ಮಹಿಳಾ ಆಯೋಗದಂತೆ ಪುರುಷ ಆಯೋಗ ರಚನೆಯಾಗಲಿ

KannadaprabhaNewsNetwork |  
Published : Nov 28, 2024, 12:33 AM IST
27ಎಚ್ಎಸ್ಎನ್14 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓಡನಹಳ್ಳಿ ನ್ಯಾನೋ ಫೂಡ್‌ ಪಾರ್ಕ್‌ ಸಿಇಓ ಅಶೋಕ್‌. | Kannada Prabha

ಸಾರಾಂಶ

ಮಹಿಳೆಯರ ಸಮಸ್ಯೆ ಹೇಳಿಕೊಳ್ಳಲು ಮಹಿಳಾ ಆಯೋಗ, ಮಕ್ಕಳ ಸಮಸ್ಯೆ ಹೇಳಲು ಮಕ್ಕಳ ಆಯೋಗ ಇರುವಂತೆ ಪುರುಷರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಂವಿಧಾನಾತ್ಮಕವಾಗಿ ಪುರುಷ ಆಯೋಗ ರಚನೆ ಆಗಲೇಬೇಕೆಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಸಿಇಒ ಅಶೋಕ್ ಒತ್ತಾಯಿಸಿದರು. ಹುಡುಗ ಮೋಸ ಮಾಡಿದರೆ ಯುವತಿ ಮಹಿಳಾ ಆಯೋ ಅಥವಾ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಾಳೆ. ಆದರೆ, ಮೋಸಕ್ಕೊಳಗಾದ ಯುವಕರ ಗೋಳನ್ನು ಕೇಳುವವರೇ ಇಲ್ಲ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಮಹಿಳೆಯರ ಸಮಸ್ಯೆ ಹೇಳಿಕೊಳ್ಳಲು ಮಹಿಳಾ ಆಯೋಗ, ಮಕ್ಕಳ ಸಮಸ್ಯೆ ಹೇಳಲು ಮಕ್ಕಳ ಆಯೋಗ ಇರುವಂತೆ ಪುರುಷರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಂವಿಧಾನಾತ್ಮಕವಾಗಿ ಪುರುಷ ಆಯೋಗ ರಚನೆ ಆಗಲೇಬೇಕೆಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಸಿಇಒ ಅಶೋಕ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಂವಿಧಾನದಲ್ಲಿ ಹುಡುಗನಿಗೆ ಒಂದು ನ್ಯಾಯ, ಹುಡುಗಿಗೆ ಒಂದು ನ್ಯಾಯ ಎಂದು ಎಲ್ಲಿಯೂ ಇಲ್ಲ. ಇಂದಿನ ದಿನಗಳಲ್ಲಿ ಪ್ರೀತಿಯ ವಿಚಾರದಲ್ಲಿ ಯುವತಿಯರಿಂದಲೇ ಹೆಚ್ಚು ಮೋಸವಾಗುತ್ತಿದೆ. ವಂಚನೆಗೊಳಗಾದ ಯುವಕರು ಆತ್ಮಹತ್ಯೆ ದಾರಿ ಹಿಡಿದ ಉದಾಹರಣೆಗಳೂ ಇವೆ. ಅದೇ ಹುಡುಗ ಮೋಸ ಮಾಡಿದರೆ ಯುವತಿ ಮಹಿಳಾ ಆಯೋ ಅಥವಾ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಾಳೆ. ಆದರೆ, ಮೋಸಕ್ಕೊಳಗಾದ ಯುವಕರ ಗೋಳನ್ನು ಕೇಳುವವರೇ ಇಲ್ಲ. ಇಂತವರಿಗೆ ತಾನು ಬೆಂಬಲ ನೀಡುವುದಾಗಿ ಧೈರ್ಯ ತುಂಬಿದರು.

ಪೊಲೀಸ್‌ ಇಲಾಖೆ, ಕೆಎಸ್‌ಆರ್‌ಟಿಸಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಹೆಚ್ಚು ಒತ್ತಡ ಇದೆ, ಕಿರುಕುಳ ಇದೆ. ಇದರಿಂದ ಅಲ್ಲಿನ ಸಿಬ್ಬಂದಿ ಕುಗ್ಗಿ ಹೋಗಿದ್ದಾರೆ. ಆದರೆ, ಅದನ್ನು ಅವರು ಎಲ್ಲಿಯೂ ಹೇಳಲಾಗುತ್ತಿಲ್ಲ. ಹಾಗಾಗಿ ಪುರುಷರಿಗೆ ನ್ಯಾಯ ಸಿಗಬೇಕಾದರೆ ಪುರುಷ ಆಯೋಗ ರಚನೆಯಾಗಬೇಕು ಎಂದು ಒತ್ತಾಯಿಸಿದರು.

-----

ಫೋಟೋ: ಅಶೋಕ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರ್ಪಕ ವಿದ್ಯುತ್‌ ಪೂರೈಸಲು ಆಗ್ರಹಿಸಿ ಪುಣಭಘಟ್ಟ ಗ್ರಿಡ್‌ಗೆ ರೈತರ ಮುತ್ತಿಗೆ
ಎಲ್ಲ ಜನಾಂಗದವರಿಗೂ ಸಮಾನ ಅವಕಾಶ: ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ