ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಕುಂಚಿಟಿಗ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ತಾಯಂದಿರ ಮಹತ್ವ, ಅವರ ತ್ಯಾಗ, ಕುಟುಂಬ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಜಯಪ್ಪ ಮಾತನಾಡಿ, ಕುಟುಂಬದ ಬಲವಾಗಿರುವ ತಾಯಂದಿರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಹಿಳೆಯರ ಆತ್ಮವಿಶ್ವಾಸ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ತಾಯಿಯನ್ನು ಗೌರವಿಸುವ ಮೂಲಕ ಆರೈಕೆ ಮಾಡುವ ಮೂಲಕ ಋಣವನ್ನು ತೀರಿಸಬೇಕೇ ವಿನಹ ಶಬ್ದಗಳಿಂದ ವರ್ಣಿಸುವುದು ಅಥವಾ ವರ್ಷಕ್ಕೊಮ್ಮೆ ಸ್ಟೇಟಸ್ ಗೆ ಹಾಕುವುದು ತಾಯಿಗೆ ಗೌರವ ತರುವುದಿಲ್ಲ ಎಂದರು.ತಾಯಿ ಗೌರವದಿಂದ ಮತ್ತು ಗರ್ವದಿಂದ ನನ್ನ ಮಗ ಎಂದು ಹೇಳಿಕೊಳ್ಳುವ ದಾರಿಯಲ್ಲಿ ಸಾಗಿದಾಗ ತಾಯಂದಿರಿಗೆ ನಿಜವಾದ ಗೌರವ ಸಮರ್ಪಣೆ ಆಗುತ್ತದೆ ವಿನಃ ಮಕ್ಕಳು ದುರಭ್ಯಾಸ ದುಶ್ಚಟಕ್ಕೆ ಕಲಿತಾಗ ಅವಳ ನರಳ ಆಟ ತೊಳಲಾಟ ಅಷ್ಟಿಷ್ಟಲ್ಲ ಇದನ್ನು ಅರಿತು ಇಂದಿನ ಯುವ ಪೀಳಿಗೆ ಸರಿಯಾದ ದಾರಿಯಲ್ಲಿ ತಂದೆ ತಾಯಿಗೆ ಗೌರವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಚಂದ್ರಿಕಾ ಮಹೇಶ್ವರಪ್ಪ ಉದ್ಘಾಟಿಸಿದರು. ಉಪನ್ಯಾಸವನ್ನು ಡಾ. ಮೇಘ ಎಂ. ಕಟ್ಟೆ ನೀಡಿದರು.