ಉತ್ಖನನದ ವೇಳೆ ಮೂವತ್ತಕ್ಕೂ ಹೆಚ್ಚು ರಾವಣನ ವಿಗ್ರಹ ಪತ್ತೆ

KannadaprabhaNewsNetwork |  
Published : Jul 24, 2026, 02:15 AM IST
30 | Kannada Prabha

ಸಾರಾಂಶ

ಭಾರತೀಯ ಪುರಾತತ್ತ್ವ ಮತ್ತು ಸರ್ವೇಕ್ಷಣಾ ಸಂಸ್ಥೆಯು ಮಂಡ್ಯ ಜಿಲ್ಲೆಯ ಮದ್ದೂರು

ಮಹೇಂದ್ರ ದೇವನೂರುಕನ್ನಡಪ್ರಭ ವಾರ್ತೆ ಮೈಸೂರುಮುತ್ತತ್ತಿಯಿಂದ ರಾಮಯಾಣಕ್ಕೂ, ಪಾಂಡವಪುರ, ಕುಂತಿ ಬೆಟ್ಟದ ಕಾರಣಕ್ಕೆ ಮಹಾಭಾರತಕ್ಕೂ ಸಂಬಂಧವಿದೆ ಎಂದು ಹೇಳಲಾಗುವ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ರಾವಣನ 35ಕ್ಕೂ ಹೆಚ್ಚು ಮೂರ್ತಿಗಳು ಉತ್ಖನನದ ವೇಳೆ ಪತ್ತೆಯಾಗಿರುವುದು ಇತಿಹಾಸ ತಜ್ಞರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.ಭಾರತೀಯ ಪುರಾತತ್ತ್ವ ಮತ್ತು ಸರ್ವೇಕ್ಷಣಾ ಸಂಸ್ಥೆಯು ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿ ಉತ್ಕನನ ನಡೆಸಿದರೆ, ಪ್ರಾಜೀನ ಇತಿಹಾಸ ಮತ್ತು ಪುರಾತತ್ವ ತಜ್ಞ ಪ್ರೊ.ಎನ್‌.ಎಸ್‌. ರಂಗರಾಜು ಅವರು ಮಳವಳ್ಳಿ, ಬನ್ನೂರು, ಟಿ. ನರಸೀಪುರ ವ್ಯಾಪ್ತಿಯಲ್ಲಿ ನಡೆಸಿದ ಸಂಶೋಧನೆ ವೇಳೆಯೂ ರಾವಣನ ವಿಗ್ರಹಗಳು ಪತ್ತೆಯಾಗಿವೆ. ಭಾರತೀಯ ಸರ್ವೇಕ್ಷಣಾ ಇಲಾಖೆಗೂ 15 - 20 ವಿಗ್ರಹ ದೊರಕಿದರೆ, ರಂಗರಾಜು ಅವರಿಗೂ ಅಷ್ಟೇ ಪ್ರಮಾಣದ ವಿಗ್ರಹಗಳು ದೊರಕಿದೆ.ಕರ್ನಾಟಕ ಬಹುತೇಕ ಕಡೆ ಉತ್ಕನನ ಕೈಗೊಂಡಿರುವ ಭಾರತೀಯ ಪುರಾತತ್ತ್ವ ಮತ್ತು ಸರ್ವೇಕ್ಷಣಾ ಇಲಾಖೆಯು ಪ್ರಸ್ತುತ ಮಳವಳ್ಳಿ, ಮದ್ದೂರು ಹಾಗೂ ಮಂಡ್ಯದಲ್ಲಿ ಉತ್ಕನನ ಕೈಗೊಂಡಿದ್ದು, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್‌. ಪೇಟೆ ಮತ್ತು ನಾಗಮಂಗಲ ಭಾಗದಲ್ಲಿ ಉತ್ಖನನ ಆರಂಭಿಸುವ ಸಿದ್ಧತೆಯಲ್ಲಿದೆ.ಸೀತೆಯ ಮೂಗುತಿಯ ಮುತ್ತನ್ನು ಎತ್ತಿಕೊಟ್ಟ ಎಂಬ ಕಥೆಯ ಕಾರಣಕ್ಕೆ ಮುತ್ತತ್ತಿ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಅಂತೆಯೇ ಪಾಂಡವರು ವನವಾಸದಲ್ಲಿದ್ದಾಗ ಪಾಂಡವಪುರ ಭಾಗದಲ್ಲಿ ನೆಲೆಸಿದ್ದರು ಎನ್ನಲಾಗುತ್ತದೆ. ಇದೇ ಮಹಾಭಾರತದ ನಂಟಿನಿಂದ ಕುಂತಿಬೆಟ್ಟವು ಪ್ರಖ್ಯಾತಿಯಲ್ಲಿದೆ. ಅಂತೆಯೇ ಈ ಭಾಗದ ಅನೇಕ ಗ್ರಾಮಗಳಲ್ಲಿ ರಾಮಮಂದಿರಗಳಿವೆ.ಆದರೆ ಮಹಾ ಶಿವಭಕ್ತನಾದ ರಾವಣನ ವಿಗ್ರಹಗಳು ದೊರೆತಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಮತ್ತೊಂದು ಸೋಜಿಗದ ಸಂಗತಿ ಗಂಗರು, ಜೋಳರು, ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ತಲಕಾಡು ಭಾಗದಲ್ಲಿಯೂ ಅನೇಕ ರಾವಣನ ವಿಗ್ರಹಗಳು ಪತ್ತೆ ಆಗಿರುವ ಜೊತಗೆ ತಲಕಾಡು ಸಮೀಪದ ಹೆಮ್ಮಿಗೆ ಗ್ರಾಮದಲ್ಲಿ ರಾವಣೇಶ್ವರನ ದೇವಸ್ಥಾನವೂ ಇದೆ.ಈ ದೇವಸ್ಥಾನವನ್ನು ಅನೇಕರು ರಾವಣೇಶ್ವರ ಎಂದೂ, ಕೆಲವರು ರಾವಳೇಶ್ವರ ಎಂದೂ ಕರೆಯುತ್ತಾರೆ. ಇದೇ ಮಾದರಿಯಲ್ಲಿ ಬೃಹತ್‌ದೇವಾಲಯವೊಂದು ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿಯೂ ಪತ್ತೆಯಾಗಿದೆ. ಈಗಲೂ ಇಲ್ಲಿ ಪೂಜೆ, ವಾರ್ಷಿಕೋತ್ಸವ ನಡೆಯುತ್ತಿದೆ.ಹೆಮ್ಮಿಗೆ ಗ್ರಾಮದ ಸ್ಥಳೀಯರು ಹೇಳುವಂತೆ ಸುಮಾರು 46 ವರ್ಷಗಳ ಹಿಂದೆಯೇ ರಾವಣೇಶ್ವರನ ಜಾತ್ರೆ ನಿಂತು ಹೋಗಿದೆ. ಮುಂದಿನ ವರ್ಷದಿಂದ ಮತ್ತೆ ಆರಂಭಿಸಬೇಕು ಎಂಬ ಉತ್ಸಾಹದಲ್ಲಿ ಗ್ರಾಮಸ್ಥರು ಇದ್ದಾರೆ.ಒಟ್ಟಾರೆಯಾಗಿ ಇತಿಹಾಸಕಾರರಲ್ಲಿ ಹತ್ತು ತಲೆ ಹೊಂದಿರುವ ರಾವಣನ ಇಷ್ಟೊಂದು ವಿಗ್ರಹಗಳು ದೊರಕಿರುವುದು ಸಂಶೋಧನೆಯ ಧಿಕ್ಕನ್ನು ಬದಲಿಸುವಂತಿದೆ. ಲಂಕೆಯ ರಾವಣನ ಪ್ರಭಾವ ಭಾರತದ ಮೇಲೆ ಎಷ್ಟಿರಬಹುದು ಎಂಬ ಅಂದಾಜು ಮಾಡಬಹುದು.---ಕೋಟ್ಫೋಟೋ - 20ಎಂವೈಎಸ್‌ಮಂಡ್ಯ ಜಿಲ್ಲೆಯಲ್ಲಿ ಉತ್ಕನನ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಆಶ್ಚರ್ಯವೆಂದರೆ ಈ ಭಾಗದಲ್ಲಿ ರಾವಣನ ವಿಗ್ರಹಗಳು 15 ರಿಂದ 20ರಷ್ಟು ದೊರಕಿದೆ.- ಡಾ.ಆರ್‌.ಎನ್‌. ಕುಮಾರನ್, ಮುಖ್ಯ ಸರ್ವೇಕ್ಷಣಾಧಿಕಾರಿ, ಭಾರತೀಯ ಸರ್ವೇಕ್ಷಣಾ ಇಲಾಖೆ, ಮೈಸೂರು.---ಫೋಟೋ - 20ಎಂವೈಎಸ್‌ನಾನು ಮತ್ತು ನಮ್ಮ ಸಂಶೋಧನಾ ವಿದ್ಯಾರ್ಥಿಗಳು ಸೇರಿ ಬನ್ನೂರು, ಮಳವಳ್ಳಿ, ಟಿ. ನರಸೀಪುರ ಭಾಗದಲ್ಲಿ ನಡೆಸಿದ ಸಂಶೋಧನೆ ವೇಳೆ ರಾವಣನ ವಿಗ್ರಹಗಳು ಪತ್ತೆಯಾಗಿವೆ. ಹೆಮ್ಮಿಗೆಯಲ್ಲಿ ರಾವಳೇ(ಣೇ)ಶ್ವರನ ದೇವಸ್ಥಾನವೂ ಇದೆ. ಸಂಶೋಧನೆ ಮುಂದುವರೆದಿದೆ.- ಪ್ರೊ.ಎನ್‌.ಎಸ್‌. ರಂಗರಾಜು, ಪುರಾತತ್ವ ತಜ್ಞರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್‌ ಹೆಸರಿನಲ್ಲಿ ನಡೆಯುತ್ತಿರುವುದು ಟೂಲ್‌ಕಿಟ್‌ ರಾಜಕಾರಣ: ಸಿ.ಟಿ.ರವಿ
ಕಾಫಿನಾಡಿನಲ್ಲಿ ಶೇ.6ರಷ್ಟು ಮಾತ್ರ ಬಿತ್ತನೆ: ಒಣಗುತ್ತಿದೆ ಬಿತ್ತಿದ ಬೆಳೆ