ಲರಹಳ್ಳಿಯಲ್ಲಿ ಅಕ್ಕಪಕ್ಕ ಇರುವುದು ಒಂದು ವಿಶೇಷವಾಗಿದೆ ಎಂದು ತಿಳಿಸಿದರು.
ಮನುಷ್ಯರಿಗೆ ಮಾತ್ರ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಪ್ರಾಣಿಗಳಿಗೆ ಇಂತಹ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ. ಕಾರಣ ಪ್ರಾಣಿಗಳು ಪ್ರಕೃತಿಗೆ ವಿರುದ್ಧವಾಗಿ ಯಾವತ್ತೂ ನಡೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಭಕ್ತಿ ಎನ್ನುವುದು ವ್ಯಕ್ತಿಯಲ್ಲಿ ಹಾಸುಹೊಕ್ಕಾಗಿದ್ದಾಗ ಮಾತ್ರ ದೇವರು ಒಲಿಯಲಿಕ್ಕೆ ಸಾಧ್ಯ, ಧರ್ಮದಿಂದ ಬಾಳುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ನಟರಾಜ್, ಮುಖಂಡರಾದ ಜಿ.ಪಿ.ವರದರಾಜಪ್ಪ, ಶಾಂತರಾಜಪಾಟೀಲ್, ಎಂ.ಆರ್.ಮಹೇಶ್, ಬಾಷಾಸಾಬ್ ಮಾತನಾಡಿದರು.
ಅಧ್ಯಕ್ಷತೆಯನ್ನು ನಿವೃತ್ತ ಜಿಲ್ಲಾ ಮಟ್ಟದ ಅಧಿಕಾರಿ ನರಸಿಂಹಪ್ಪ ವಹಿಸಿದ್ದರು. ಹೊನ್ನಾಳಿ ಫೋಟೋ 2ಎಚ್.ಎಲ್.ಐ2: ಹೊನ್ನಾಳಿ ಹೊಸಗೊಲ್ಲರಹಳ್ಳಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿರೇಕಲ್ಮಠದ ಸ್ವಾಮಿಜಿ ಆಶೀರ್ವಚನ ನೀಡಿದರು. ಶಾಸಕ ಶಾಂತನಗೌಡ, ಮಂಜಪ್ಪ ಇತರರು ಇದ್ದರು.