ಮಗು ಮೇಲೆ ಕೋತಿ ದಾಳಿ<bha>;</bha> ಗಂಭೀರ ಗಾಯ

KannadaprabhaNewsNetwork |  
Published : Oct 16, 2023, 01:45 AM ISTUpdated : Oct 16, 2023, 01:46 AM IST
ಪೋಟೊ15ಕೆಎಸಟಿ2: ಶಿವಾನಿ ಎಂಬ ಮಗುವಿಗೆ ಕೋತಿ ಕಚ್ಚಿ ಗಾಯಮಾಡಿರುವದು. ಹಾಗೂ ತಾಯಿಯ ಜೊತೆಗೆ ಶಿವಾನಿ ಆಸ್ಪತ್ರೆಗೆ ದಾಖಲಾಗಿರುವದು, ಮಗುವಿನ ಪೋಟೊ. | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿನ ಹಿರೇಮುಕರ್ತಿನಾಳದಲ್ಲಿ 4 ತಿಂಗಳ ಮಗುವಿನ ಮೇಲೆ ಕೋತಿಗಳು ದಾಳಿ ಮಾಡಿದ್ದು, ಗಂಭೀರ ಗಾಯವಾದ ಘಟನೆ ಶನಿವಾರ ಸಂಜೆ ನಡೆದಿದೆ.

ಕುಷ್ಟಗಿ: ತಾಲೂಕಿನ ಹಿರೇಮುಕರ್ತಿನಾಳದಲ್ಲಿ 4 ತಿಂಗಳ ಮಗುವಿನ ಮೇಲೆ ಕೋತಿಗಳು ದಾಳಿ ಮಾಡಿದ್ದು, ಗಂಭೀರ ಗಾಯವಾದ ಘಟನೆ ಶನಿವಾರ ಸಂಜೆ ನಡೆದಿದೆ.ಶಿವಾನಿ ನಿರುಪಾದಿ ವಾಲ್ಮೀಕಿ ಗಾಯಗೊಂಡ ಬಾಲಕಿ. ಮಗುವನ್ನು ತಾವರಗೇರಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.

ಸುಮಾರು ಐದು ತಿಂಗಳ ಹಿಂದೆ ಇಂತಹ ಪ್ರಕರಣ ಗ್ರಾಮದಲ್ಲಿ ನಡೆದಿತ್ತು. ಈ ಬಗ್ಗೆ ಪಿಡಿಒಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಗ್ರಾಮದಲ್ಲಿ ಬೀಡುಬಿಟ್ಟಿರುವ ಕೋತಿಗಳನ್ನು ಸ್ಥಳಾಂತರಿಸಲು, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ