ಕೆಲ್ಲೋಡು ಕನಕ ಗುರು ಪೀಠದಲ್ಲಿ ಕನಕ ಜಯಂತ್ಯುತ್ಸವ

KannadaprabhaNewsNetwork |  
Published : Nov 04, 2025, 02:00 AM IST
ಪೋಟೋ  2hsd 2: ಈಶ್ವರಾನಂದ ಪುರಿ ಸ್ವಾಮೀಜಿ | Kannada Prabha

ಸಾರಾಂಶ

5ರಂದು ಶಾಸಕ ಬಿ ಜಿ. ಗೋವಿಂದಪ್ಪರಿಂದ ಕಬ್ಬಡಿ ಕ್ರೀಡಾಕೂಟ ಉದ್ಘಾಟನೆ । ಕೃಷಿಮೇಳ, ಸಿರಿಧಾನ್ಯ ಕೃಷಿ ವಸ್ತು ಪ್ರದರ್ಶನ

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಕೆಲ್ಲೋಡು ಕನಕ ಗುರುಪೀಠದಲ್ಲಿ ಕನಕ ಜಯಂತ್ಯುತ್ಸವ ಪ್ರಯುಕ್ತ 8ನೇ ವರ್ಷದ ಲಕ್ಷ ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನ.5 ರಿಂದ 8 ರವರೆಗೆ ನಾಲ್ಕು ದಿನಗಳ ಕಾಲ ಕೆಲ್ಲೋಡು ಕನಕ ಗುರು ಪೀಠದ ಕನಕಧಾಮದಲ್ಲಿ ಏರ್ಪಡಿಸಲಾಗಿದೆ ಎಂದು ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ತಿಳಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು, ನ.5ರಂದು ಶ್ರೀ ಗುರು ರೇವಣ ಸಿದ್ದೇಶ್ವರ ಮಠದ ಒಡೆಯರ್ ಸಾನ್ನಿಧ್ಯದಲ್ಲಿ ಧ್ವಜಾರೋಹಣ ಜರುಗಲಿದ್ದು, ನಂತರ ತಾಲೂಕು ಮಟ್ಟದ ಕಬ್ಬಡಿ ಕ್ರೀಡಾಕೂಟವನ್ನು ಶಾಸಕ ಬಿ. ಜಿ. ಗೋವಿಂದಪ್ಪ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಉಪನ್ಯಾಸಕ ನಿಸಾರ್ ಅಹಮದ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಲಿದ್ದು, ತಾಲೂಕು ಕಸಾಪ ಅಧ್ಯಕ್ಷ ಶಾಂತಪ್ಪ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಕನಕ ಹುಣ್ಣಿಮೆ ಕಾರ್ಯಕ್ರಮ ವನ್ನು ಗುಬ್ಬಿ ರಂಗಸ್ವಾಮಯ್ಯ ಉದ್ಘಾಟನೆ ಮಾಡಲಿದ್ದು ಸರೂರು ಶಾಂತೊಡೆಯರ ಸಂಪ್ರದಾಯ ಕುರಿತು ಶಿವಮೊಗ್ದ ಸಂಶೋಧಕ ಲಿಂಗದಹಳ್ಳಿ ಹಾಲಪ್ಪ ವಿಷಯ ಮಂಡಿಸಲಿದ್ದಾರೆ. ಹೊಸದುರ್ಗ ಕನಕನಾಟ್ಯ ಪ್ರಿಯ ಕಲಾಕೇಂದ್ರದಿಂದ ಕನಕ ನೃತ್ಯ ವೈಭವ, ಓಬಳಾಪುರ ದಿವ್ಯ ಜ್ಯೋತಿ ಮಹಿಳಾ ಭಜನಾ ಸಂಘದಿಂದ ಕನಕ ಸಂಕೀರ್ತನೆ ಏರ್ಪಡಿಸಲಾಗಿದೆ.

ನ.6 ರಂದು 14 ರಿಂದ 17 ವರ್ಷದ ಮಕ್ಕಳಿಗೆ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕನಕ ಕಪ್-2025ನ್ನು ಇನ್‌ಸೖಟ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ಉದ್ಘಾಟಿಸಲಿದ್ದಾರೆ.

ನ.7 ರಂದು ರಾಜ್ಯ ಮಟ್ಟದ ಭಾರಿ ಟಗರಿನ ಕಾಳಗವನ್ನು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರು ಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.

ನ.8 ರಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗ ಕೃಷಿ ಇಲಾಖೆಯ ಸಹಯೋಗದಲ್ಲಿ ಕೃಷಿಮೇಳ, ಸಿರಿಧಾನ್ಯ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟನೆ ಮಾಡಲಿದ್ದಾರೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್, ಉಪ ಕೃಷಿ ನಿರ್ದೇಶಕ ಡಾ.ಕೆ.ಎಸ್.ಶಿವಕುಮಾರ್, ಉಪ ಕೃಷಿ ನಿರ್ದೇಶಕ ಉಮೇಶ್, ತಹಸೀಲ್ದಾರ್ ತಿರುಪತಿ ಪಾಟೀಲ್, ಇಒ ಸುನಿಲ್ ಕುಮಾರ್ ಭಾಗಹಿಸಲಿದ್ದಾರೆ.

ಸಿರಿಧಾನ್ಯ ಗಳ ವಿಚಾರ ಸಂಕಿರಣದಲ್ಲಿ ವಿಜ್ಞಾನಿಗಳಾದ ಡಾ.ಶರಣಪ್ಪ ಜಂಗಂಡಿ, ಡಾ.ಬಸವೇಣಪ್ಪ, ಡಾ. ಸಂಜಯ್, ಡಾ.ಓಂಕಾರಪ್ಪ, ಡಾ.ನಂದಿನಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ನಡೆಯುವ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯ ಸರಪಳಿ, ಉತ್ಪಾದಕರು, ಮಾರುಕಟ್ಟೆ ಕಾರ್ಯಾಗಾರ ದಲ್ಲಿ ಕೖಷಿ ಕಲ್ಪ ಪೌಂಡೇಶನ್ ಸಿ.ಎಂ.ಪಾಟೀಲ್, ಕೃಷಿ ಪಂಡಿತರಾದ ಜ್ಞಾನೇಶ್ವರ್, ಹಾವೇರಿಯ ಚಂದ್ರಕಾಂತ್ ಸಂಗೂರ್ ಡಾ.ಮಂಜುನಾಥ್ ಫಕೀರಪ್ಪ ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ.

ಸಂಜೆ ಕಾಗಿನೆಲೆ ಮಹಾ ಸಂಸ್ಥಾನ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಜ್ಯದ ವಿವಿಧ ಮಠಾಧೀಶರು ಜನಪ್ರತಿನಿಧಿಗಳ, ಸಮಾಜದ ಮುಖಂಡರ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ಜರುಗಲಿದೆ.

ಕಾರ್ಯಕ್ರಮವನ್ನು ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ರಾಜ್ಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಗೋವಿಂದಪ್ಪ, ಚಿಕ್ಕ ನಾಯಕನಹಳ್ಳಿ ಸುರೇಶ್ ಬಾಬು, ತರೀಕೆರೆ ಶ್ರೀನಿವಾಸ್, ಕಡೂರು ಆನಂದ್, ಕೊಪ್ಪಳ ವಿವಿಯ ಕುಲಪತಿ ಬಿ.ಕೆ.ರವಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಹಾಸನ ಶಿವಪ್ಪ, ಬಯಲು ಸೀಮೆ ಪ್ರಾಧಿಕಾರದ ಅಧ್ಯಕ್ಷ ಮಂಜಪ್ಪ ಬಿಬಿಎಂಪಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಡಾ. ಹನುಮಂತಪ್ಪ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ