ಹೊಸದುರ್ಗ: ಮಗುವಿನ ವ್ಯಕ್ತಿತ್ವ ಮತ್ತು ಚಾರಿತ್ರ್ಯ ನಿರ್ಮಾಣದಲ್ಲಿ ತಾಯಿ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಯ್ಯದ್ ಮೋಸಿನ್ ಹೇಳಿದರು.
ಶಾಲೆ ಕಾರ್ಯದರ್ಶಿ ಎಚ್.ಎನ್ ಶೇಖರಪ್ಪ ಮಾತನಾಡಿ, ಅಕ್ಷರಾಭ್ಯಾಸ ಬರೀ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿದಿನದ ಕಾರ್ಯಕ್ರಮವಾಗಬೇಕು ಎಂದರು. ಪ್ರಾಂಶುಪಾಲ ಮಂಜುನಾಥ್. ಡಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿಗೆ ಶಿಕ್ಷಣದ ಅಗತ್ಯತೆ ಕುರಿತು ತಿಳಿಸಿದರು. ತರೀಕೆರೆ ಲ್ಯಾಬ್ ಟೆಕ್ನಿಷಿಯನ್ ಅಧಿಕಾರಿ ಓಂಕಾರ ಮೂರ್ತಿ ಹದಿಹರೆಯದ ಮನಸು ವಿಚಾರ ಕುರಿತು ಉಪನ್ಯಾಸ ನೀಡಿದರು,
ಸಂಸ್ಥೆ ಖಜಾಂಚಿ ಬಸವರಾಜ್, ಧರ್ಮದರ್ಶಿ ಮಹಾಲಿಂಗಪ್ಪ, ಆಗ್ರೋ ಧನಂಜಯ್, ಮುಖ್ಯಶಿಕ್ಷಕ ಗಿರೀಶ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ, ಎಲ್‌ಕೆಜಿ, ಯುಕೆಜಿ ಮಕ್ಕಳಿಗಾಗಿ ಕ್ರೀಡೋ ಲ್ಯಾಬ್ ಪ್ರಯೋಗಾತ್ಮಕ ಕಲಿಕೆ ಪರಿಚಯ, ಸಂಪನ್ಮೂಲ ವ್ಯಕ್ತಿಗಳಿಂದ ಆರ್ಟ್ ಆ್ಯಂಡ್ ಕ್ರಾಫ್ಟ್ ಮಾಹಿತಿ, ಹದಿಹರಿಯದ ಮನಸುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಾಯಿತು.