ತಿಪಟೂರು ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿವೇಶನ ಮತ್ತು ವಸತಿ ವಂಚಿತರಾಗಿ ಸಂಕಷ್ಟದಲ್ಲಿ ನಗರವಾಸಿಗಳು ಬದುಕುತ್ತಿದ್ದು, ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಗೂ ಸೂರು ನೀಡುತ್ತೇನೆ ಎಂದು ಹೇಳಿ ಕೋಟಿ ಕೋಟಿ ರು. ಗಳನ್ನು ವ್ಯಯ ಮಾಡುತ್ತಿದೆ, ಆದರೆ ಯಾವ ಪ್ರಯೋಜನವೂ ಇಲ್ಲ.
ತಿಪಟೂರು: ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ನೇತೃತ್ವದಲ್ಲಿ ನಗರದ ನಗರಸಭೆಯ ಮುಂಭಾಗದಲ್ಲಿ ಜೂ.23ರ ಸೋಮವಾರದಂದು ಬೆಳಗ್ಗೆ 11 ಗಂಟೆಗೆ ವಸತಿಗಾಗಿ, ವಸತಿ ರಹಿತರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಂಚಾಲಕ ಜಕ್ಕನಹಳ್ಳಿ ಮೋಹನ್ ತಿಳಿಸಿದರು.
ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರು ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿವೇಶನ ಮತ್ತು ವಸತಿ ವಂಚಿತರಾಗಿ ಸಂಕಷ್ಟದಲ್ಲಿ ನಗರವಾಸಿಗಳು ಬದುಕುತ್ತಿದ್ದು, ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಗೂ ಸೂರು ನೀಡುತ್ತೇನೆ ಎಂದು ಹೇಳಿ ಕೋಟಿ ಕೋಟಿ ರು. ಗಳನ್ನು ವ್ಯಯ ಮಾಡುತ್ತಿದೆ, ಆದರೆ ಯಾವ ಪ್ರಯೋಜನವೂ ಇಲ್ಲ. ನಗರದ ಸುತ್ತಮುತ್ತ ಆಶ್ರಯ ಯೋಜನೆಗೆ ಈಗಾಗಲೇ ನೂರಾರು ಎಕರೆ ಜಾಗ ಗುರುತಿಸಿದ್ದರೂ ಅವುಗಳು ಉಳ್ಳವರ ಪಾಲಾಗಿವೆ. ಸಂಬಂಧಪಟ್ಟ ಇಲಾಖೆ ಮತ್ತು ತಾಲೂಕು ಆಡಳಿತ ಅರ್ಹ ಫಲಾನುಭವಿಗಳಿಗೆ ವಸತಿ ಮತ್ತು ನಿವೇಶನ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದು, ನಗರಸಭೆ ಮಲತಾಯಿ ಧೋರಣೆ ಖಂಡಿಸಿ, ಜಿಲ್ಲಾ ಸಂಚಾಲಕ ಮತ್ತಿಹಳ್ಳಿ ಹರೀಶ್‌ಗೌಡ ಮಾರ್ಗದರ್ಶನದಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ವೇಳೆ ದಸಂಸ ಸಮಿತಿ ಕರಪತ್ರ ಬಿಡುಗಡೆ ಮಾಡಿತು. ತಾ ಸಂಘಟನಾ ಸಂಚಾಲಕ ಕೀರ್ತಿ, ನಗರ ಸಂಚಾಲಕ ಸತೀಶ್ ಮಾರನಗೆರೆ, ತಾಲೂಕು ಮಹಿಳಾ ಸಂಚಾಲಕಿ ಕವಿತಾ ಮಹೇಶ್, ಮಹೇಶ್, ಸತೀಶ್, ಜಯಕುಮಾರ್, ನಾಗು ಸೇರಿ ಮತ್ತಿತರರಿದ್ದರು.ತಿಪಟೂರು ತಾಲೂಕು ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆಯ ಕರಪತ್ರವನ್ನು ಪದಾಧಿಕಾರಿಗಳು ಬಿಡುಗಡೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.