ದಾವಣಗೆರೆ ಬಿಟ್ಟು ಹಳ್ಳಿಗೆ ಕಾಲಿಡದ ಸಚಿವ: ಸಿದ್ದೇಶ್ವರ

KannadaprabhaNewsNetwork | Published : Apr 16, 2024 1:04 AM

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದರೆ ಅಭಿವೃದ್ಧಿಪಡಿಸುತ್ತೇನೆ ಎನ್ನುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ 10 ವರ್ಷ ಸಚಿವನಾಗಿ ಏನು ಮಾಡಿದರು? ಇಷ್ಟು ವರ್ಷವಾದರೂ ದಾವಣಗೆರೆ ನಗರವನ್ನು ಬಿಟ್ಟು, ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಬೇರೆ ಯಾವುದೇ ತಾಲೂಕಿಗೂ ಭೇಟಿ ನೀಡಲಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ದಾವಣಗೆರೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

- ಗೆಲ್ಲಿಸಿದರೆ ಹಳ್ಳಿಗಳ ಅಭಿವೃದ್ಧಿ ಎನ್ನೋರು 10 ವರ್ಷ ಸಚಿವರಾಗಿ ಮಾಡಿದ್ದೇನು ಎಂದು ಪ್ರಶ್ನೆ

- ಮಾಯಕೊಂಡ ಕ್ಷೇತ್ರ ತ್ಯಾವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಪರ ಪ್ರಚಾರ ಸಭೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದರೆ ಅಭಿವೃದ್ಧಿಪಡಿಸುತ್ತೇನೆ ಎನ್ನುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ 10 ವರ್ಷ ಸಚಿವನಾಗಿ ಏನು ಮಾಡಿದರು? ಇಷ್ಟು ವರ್ಷವಾದರೂ ದಾವಣಗೆರೆ ನಗರವನ್ನು ಬಿಟ್ಟು, ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಬೇರೆ ಯಾವುದೇ ತಾಲೂಕಿಗೂ ಭೇಟಿ ನೀಡಲಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಾಗ್ದಾಳಿ ನಡೆಸಿದರು.

ಮಾಯಕೊಂಡ ಕ್ಷೇತ್ರದ ತ್ಯಾವಣಿಗೆ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದರೆ, ಅಭಿವೃದ್ಧಿಪಡಿಸುತ್ತೇನೆಂದು ಈಗ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳುತ್ತಿದ್ದಾರೆ ಎಂದು ಕುಟುಕಿದರು. ಸಂಸದನಾಗಿ 20 ವರ್ಷದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ, ಈ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ 10 ವರ್ಷದಲ್ಲಿ ಜಿಲ್ಲೆಗೆ ಕೋಟ್ಯಂತರ ರು. ನೀಡಿದ್ದಾರೆ. ಕೇಂದ್ರದಿಂದ ಅನುದಾನ ತಂದು ಕೆಲಸ ಮಾಡಿದ್ದೇನೆ. ನಮ್ಮ ಬಿಜೆಪಿ ಸರ್ಕಾರ ರಾಜ್ಯದಲ್ಲಿದ್ದಾಗಲೂ ನಾವು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ನಗರ, ಗ್ರಾಮೀಣ ಪ್ರದೇಶವೆನ್ನದೇ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇವೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗೆಲ್ಲುವುದು ಶತಃ ಸಿದ್ಧ. ಇದನ್ನು ಈಗಾಗಲೇ ಕ್ಷೇತ್ರದ ಜನರೇ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

- - -

ಬಾಕ್ಸ್‌ ಕಾಂಗ್ರೆಸ್ ಅಧಿಕಾರದಲ್ಲಿ ಬರ: ಟೀಕೆ

ರಾಜ್ಯದಲ್ಲಿ ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬರುತ್ತೋ, ಆಗೆಲ್ಲಾ ತೀವ್ರ ಬರ ಆವರಿಸುತ್ತದೆ. ಈ ಸಲವೂ ಬರ ಬಂದಿದೆ ಎಂದು ಸಂಸದ ಸಿದ್ದೇಶ್ವರ ಟೀಕಿಸಿದರು.

ಕುಡಿಯುವ ನೀರಿಗೂ ಹಾಹಾಕಾರ ಎದ್ದಿಗೆ. ನರೇಂದ್ರ ಮೋದಿ ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ತಂದು, ₹6 ಸಾವಿರ ಹಾಗೂ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ₹4 ಸಾವಿರ ಸೇರಿಸಿ ರೈತರ ಖಾತೆಗೆ ₹6 ಸಾವಿರ ಸೇರಿ ಒಟ್ಟು ₹10 ಸಾವಿರ ನೀಡುತ್ತಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ₹4 ಸಾವಿರ ನೀಡುವುದನ್ನು ನಿಲ್ಲಿಸಿದೆ. ರೈತರಿಗೆ ಕೇಂದ್ರದ ₹6 ಸಾವಿರ ಮಾತ್ರ ಸಿಗುತ್ತಿದೆ. ರಾಜ್ಯದಲ್ಲಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವಿದೆ. ಇಂತಹ ಕಾಂಗ್ರೆಸ್ಸಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಸಲಹೆ ನೀಡಿದರು.

- - - ಕೋಟ್‌ ಮೈತ್ರಿ ಧರ್ಮಕ್ಕೆ ಬದ್ಧ, ಗೆಲುವಿನ ಗುರಿರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ನಾವು ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಮೈತ್ರಿ ಧರ್ಮ ಪಾಲಿಸಬೇಕು. ದಾವಣಗೆರೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಲು ನಾವೆಲ್ಲರೂ ಶಕ್ತಿ ಮೀರಿ ಶ್ರಮಿಸೋಣ.

- ತೇಜಸ್ವಿ ವಿ. ಪಟೇಲ್‌, ಜೆಡಿಎಸ್ ಮುಖಂಡ

- - - -15ಕೆಡಿವಿಜಿ19: ತ್ಯಾವಣಿಗೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಪರ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿದರು. -15ಕೆಡಿವಿಜಿ20: ತ್ಯಾವಣಿಗೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಸಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

Share this article