ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಧರ್ಮಸ್ಥಳ ಸಂಸ್ಥೆ ರಾಜ್ಯಾದ್ಯಂತ ಮದ್ಯವರ್ಜನ ಶಿಬಿರ ಆಯೋಜಿಸಿ ದುಶ್ಟಟ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಬೂಕನಕೆರೆ ಗ್ರಾಮದಲ್ಲಿ ನ.18 ರಿಂದ 25ರವರೆಗೆ 8 ದಿನಗಳ ಕಾಲ ಸಂಸ್ಥೆಯಿಂದ 1887 ಶಿಬಿರ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬೂಕನಕೆರೆ ಪಂಚಾಯತ್ ಸಮುದಾಯ ಭವನದಲ್ಲಿ ನ.18ರಂದು ಶಿಬಿರವನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಉದ್ಘಾಟಿಸುವರು, ಗ್ರಾಪಂ ಅಧ್ಯಕ್ಷ ಬಿ.ಆರ್.ಶ್ಯಾಂಪ್ರಸಾದ್ ಅಧ್ಯಕ್ಷತೆ ವಹಿಸುವರು. ಗ್ರಾಮ ಮುಖಂಡರಾದ ವಿಜಯರಾಮೇಗೌಡ, ಬಿ.ಟಿ.ವೆಂಕಟೇಶ್, ಬಿ.ಜವರಾಯಿಗೌಡ, ಹುಲ್ಲೇಗೌಡ, ಗ್ರಾಮಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ವಿವಿಧ ದಿನಗಳಂದು ಶಿಬಿರದಲ್ಲಿ ನಡೆಯಲಿರುವ ಗುಂಪು ಸಲಹೆ, ಕೌಟುಂಬಿಕ ಸಲಹೆ ಕಾರ್ಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕ ಬಲ್ಲೇನಹಳ್ಳಿ ಮಂಜುನಾಥ್, ಜಿ.ವಿ.ಕೆ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಧಿಕಾರಿ ಮೂಕಾಂಬಿಕ, ಹಿರಿಯ ಪತ್ರಕರ್ತ ಎಂ.ಕೆ.ಹರಿಚರಣತಿಲಕ್, ಬೂಕನಕೆರೆ ಸಮುದಾಯ ಆರೋಗ್ಯ ಕೇಂದ್ರದ ಡಾ.ಶ್ರೀನಿವಾಸ್, ಎಂ.ಸುಷ್ಮಾಕುಮಾರಿ, ಸಿ.ಆರ್.ಪಿ ಎ.ಎನ್.ಮಹೇಶ್, ಸೋಮನಹಳ್ಳಿ ಸಂಗಮೇಶ್ವರ ಪ್ರೌಢಶಾಲೆಯ ಸಹಶಿಕ್ಷಕ ಪುರುಷೋತ್ತಮ್, ವಕೀಲರಾದ ನಂದಿನಿ ಆಗಮಿಸಲಿದ್ದಾರೆ.